ನವದೆಹಲಿ: 2018ನೆಯ ಸಾಲಿನಲ್ಲಿ ಕೇಂದ್ರ ನಾಗರಿಕ ಸೇವಾ ಆಯೋಗ ನಡೆಸಿದ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ರಾಜ್ಯ 24 ಅಭ್ಯರ್ಥಿಗಳು ಸೇವೆಗೆ ಅರ್ಹತೆ ಪಡೆದಿದ್ದಾರೆ.
Kanishak Kataria, AIR 1 in #UPSC final exam: It's a very surprising moment. I never expected to get the 1st rank. I thank my parents, sister & my girlfriend for the help & moral support. People will expect me to be a good administrator & that's exactly my intention. #Rajasthan pic.twitter.com/IBwhW8TJUs
— ANI (@ANI) April 5, 2019
ಆಯೋಗ ನಿನ್ನೆ ರಾತ್ರಿ ಫಲಿತಾಂಶ ಪ್ರಕಟಿಸಿದ್ದು, ಐಐಟಿ ಬಾಂಬೆ ಇಂಜಿನೀಯರ್ ಕನಿಷ್ಕ್ ಕಟಾರಿಯಾ ಪ್ರಥಮ ರ್ಯಾಂಕ್ ಪಡೆದಿದ್ದು, ಗಣಿತವನ್ನು ಐಚ್ಛಿಕ ವಿಷಯವಾಗಿ ಇವರು ಆಯ್ಕೆ ಮಾಡಿಕೊಂಡಿದ್ದರು ಎಂಬುದು ವಿಶೇಷ.
Madhya Pradesh: Family of Srushti Jayant Deshmukh, all India rank 5 and topper among women candidates in #UPSC final exam, celebrate at their residence in Bhopal. This was her first attempt at taking the exam. She says, "It was my childhood dream." pic.twitter.com/z6iKGTsGF0
— ANI (@ANI) April 5, 2019
17ನೆಯ ರ್ಯಾಂಕ್ ಪಡೆಯುವ ಮೂಲಕ ಹುಬ್ಬಳ್ಳಿಯ ರಾಹುಲ್ ಶರಣಪ್ಪ ಸಂಕನೂರ್ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರೊಂದಿಗೆ, ರಾಜ್ಯದ ಲಕ್ಷ್ಮೀ ಎನ್(45),ಆಕಾಶ್ ಎಸ್(78), ಕೃತುಕಕಾ(100), ಎಚ್.ಆರ್. ಕೌಶಿಕ್(240), ಎಚ್.ಸಿ. ವಿವೇಕ್(257), ನಿವೇದಿತಾ(303), ಗಿರೀಶ್ ಧರ್ಮರಾಜ್ ಕಲಗೊಂಡ್(307), ಮಿರ್ಜಾ ಖಾದರ್ ಬೈಗಿ(336), ಯು.ಪಿ. ತೇಜಸ್(338), ಬಿ.ಜೆ. ಹರ್ಷವರ್ಧನ್(352), ಪಕೀರೆಶ್ ಕಲ್ಲಪ್ಪ ಬಾದಾಮಿ(372), ಡಾ. ನಾಗಾರ್ಜುನ ಗೌಡ(418), ಬಿ.ವಿ. ಅಶ್ವಿಜಾ(423), ಆರ್. ಮಂಜುನಾಥ್(495), ಎಸ್. ಬ್ರಿಂದಾ(496), ಹೇಮಂತ್(612), ಎಂ.ಕೆ. ಶೃತಿ(637), ವೆಂಕಟರಾಮ್(694), ಎಚ್. ಸಂತೋಷ್(753), ಎಸ್. ಅಶೋಕ್ ಕುಮಾರ್(711), ಎನ್. ರಾಘವೇಂದ್ರ(739), ಶಶಿಕಿರಣ್(754) ಆಯ್ಕೆಯಾಗಿದ್ದಾರೆ.
ಒಟ್ಟು 25 ಅಭ್ಯರ್ಥಿಗಳ ಟಾಪರ್ಸ್ ಪಟ್ಟಿಯಲ್ಲಿ 15 ಪುರುಷ ಹಾಗೂ 10 ಮಹಿಳಾ ಅಭ್ಯರ್ಥಿಗಳಿದ್ದಾರೆ. ಈ ಬಾರಿ ಒಟ್ಟು 759 ಅಭ್ಯರ್ಥಿಗಳು ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಅದರಲ್ಲಿ 577 ಪುರುಷರು ಹಾಗೂ 182 ಮಹಿಳಾ ಅಭ್ಯರ್ಥಿಗಳಿದ್ದಾರೆ.
Discussion about this post