ಶಿವಮೊಗ್ಗ: ಕಳೆದ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ, ಹಿನ್ನಡೆ ಅನುಭವಿಸಿದ್ದ ಗೀತಾ ಶಿವರಾಜ್’ಕುಮಾರ್ ಅವರು ಈಗ ಮಲೆನಾಡಿಗೆ ಹೆಜ್ಜೆಯಿಟ್ಟಿದ್ದು, ಮೈತ್ರಿ ಪಕ್ಷದಿಂದ ಸ್ಪರ್ಧಿಸಿರುವ ತಮ್ಮ ಸಹೋದರ ಮಧು ಬಂಗಾರಪ್ಪ ಅವರ ಪರವಾಗಿ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ.
ಈಗಾಗಲೇ ಕೆಲವು ದಿನಗಳಿಂದ ಬಿಡುವಿಲ್ಲದೇ ಪ್ರಚಾರ ಕೈಗೊಂಡಿರುವ ಗೀತಾ, ಕ್ಷೇತ್ರದಾದ್ಯಂತ ಪ್ರವಾಸ ಮಾಡುತ್ತಲೇ ಇದ್ದಾರೆ.

ಸಾಗರ ವಿಧಾನಸಭಾ ಕ್ಷೇತ್ರದ ಬಸವಪುರ, ಬೆಳ್ಳೂರು, ಕೂಳವಂಕ, ಅಡ್ಡೇರಿ ದೋಬೈಲು, ಹುಲುಗಾರು ಹಾಗೂ ರಿಪ್ಪನ್ ಪೇಟೆ ಮುಂತಾದ ಕಡೆ ಮಧು ಬಂಗಾರಪ್ಪನವರ ಪರವಾಗಿ ಬಿರುಸಿನ ಪ್ರಚಾರ ನಡೆಸಿದರು.

ಇದಾದ ನಂತರ ಮನೆ ಮನೆ ಪ್ರಚಾರವನ್ನು ಕೈಗೊಂಡ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ತಮ್ಮ ಸಹೋದರನನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಇನ್ನು ನಿನ್ನೆ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ತುಪ್ಪೂರುನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಗೀತಾ ಮಾತನಾಡಿದರು.
ಆನಂತರ ಚೋರಡಿ ಗ್ರಾಮ ಸೇರಿದಂತೆ ಈ ಭಾಗದಲ್ಲಿ ನಿರಂತರ ಪ್ರಚಾರ ಕೈಗೊಂಡ ಗೀತಾ ಅವರಿಗೆ ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ವೇದ ವಿಜಯಕುಮಾರ್, ಜಿಲ್ಲಾ ಯೋಜನೆಗಳ ಅಧ್ಯಕ್ಷ ಜಿ.ಡಿ ಮಂಜುನಾಥ್ ಸಾಥ್ ನೀಡಿದ್ದರು.















