ಭದ್ರಾವತಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರಾಜನಾಥಸಿಂಗ್ ನೇತೃತ್ವದಲ್ಲಿ ಸಿದ್ದಗೊಂಡಿರುವ ದೂರದೃಷ್ಟಿಯ ಸಂಕಲ್ಪ ಹೊತ್ತು ಕಳೆದ ನಾಲ್ಕುವರೆ ವರ್ಷದ ಹಾಗು ಮುಂದಿನ ಐದು ವರ್ಷಗಳ ಸಶಕ್ತ ಭಾರತಕ್ಕಾಗಿ ಸಂಕಲ್ಪ ಪತ್ರ ಉತ್ತಮ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಹಾಗು ಬಿಜೆಪಿ ಮುಖಂಡ ಆರ್.ಕೆ. ಸಿದ್ರಾಮಣ್ಣ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಅವರು ಜಾರಿಗೆ ತಂದ ಕೃಷಿ ಸನ್ಮಾನ್ ಯೋಜನೆ ಜನಪ್ರಿಯತೆ ಗೊಂಡಿದೆ. ದೇಶದ 125 ಕೋಟಿ ಎಲ್ಲಾ ಜನಾಂಗದ ಜನಹಿತ ಪ್ರಣಾಳಿಕೆಯಲ್ಲಿ 2022 ರ ವೇಳೆಗೆ ರೈತರ ಆದಾಯ ದುಪ್ಪಟ್ಟು ಮಾಡುವ ಆಶಯವಾಗಿದೆ ಎಂದರು.
ರೈತರಿಗೆ ನೀಡಲಾಗುವ 6 ಸಾವಿರ ರೂ.ಗಳ ಸಹಾಯಧನವನ್ನು ಈಗಾಗಲೇ ಮೊದಲ ಹಂತದಲ್ಲಿ 3 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕೇಂದ್ರ ಸರಕಾರದ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಸಣ್ಣ, ಬಡ ರೈತರಿಗೆ ಆದಾಯ ಕಲ್ಪಿಸಲು ಮುಂದಾಗಿದೆ. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ನೀಡುವುದು, 1 ಲಕ್ಷ ರೂ.ವರೆವಿಗೂ ಬಡ್ಡಿರಹಿತ ಸಾಲ ನೀಡುವ ಉತ್ತಮ ಯೋಜನೆ ರೂಪಿಸಿಕೊಂಡಿರುವ ಸರಕಾರ ನೀರಾವರಿ ಹಾಗೂ ರೈತರ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಚಿಂತನೆ ನಡೆಸಿದೆ. ಆರೋಗ್ಯ ದೃಷ್ಟಿಯಿಂದ ದೇಶದಲ್ಲಿ 1.5 ಲಕ್ಷ ಆರೋಗ್ಯ ಭಾಗ್ಯ ಕೇಂದ್ರಗಳನ್ನು ಸ್ಥಾಪಿಸಬೇಕಿದೆ.
ಜಗತ್ತಿನ ಬಲಿಷ್ಟ 3 ರಾಷ್ಟ್ರಗಳಲ್ಲಿ ಭಾರತ ದೇಶವನ್ನು ಒಂದಾಗಿ ಕಾಣುವ ಕಲ್ಪನೆ ಕಲ್ಪನೆಯಲ್ಲಿ ಮುಂದಾಗಿದೆ. ಪ್ರತಿಮನೆಗಳಿಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಸಂಕಲ್ಪ ಹೊತ್ತು ಲಕ್ಷಾಂತರ ಶೌಚಾಲಯಗಳನ್ನು ನಿರ್ಮಿಸಿ ಬಯಲು ಮುಕ್ತ ರಾಷ್ಟ್ರವನ್ನಾಗಿಸಲು ಪಣತೊಟ್ಟಿದೆ. ಪ್ರಧಾನಿ ಮೋದಿಯವರು ಕೇಂದ್ರದಿಂದ ಅನೇಕ ಯೋಜನೆಗಳನ್ನು ಜಾರಿಮಾಡಿ ರಾಜ್ಯಕ್ಕೂ ವಿಸ್ತರಿಸಿದೆ. ಆದರೆ ಕೇಂದ್ರದ ಸೌಲತ್ತುಗಳನ್ನು ನೀಡಲು ರಾಜ್ಯ ಸರಕಾರ ವಿಫಲವಾಗಿದೆ. ಆಯುಷ್ಮಾನ್ ಆರೋಗ್ಯ ಯೋಜನೆ ವಿಸ್ತರಿಸುವುದು, ಜನಸಂಖ್ಯೆಗನುಗುಣವಾಗಿ ವೈದ್ಯರುಗಳ ಸಂಖ್ಯೆ ಏರಿಕೆಯಾಗಬೇಕಿದ್ದು 1.50 ಲಕ್ಷ ಆರೋಗ್ಯ ಭಾಗ್ಯ ಕೇಂದ್ರಗಳನ್ನು ತೆರೆಯುವ ಚಿಂತನೆಯನ್ನು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ ಎಂದರು.
ದೇಶದ ರಕ್ಷಣೆಗಾಗಿ ಭಯೋತ್ಪಾದಕ ಚಟುವಟಿಕೆಗಳ ನಿಯಂತ್ರಣ ಮಾಡಬೇಕಾಗಿದೆ. ಆಂತರಿಕ ಭಯೋತ್ಪಾಧನೆಯನ್ನು ನಿಗ್ರಹಿಸಲು ತಂತ್ರಜ್ಞಾನದ ಅಳವಡಿಕೆಯಿಂದ ನುಸುಳುಕೋರರನ್ನು ತಡೆಗಟ್ಟಬೇಕಾಗಿದೆ. 70 ವರ್ಷಗಳಿಂದಲೂ ಜಮ್ಮು-ಕಾಶ್ಮೀರದಲ್ಲಿ ಆಚರಣೆಯಲ್ಲಿರುವ 370, ಹಾಗೂ 35 ನೇ ಸಂವಿಧಾನದ ತಿದ್ದು ಪಡಿಯನ್ನು ರದ್ದುಪಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗಿದೆ. ಇಲ್ಲಿಯವರೆವಿಗೂ ಭ್ರಷ್ಟಾಚಾರ ರಹಿತ ಸರಕಾರವೆಂದರೆ ಕೇವಲ ಭಾರತೀಯ ಜನತಾ ಪಕ್ಷ ಮಾತ್ರ. ಭಯೋತ್ಪಾದನೆ ಕೇವಲ ಭಾರತ ದೇಶದಲ್ಲಿ ಮಾತ್ರವಲ್ಲ. ಪ್ರಪಂಚದಲ್ಲಿ ಹರಡಿಕೊಂಡಿದೆ. ದೇಶದಲ್ಲಿ ಭಯೋತ್ಪಾದನೆ ಮಟ್ಟ ಹಾಕಲು ಪಕ್ಷ ಪಣತೊಟ್ಟಿದೆ. ಯಾವುದೇ ಕಾರಣಕ್ಕೂ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾದ್ಯವಿಲ್ಲ. ಅಧಿಕಾರಕ್ಕೆ ಬಂದರೂ ರಾಹುಲ್ ಗಾಂದಿ ಪ್ರಧಾನಿಯಾಗುವುದಿಲ್ಲ ಎಂದು ಭವಿಷ್ಯ ನುಡಿದರು.
ರಾಜಕೀಯವಾಗಿ ರಾಷ್ಟ್ರೀಯ ವಿಚಾರದಲ್ಲಿ ರಾಷ್ಟ್ರದ ಪರವಾಗಿ ನಿಲ್ಲುವ ಕ್ಷೇತ್ರದ ಮತದಾರರು ಈ ಬಾರಿ ಬಿಜೆಪಿ ಲೋಕಸಭಾ ಅಭ್ಯರ್ಥಿ ಬಿ,ವೈ ರಾಘವೇಂದ್ರ ಅವರಿಗೆ ಹೆಚ್ಚಿನ ಮತ ನೀಡುವ ಮೂಲಕ ದೇಶದ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಬಿಜೆಪಿಗೆ ಮತ ಹಾಕುವಂತೆ ಮನವಿ ಮಾಡಿದರು.
ಪಕ್ಷದ ಮಾಧ್ಯಮ ಪ್ರಮುಖ್ ಮಧುಸೂಧನ್, ಪ್ರಭಾರಿ ವಿ. ಕದಿರೇಶ್, ನಗರ ಅಧ್ಯಕ್ಷ ಜಿ. ಆನಂದಕುಮಾರ್, ಗ್ರಾಮಾಂತರ ಅಧ್ಯಕ್ಷ ಮಂಗೋಟೆ ರುದ್ರೇಶ್, ಮುಖಂಡರಾದ ಧರ್ಮಪ್ರಸಾದ್, ಬಿ.ಕೆ. ಶ್ರೀನಾಥ್, ಪ್ರವೀಣ್ ಪಟೇಲ್, ಸುನಿತಾ, ರಾಮಲಿಂಗಯ್ಯ, ಎನ್. ವಿಶ್ವನಾಥರಾವ್, ಪ್ರಭಾಕರ್, ಹೇಮಾವತಿ, ಆರ್.ಎಸ್. ಶೋಭ, ತೋಪೇಗೌಡ ಮುಂತಾದವರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post