ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಎಂದರೆ ಇಡಿಯ ವಿಶ್ವವೇ ಒಮ್ಮೆ ತಿರುಗಿ ನೋಡುವಂತಾಗಿದೆ. ಆದರೆ, ಇಂತಹ ಪ್ರಭಾವಿ ವ್ಯಕ್ತಿಗೆ ಅವರ ತಾಯಿ ಈಗಲೇ ಭೇಟಿಯಾದಾಗಲೆಲ್ಲಾ 150 ರೂ. ಹಣ ಕೊಡುತ್ತಾರೆ.
ಹೌದು… ಈ ವಿಚಾರವನ್ನು ನಟ ಅಕ್ಷಯ್ ಕುಮಾರ್ ಅವರ ಜೊತೆಯ ನಡೆದ ಮನದಾಳದ ಸಂದರ್ಶನದಲ್ಲಿ ಸ್ವತಃ ಮೋದಿಯವರೇ ಹೇಳಿಕೊಂಡಿದ್ದಾರೆ.
ನನ್ನ ಅಮ್ಮ ನನಗೆ ಮೊದಲಿನಿಂದಲೂ ಹಣ ನೀಡುತ್ತಾರೆ. ಈಗಲೂ ಆಕೆಯನ್ನು ನಾನು ಭೇಟಿಯಾದಾಗಲೆಲ್ಲಾ ನನ್ನ ಕೈಗೆ 150 ರೂಪಾಯಿ ಇಟ್ಟು ಹರಸುತ್ತಾರೆ. ಆದರೆ, ನನ್ನಿಂದ ಮಾತ್ರ ಏನನ್ನೂ ಆಕೆ ಅಪೇಕ್ಷಿಸಿದ್ದೇ ಇಲ್ಲ ಎಂಬ ಮಾತನ್ನು ಭಾವನಾತ್ಮಕವಾಗಿ ಮೋದಿ ಹೇಳಿದ್ದಾರೆ.
A fruit I enjoy eating… pic.twitter.com/JqnGzi6Np5
— Chowkidar Narendra Modi (@narendramodi) April 25, 2019
ನನ್ನ ತಾಯಿ ನನ್ನಿಂದ ಏನನ್ನೂ ಅಪೇಕ್ಷಿಸುವುದಿಲ್ಲ ಎಂದರೆ ಅದರ ಅರ್ಥ ಪ್ರೀತಿ ಇಲ್ಲವೆಂದಲ್ಲ. ಬದಲಾಗಿ, ನಾನು ಇಡೀ ದೇಶವನ್ನೇ ನನ್ನ ಕುಟುಂಬವೆಂದು ಭಾವಿಸಿದವನು. ನಾನು ಮುಖ್ಯಮಂತ್ರಿಯಾಗಿದ್ದಾಗಲೂ ಕೂಡ ನನ್ನ ಕುಟುಂಬದವರಿಗೆ ಸರ್ಕಾರದಿಂದ ಯಾವ ರೀತಿಯ ಸಹಾಯವನ್ನೂ ಮಾಡಿಲ್ಲ. ಕೆಲವರೆಲ್ಲ ಮೆಡಿಕಲ್ ಅದೂ ಇದು ಅಂತ ಸರ್ಕಾರದಿಂದ ಸಹಾಯ ಪಡೆಯುತ್ತಿರುತ್ತಾರೆ. ಆದರೆ ನನ್ನ ಕುಟುಂಬದವರು ಏನನ್ನೂ ಪಡೆದಿಲ್ಲ ಎಂಬ ಸತ್ಯವನ್ನು ಬಿಚ್ಚಿಟ್ಟರು.
The many things that I wanted to do in my childhood…
(Note-politics was not even a remote consideration!) pic.twitter.com/EZcxZDNBIv
— Chowkidar Narendra Modi (@narendramodi) April 25, 2019
ಇನ್ನು, ತಮ್ಮ ದಣಿವರಿಯದ ಕೆಲಸದ ಕುರಿತಾಗಿ ಮನದ ಮಾತನ್ನು ಹೊರ ಹಾಕಿರುವ ಮೋದಿಯವರು, ಅಮೆರಿಕಾ ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾ ಕೂಡ ನನ್ನನ್ನು ಭೇಟಿಯಾದಾಗ ಮೊತ್ತ ಮೊದಲು ಇದೇ ಪ್ರಶ್ನೆಯನ್ನೇ ಕೇಳಿದ್ದರು. ಅದು ಯಾಕೆ ಹೀಗೆ ಕಡಿಮೆ ನಿದ್ದೆ ಮಾಡುತ್ತೀರಿ, ಸ್ವಲ್ಪ ಜಾಸ್ತಿ ನಿದ್ದೆ ಮಾಡಿ ಎಂದು ಸಲಹೆ ನೀಡಿದ್ದರು.
Here are details on the films I have seen, and at what stages of my life I saw them… pic.twitter.com/gGOPz2Zjv8
— Chowkidar Narendra Modi (@narendramodi) April 25, 2019
ಅದಾದ ಬಳಿಕ ಪ್ರತಿ ಬಾರಿಯೂ ಭೇಟಿಯಾದಾಗಲೆಲ್ಲ ನನ್ನ ಮಾತು ಪಾಲಿಸ್ತಿದ್ದೀರಾ? ನಿದ್ದೆ ಜಾಸ್ತಿ ಮಾಡ್ತಿದ್ದೀರೋ ಇಲ್ಲವೋ? ಎಂದು ಅವರು ಕೇಳುತ್ತಿದ್ದರು. ನನ್ನ ಜೈವಿಕ ಚಕ್ರವೇ ಈಗ ಬದಲಾಗಿಬಿಟ್ಟಿದೆ. 3-4 ಗಂಟೆಯೊಳಗೆ ನಿದ್ದೆ ಮುಗಿದು ಬಿಡುತ್ತದೆ. ನಿವೃತ್ತಿ ಅನಂತರ ನಿದ್ದೆ ಜಾಸ್ತಿ ಮಾಡೋದು ಹೇಗೆ ಅಂತ ಮೊದಲು ಯೋಚಿಸುತ್ತೇನೆ ಎಂದಿದ್ದಾರೆ.
Retirement…what is that? pic.twitter.com/3Kas3N0VTG
— Chowkidar Narendra Modi (@narendramodi) April 25, 2019







Discussion about this post