ಹಾಸನ: ತಾಯಿಯೋರ್ವಳು ಎದೆ ಹಾಲು ಕುಡಿಸುವಾಗ ಹಾಲು ನೆತ್ತಿಗೇರಿ ಒಂದೂವರೆ ವರ್ಷದ ಮಗುವೊಂದು ಸಾವನ್ನಪ್ಪಿರುವ ದುರ್ಘಟನೆ ನಿನ್ನೆ ನಡೆದಿದೆ.
ಸಕಲೇಶಪುರ ತಾಲೂಕಿನ ಅರೆಕೆರೆ ಗ್ರಾಮದ ರಂಜಿತಾ ಹಾಗೂ ಲೋಕೇಶ್ ದಂಪತಿಯ ಗಂಡು ಮಗು ಮೃತ ಶಿಶು.
ತಾಯಿ ಮಗುವಿಗೆ ಎದೆ ಹಾಲು ಕುಡಿಸುವ ವೇಳೆ ಹಾಲು ನೆತ್ತಿಗೇರಿ, ಉಸಿರಾಡಲು ಕಷ್ಟಪಡುತ್ತಿತ್ತು. ಇದರಿಂದ ಅಸ್ವಸ್ಥಗೊಂಡ ಮಗುವನ್ನು ತತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ ಎಂದು ವರದಿಯಾಗಿದೆ.
















