ಗೋಪಾಲಪೋರ್: ಗಡಿಯಲ್ಲಿ ಇಂದು ಮುಂಜಾನೆ ಭಾರತೀಯ ಸೇನಾ ಪಡೆಗಳು ನಡೆಸಿದ ಎನ್’ಕೌಂಟರ್’ಗೆ ಇಬ್ಬರು ಉಗ್ರರು ಸತ್ತಿದ್ದು, ಸೇನಾ ಕಾರ್ಯಾಚರಣೆ ಮುಂದುವರೆದಿದೆ.
ಕೆಲವು ಭಯೋತ್ಪಾದಕರು ಈ ಪ್ರದೇಶದಲ್ಲಿ ಅಡಗಿಕೊಂಡಿದ್ದ ಭದ್ರತಾ ಪಡೆಗಳು ನಿರ್ದಿಷ್ಟ ಮಾಹಿತಿಗಳನ್ನು ಪಡೆದುಕೊಂಡ ನಂತರ ಗೋಪಾಲಪೋರ್ ಏರಿಯಾದಲ್ಲಿ ಇಂದು ನಿನ್ನೆ ರಾತ್ರಿಯಿಂದಲೇ ಸೇನೆ ಕಾರ್ಯಾಚರಣೆ ನಡೆಸುತ್ತಿತ್ತು. ಇಂದು ಮುಂಜಾನೆ ಕೋರ್ಡಾನ್ ಸರ್ಚ್ ನಡೆಸಿದ ಸೇನೆ, ಇಬ್ಬರು ಉಗ್ರರನ್ನು ಎನ್’ಕೌಂಟರ್ ಮಾಡುವಲ್ಲಿ ಯಶಸ್ವಿಯಾಗಿದೆ.

















