ವುಡ್’ಬರಿ: 2014ರ ಲೋಕಸಭಾ ಚುನಾವಣಾ ಫಲಿತಾಂಶ ವಿಶ್ವದ ಬಹುತೇಕ ರಾಷ್ಟ್ರಗಳ ಗಮನ ಸೆಳೆದಿತ್ತು. ಆದರೆ, ಅದನ್ನು ಮೀರಿಸಿದ 2019ರ ಈಗಿನ ಚುನಾವಣೆ ಎಲ್ಲ ಇತಿಹಾಸಗಳನ್ನು ಧೂಳಿಪಟ ಮಾಡುವ ರೀತಿಯಲ್ಲಿ ಕ್ರೇಜ್ ಹುಟ್ಟು ಹಾಕಿದೆ.
ಮಾತ್ರವಲ್ಲ, ಇಡಿಯ ವಿಶ್ವದಲ್ಲೇ ತೀವ್ರ ಕುತೂಹಲ ಮೂಡಿಸಿದ್ದು, ಮೋದಿಯವರೇ ಮತ್ತೆ ಪ್ರಧಾನಿಯಾಗಲಿ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಇದು ಸಾಕಾರವಾಗುವುದೇ ಎಂಬುದನ್ನು ತಿಳಿಯಲು ಇನ್ನೊಂದು ದಿನ ಮಾತ್ರ ಬಾಕಿಯಿದೆ.
ಇದರ ನಡುವೆಯೇ, ಈ ಬಾರಿಯ ಭಾರತದ ಚುನಾವಣೆ ಅಮೆರಿಕಾದಲ್ಲೂ ಸಹ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿದೆ. ಇದರೊಂದಿಗೆ ವಿಶ್ವದ ಇತಿಹಾಸದಲ್ಲಿ ಒಂದು ಮಹತ್ವದ ಘಟನೆಯೊಂದಕ್ಕೆ ಸಾಕ್ಷಿಯಾಗಲಿದೆ.
ಹೌದು… ನಾಳೆ ಪ್ರಕಟವಾಗಲಿರುವ ಭಾರತ ಲೋಕಸಭಾ ಚುನಾವಣೆಯ ನೇರ ಫಲಿತಾಂಶ ಅಮೆರಿಕಾದ ವುಡ್’ಬರಿ ನಗರದಲ್ಲಿನ ಚಿತ್ರಮಂದಿರವೊಂದರಲ್ಲಿ ಬಿತ್ತರಗೊಳ್ಳಲಿದೆ.
ವುಡ್’ಬರಿ 10 ಥಿಯೇಟರ್’ನಲ್ಲಿ ಸ್ಥಳೀಯ ಕಾಲಮಾನದ ಅನ್ವಯ ಮೇ 22ರ ರಾತ್ರಿ 9.30ರಿಂದ ನೇರ ಪ್ರಸಾರ ಆರಂಭವಾಗಲಿದೆ.
ಜಡ್ಜ್’ಮೆಂಟ್ ಡೇ ಎಂಬ ಹೆಸರಿನ ಅಡಿಯಲ್ಲಿ ಈ ನೇರಪ್ರಸಾರ ನಡೆಯಲಿದ್ದು, 10 ಡಾಲರ್ ಪ್ರವೇಶ ದರ ನಿಗದಿಯಾಗಿದೆ. ಅಲ್ಲದೇ, 10 ಡಾಲರ್ ಕೊಟ್ಟು ನಮೋ ಟೀಶರ್ಟ್ ಖರೀದಿ ಮಾಡಿ ಅದನ್ನು ಧರಿಸಿ ಒಳಗೆ ಹೋಗುವುದು ಕಡ್ಡಾಯವಾಗಿದೆ.
ಒಂದು ರಾಷ್ಟ್ರದ ಚುನಾವಣಾ ಫಲಿತಾಂಶ ಅಮೆರಿಕಾದಂತಹ ದೊಡ್ಡಣ್ಣ ರಾಷ್ಟ್ರದ ಚಿತ್ರಮಂದಿರದಲ್ಲಿ ನೇರಪ್ರಸಾರವಾಗುತ್ತಿರುವುದು ಪ್ರಪಂಚದ ಇತಿಹಾಸದಲ್ಲಿ ಇದೇ ಮೊದಲು…
Discussion about this post