ಮುಂಬೈ: ಈ ಬಾರಿ ಮುಂಬೈ ಉತ್ತರದ ಜನತೆಗೆ ಸಿಹಿಸಿಹಿ ಲಡ್ಡು ಲಭ್ಯವಾಗಲಿದೆ. ಲೋಕಸಭಾ ಚುನಾವಣೆಯ ಫಲಿತಾಂಶೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಮತ್ತೆ ಆಡಳಿತ ಗದ್ದುಗೆ ಏರುವ ಬಗ್ಗೆ ಲೆಕ್ಕಾಚಾರ ಪ್ರಕಟವಾಗಿದೆ.
ಇದರಿಂದ ಪ್ರೇರಿತರಾದ ಮುಂಬೈ ಉತ್ತರ ಕ್ಷೇತ್ರದಿಂದ ಮರುಆಯ್ಕೆ ಬಯಸಿರುವ ಬಿಜೆಪಿ ಅಭ್ಯರ್ಥಿ ಗೋಪಾಲ ಶೆಟ್ಟಿ, ಈಗಾಗಲೇ 2 ಸಾವಿರ ಕೆಜಿ ಲಡ್ಡು ತಯಾರಿಸಲು ಆರ್ಡರ್ ನೀಡಿದ್ದಾರೆ.
ಲಡ್ಡು ತಯಾರಕ ಸಿಬ್ಬಂದಿ ಕೂಡ ಅಷ್ಟೇ ಸ್ಪೆಷಲ್ ಪೋಸ್ ಕೊಡಲಿದ್ದಾರೆ. ಅಂದರೆ ಅವರೆಲ್ಲರೂ ಮೋದಿ ಮುಖವಾಡ ಧರಿಸಿ ಲಡ್ಡು ತಯಾರಿಕೆಯಲ್ಲಿ ಈಗಾಗಲೇ ತೊಡಗಿದ್ದಾರೆ. ಏನೇ ಆಗಲಿ ಸಮೀಕ್ಷೆ ನಿಜವಾಗಲಿ ಎಂದು ಸಿಹಿಲಡ್ಡು ಸವಿಯುವ ಮಂದಿ ಮತ ಎಣಿಕೆ ದಿನ ಲಡ್ಡು ಮೆಲ್ಲುತ್ತಾ ಹಾರೈಸಬಹುದು.
Discussion about this post