ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಎನ್’ಡಿಎ ಭರ್ಜರಿ ಜಯ ದಾಖಲಿಸಿ, ಮತ್ತೆ ಅಧಿಕಾರದ ಗದ್ದುಗೆಯೇರುವ ಸಂಭ್ರಮದಲ್ಲಿದೆ.
ಇದರ ನಡುವೆಯೇ, ಟ್ವೀಟ್ ಮಾಡಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳಿಗೆ ಚಾಟಿ ಬೀಸಿರುವ ನಟ ಜಗ್ಗೇಶ್ ಇದು ಆಧುನಿಕ ಭಾರತ, ಕಳ್ಳ ಗುಣದವರು ಜೈಲಲ್ಲಿ ಮುಂದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಏನು ಆರ್ಭಟ! ಏನು ಅಪಾದನೆ! ಏನು ಪ್ರಶ್ನೆ! ಮೋದಿ ಕಳ್ಳಕಳ್ಳ ಎಂದು! ಈಗ ಅರಿವಾಯಿತೆ ಮೋದಿ ಕಳ್ಳಅಲ್ಲಾ! ಚೌಕಿದಾರ ಎಂದು!
ಅಪಮಾನಿಸಿ ಆನಂದಿಸಿ ನಾವು ನಮ್ಮದೆ ಎಂದು ಬೀಗಿದ ದುರ್ಯೋಧನ ಸಂತತಿಯೇ! ಬಂದ್ ಆಗಲಿ ನಿಮ್ ಬಾಯಿ!ದೇಶ ಸೇರಲಿ ವಿಶ್ವದರ್ಜೆಗೆ!
ವಿರಮಿಸಿ ದುರ್ಯೋಧನ ಗುಣದ ಸಂತತಿಯ ಬಂಧುಗಳೆ!ಇದು ಆಧುನಿಕ ಭಾರತ! ಕಳ್ಳ ಗುಣದವರು ಜೈಲಲ್ಲಿ ಮುಂದೆ! ಎಂದಿದ್ದಾರೆ.
ಇಲ್ಲಿವೆ ಜಗ್ಗೇಶ್ ಅವರ ಟ್ವೀಟ್‌ಗಳು:
2ತಿಂಗಳಿಂದ ನಾನು ಮೌನಕ್ಕೆ ಶರಣಾಗಿದ್ದೆ
ಕಾರಣ ವಿವಿಧ ಹೇಳಿಕೆ ಚಿಂತನೆ ಕಂಡು
ಯಾವುದು ಸತ್ಯ ಯಾವುದು ಮಿತ್ಯ ಅರಿವಾಗಲಿಲ್ಲಾ!
ಇಂದು ನನಗೆ ಅರಿವಾಗಿದ್ದು ಒಂದೆ ಸತ್ಯ ಜೀವಂತ!ಯಾರು ಎಷ್ಟೇ ಬೊಬ್ಬಿರಿದರು ಯಾವುದೋ ಕಾಣದ ಶಕ್ತಿ ಕಾಯುತಿದೆ ನಮ್ಮ ಎಂದು!ಈ ರಾಷ್ಟ್ರ ಆಳಿದವರು ಮೊಗಲರು! ಪೋರ್ಚುಗಲ್!ಆಂಗ್ಲರು!
ಆದರೆ ಉಳಿದದ್ದು ಭಾರತೀಯತೆ ಜೈಹಿಂದ್!— ನವರಸನಾಯಕ ಜಗ್ಗೇಶ್ (@Jaggesh2) May 23, 2019
ಏನು ಆರ್ಭಟ!ಏನುಅಪಾದನೆ!ಏನು ಪ್ರಶ್ನೆ!ಮೋದಿ ಕಳ್ಳಕಳ್ಳ ಎಂದು!ಈಗ ಅರಿವಾಯಿತೆ ಮೋದಿ ಕಳ್ಳಅಲ್ಲಾ!
ಚೌಕಿದಾರ ಎಂದು!
ಅಪಮಾನಿಸಿ ಆನಂದಿಸಿ ನಾವು ನಮ್ಮದೆ
ಎಂದು ಬೀಗಿದ ದುರ್ಯೋಧನ ಸಂತತಿಯೇ!ಬಂದ್ ಆಗಲಿ ನಿಮ್ ಬಾಯಿ!ದೇಶ ಸೇರಲಿ ವಿಶ್ವದರ್ಜೆಗೆ!
ವಿರಮಿಸಿ ದುರ್ಯೋಧನ ಗುಣದ ಸಂತತಿಯ ಬಂಧುಗಳೆ!ಇದು ಆಧುನಿಕ ಭಾರತ!
ಕಳ್ಳ ಗುಣದವರು ಜೈಲಲ್ಲಿ ಮುಂದೆ!— ನವರಸನಾಯಕ ಜಗ್ಗೇಶ್ (@Jaggesh2) May 23, 2019
ನಾಥ ಪಂಕ್ತದ ಭೈರವನ ಭಕ್ತ ಮೋದಿ ಗೆದ್ದ!
ರಾಕ್ಷಸರೆ ತಡಕಿ ನೀವು ಉಳಿವ ಜಾಗ!
ವಿಶ್ವವೇ ಮೋದಿ ಹಿಂದೆ!ಅಪಮಾನಿಸಿ ಅವಮಾನಿಸಿದ ನೀವು ನಿಮ್ಮ ಜೀವನ
ದೇವರು ಜನರೆ ಸಾಕ್ಷಿ!ಅಯೋಮಯ ನಿಮ್ಮ ಬದುಕು!ಸತ್ಯಮೇವಜಯತೆ..
ನಮ್ಮಭಾರತ ಶ್ರೀಕೃಷ್ಣ ಗೀತೆ ಭೋಧಿಸಿದ ನೆಲ!
ಇಲ್ಲಿ ಮುಂದೈತೆ ಮಾರಿ ಹಬ್ಬ!ರಾಕ್ಷಸ ಗುಣಕ್ಕೆ…
ಓಂನಮಃಶಿವಾಯ..ಕಾಲಕಾಲಾಯಃನಮಃ— ನವರಸನಾಯಕ ಜಗ್ಗೇಶ್ (@Jaggesh2) May 23, 2019
Discussion about this post