ನವದೆಹಲಿ: ಬಹುನಿರೀಕ್ಷಿತ ಲೋಕಸಭಾ ಚುನಾವಣೆಯ ಫಲಿತಾಂಶ ಬಹುತೇಕ ಹೊರಬಿದ್ದಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಬಿಜೆಪಿ/ಎನ್’ಡಿಎ ಮೈತ್ರಿಕೂಟ ಐತಿಹಾಸಿಕ ಜಯ ದಾಖಲಿಸಿ, ವಿಶ್ವವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದೆ.
ಅತ್ಯಂತ ಪ್ರಮುಖವಾಗಿ 2014ರಲ್ಲಿ 282 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಈಗ ಏಕಾಂಗಿಯಾಗಿ 302 ಸ್ಥಾನಗಳನ್ನು ಗಳಿಸುವ ಮೂಲಕ ದೇಶದಲ್ಲಿ ತನ್ನ ಬೇರನ್ನು ಗಟ್ಟಿಯಾಗಿಸಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿಯವರನ್ನು ಶತಾಯಗತಾಯ ಸೋಲಿಸಲೇಬೇಕು ಎಂಬ ಉದ್ದೇಶದಿಂದ ಪ್ರಾದೇಶಿಕ ಶಕ್ತಿಗಳೆಂಬ ಹಣೆಪಟ್ಟಿ ಹಚ್ಚಿಕೊಂಡಿರುವ ಕಿಚಡಿ ಪಕ್ಷಗಳೆಲ್ಲಾ ಒಂದಾಗಿ, ಮಹಾ ಘಟಬಂಧನ್ ಎಂಬ ಕೂಟವೊಂದನ್ನು ಮಾಡಿಕೊಂಡವು.
ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಈ ಮಹಾಘಟ ಬಂಧನ್ ನಾಯಕ(?)ರೆಲ್ಲಾ ಹಾಜರಾದರು. ನೋಡಿ ನಮ್ಮ ಶಕ್ತಿ ಎಂದು ಕೈ ಎತ್ತಿ ತೋರಿಸಿದ್ದೇ ತೋರಿಸಿದ್ದು…
ಕಾಂಗ್ರೆಸ್ ನೇತೃತ್ವದಲ್ಲಿ ಸುಮಾರು ಸಮಾಜವಾದಿ ಪಕ್ಷ, ಬಿಎಸ್’ಪಿ, ಜೆಡಿಎಸ್, ಟಿಡಿಪಿ, ರಾಷ್ಟ್ರೀಯ ಲೋಕದಳ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಎಎಪಿ ಸೇರಿದಂತೆ 12 ಪ್ರದೇಶಿಕ ಕಿಚಡಿ ಪಕ್ಷಗಳ ಮೋದಿಯನ್ನ ಶತಾಯಗತಾಶ ಸೋಲಿಸಲು ಪಣತೊಟ್ಟಿದ್ದವು.
ಆದರೆ, ಪ್ರಧಾನಿ ಮೋದಿ ಸುನಾಮಿಗೆ ಸಿಲುಕಿದ ಇವೆಲ್ಲಾ ಪುಡಿ ಪುಡಿಯಾಗಿ ಕೊಚ್ಚಿ ಹೋಗಿದ್ದು, ಅಸ್ಥಿತ್ವ ಉಳಿಸಿಕೊಳ್ಳುವ ಆತಂಕದ ಹಂತಕ್ಕೆ ಬಂದು ನಿಂತಿವೆ.
ಇನ್ನು, ಮಹಾಘಟ ಬಂಧನದ ಸದಸ್ಯರನ್ನೆಲ್ಲಾ ಒಂದಾಗಿ ಸೇರಿಸಿ ಶಕ್ತಿಪ್ರದರ್ಶನ(?) ಮಾಡಿದ್ದ ಕುಮಾರಸ್ವಾಮಿಯ ಜೆಡಿಎಸ್ ರಾಜ್ಯದಲ್ಲಿ ಒಂದೇ ಒಂದು ಕ್ಷೇತ್ರವನ್ನು ಗೆಲ್ಲುವ ಮೂಲಕ ಮರ್ಯಾದೆಯನ್ನು ಹರಾಜು ಹಾಕಿಕೊಂಡಿದ್ದರೆ, ರಾಜ್ಯ ಕಾಂಗ್ರೆಸ್ ಒಂದೇ ಕ್ಷೇತ್ರದ ಮೂಲಕ ಮರ್ಯಾದೆಯನ್ನೇ ಕಳೆದುಕೊಂಡಿದೆ.
ಈ ಪಕ್ಷಗಳನ್ನೆಲ್ಲಾ ಸೇರಿಸಿಕೊಂಡು ಪ್ರಧಾನಿಯಾಗುತ್ತೇನೆ ಎಂದು ಕನಸು ಕಾಣುತ್ತಿದ್ದ ರಾಹುಲ್ ಗಾಂಧಿಯ ಕಾಂಗ್ರೆಸ್ ಪಕ್ಷ ದೇಶದಲ್ಲಿ 50 ಸ್ಥಾನವನ್ನೂ ಸಹ ಪಡೆಯಲು ಸಾಧ್ಯವಾಗದೇ ಅಧಿಕೃತ ಪ್ರತಿಪಕ್ಷದ ಸ್ಥಾನದಿಂದಲೂ ಸಹ ವಂಚಿತವಾಗುವ ಆತಂಕದಲ್ಲಿದೆ.
Discussion about this post