ನವದೆಹಲಿ: ಬಿಹಾರದಲ್ಲಿ ಬಿಸಿಗಾಳಿಗೆ ಮಿತಿ ಮೀರಿದ ಪರಿಣಾಮ 130 ಮಂದಿ ಬಲಿಯಾಗಿರುವ ಭೀಕರ ಘಟನೆ ನಡೆದಿದೆ.
ಬಿಹಾರದಾದ್ಯಂತ ಬಿಸಿಗಾಳಿ ಹೆಚ್ಚಾಗಿರುವ ಪರಿಣಾಮ ಔರಂಗಾಬಾದ್’ನಲ್ಲಿ 60, ಗಯಾದಲ್ಲಿ 35, ನಾವಡ ಹಾಗೂ ನಲಂದಾದಲ್ಲಿ ತಲಾ 12, ಮುಂಗರ್’ನಲ್ಲಿ ಐದು, ಕೈಮುರ್ ಹಾಗೂ ವೈಶಾಲಿಯಲ್ಲಿ ತಲಾ 2, ಅರಾ ಹಾಗೂ ಸಮಸ್ತಿಪುರದಲ್ಲಿ ತಲಾ ಒಬ್ಬರು ಸೂರ್ಯನ ಶಾಖಕ್ಕೆ ಬಲಿಯಾಗಿದ್ದಾರೆ.
ಇನ್ನು, ರಾಜ್ಯದಾದ್ಯಂತ ಬಿಸಿಲ ಝಳ ವಿಪರೀತವಾಗಿರುವ ಹಿನ್ನೆಲೆಯಲ್ಲಿ ಜೂನ್ 22ರವರೆಗೂ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
















