ಮೀನಿನಂತೆ ಚುರುಕು, ಕಡಲ ಅಲೆಗಳಂತೆ ಪುಟ್ಟಿದೆಳುತ್ತಿರುವವನು, ಕಲಾಸರಸ್ವತಿಯೇ ಅಪ್ಪಿಕೂಂಡಿರುವ ಈ ಪುಟ್ಟ ಪೋರನ ಹೆಸರು ಅತೀಶ್ ಎಸ್ ಶೆಟ್ಟಿ.
2010ರ ಆಗಸ್ಟ್ 3ರಂದು ಜನಿಸಿದ ಇನ್ನು 8ರ ಪ್ರಾಯದ ಈ ಪೋರ, ವಿದ್ಯಾವಂತ, ಬುದ್ಧಿವಂತ, ಓದಿನಲ್ಲಿ ಸದಾ ಮುಂದು. ಈ ಪುಟಾಣಿ 4 ನೆಯ ತರಗತಿ ಓದುತಿದ್ದು, ಸತೀಶ್ ಶೆಟ್ಟಿ ಹಾಗೂ ತಾಯಿ ಭಾರತಿ ದಂಪತಿಗಳ ಮುದ್ದಿನ ಕೂಸು.
ಪೋಷಕರ ಮಾರ್ಗದರ್ಶನ, ಪ್ರೀತಿ ಹಾಗೂ ಧೈರ್ಯ ತುಂಬಿದ ಮಾತುಗಳು ಅವರ ಮಗನನ್ನು ಸಾಧನೆಯ ಹಾದಿಯಲ್ಲಿ ಕರೆದೊಯ್ಯುತ್ತಿದೆ.
ಅತೀಷ್ ನಟನೆಯಲ್ಲಿ ಬಹು ಆಸಕ್ತಿ ಹೊಂದಿರುವ ಬಾಲನಟ. ರಾಜ್ಯಮಟ್ಟದ ಟಿವಿ ರಿಯಾಲಿಟಿ ಶೋದಲ್ಲಿ ಜ್ಯೂನಿಯರ್ ಡ್ರಾಮ Functors ನಲ್ಲಿ ಭಾಗವಹಿಸಿ, best performer of the week ಪಡೆದಿದ್ದ ಈತ, ನಮ್ಮೆಲ್ಲರ ನೆಚ್ಚಿನ ಕಲರ್ಸ್ ಸೂಪರ್ ವಾಹಿನಿಯಲ್ಲಿ ಬರುತ್ತಿದ್ದ ಎಲ್ಲರ ಅಚ್ಚು ಮೆಚ್ಚಿನ ಮಜಾಭಾರತ ಕಾಮಿಡಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಎಲ್ಲರನ್ನೂ ನಗಿಸಿ ಕರುನಾಡ ಜನತೆಯ ಮನೆ ಮನಗಳನ್ನು ತಲುಪಿ 2 ಭಾರಿ ಕಿರೀಟ ಪಡೆದ ಕೀರ್ತಿವಂತ.
ಬಾಲ್ಯ ಸಹಜ ತುಂಟನಾಗಿರುವ ಹುಡುಗ ಚಲನಚಿತ್ರದಲ್ಲೂ ನಟಿಸಿದ್ದಾನೆ. ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕನ್ನಡ (ಅರುಣ) ಪಾತ್ರ ಮಾಡಿ ಸೈ ಎನ್ನಿಸಿಕೊಂಡಿದ್ದಾನೆ ಈ ಪೋರ.
ನಂತರ ರಾಹುಕಾಲ ಗುಳಿಗಕಾಲ ಚಿತ್ರ (ತುಳು) ಪೆಪೆಪೆರೆ ಪೆರೆರೆರೆ (ತುಳು) ಮತೊಂದು ಕನ್ನಡ ಚಲನಚಿತ್ರ ಅಂಗಿಕಮ್’ನಲ್ಲು ಅಭಿನಯ ಚಾತುರ್ಯ ಮೆರೆದಿದ್ದಾನೆ.
ಕರಾವಳಿಯ ಹೆಮ್ಮೆಯ ಕಲೆ ಯಕ್ಷಗಾನದಲ್ಲಿ ತಾಳಮದ್ದಳೆ ಮತ್ತು ಅರ್ಥಗಾರಿಕೆ ಹಾಗೂ ವೇಷಧಾರಿಯಾಗಿ ಜಾನಪದ ಕಲೆಯಲ್ಲಿ ಸಹ ಸೈ ಎನಿಸಿಕೊಂಡಿದ್ದಾನೆ.
ಅತೀಷ್ ಶೆಟ್ಟಿಯ ಇತರ ಹವ್ಯಾಸಗಳು ಈಜು, ಚಿತ್ರಕಲೆ, ನೃತ್ಯ ಸೇರಿ ಇಷ್ಟರ ತನಕ 400ಕ್ಕಿಂತಲೂ ಹೆಚ್ಚು ಸ್ಟೇಜ್ ಷೋ ನೀಡಿದ್ದಾನೆ.
ಅಲ್ಲದೇ, ಸ್ಫೂರ್ತಿ ಮತ್ತು ಯಥಾ ತಥಾ ಎಂಬ ಎರಡು ಕಿರುಚಿತ್ರಗಳಲ್ಲಿ ನಟಿಸಿರುವ ಈತ, ಕರಾಟೆಯಲ್ಲಿ ಕೂಡ ಎಲ್ಲರ ಗಮನ ಸೆಳೆದು ಕೇರಳದ ಪಾಲಾಕಾಡ್ (ರಾಷ್ಟಮಟ್ಟ) ಮಂಗಳೂರಿನಲ್ಲಿ (ಜಿಲ್ಲಾ ಮತ್ತು ರಾಜ್ಯಮಟ್ಚ) ಮತ್ತು ಬೆಂಗಳೂರು (ರಾಜ್ಯ ಮಟ್ಟ) ಗೋವಾದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾನೆ.
ಇವನಿಗೆ ಸಂದ ಪ್ರಶಸ್ತಿಗಳು ಕರ್ನಾಟಕ ಪ್ರತಿಭಾರತ್ನ, ಕರ್ನಾಟಕ ಕಲಾಶ್ರೀ, ಕರ್ನಾಟಕ ಸೌರಭರತ್ನ ಪ್ರಶಸ್ತಿಯನ್ನು ಪಡೆದ ಈ ತುಂಟ ಕಾರಂತ ಹುಟ್ಟುಹಬ್ಬ ಸಾಧನಾ ಪ್ರಶಸ್ತಿಯನ್ನು ಪಡೆದಿದ್ದಾನೆ.
ತನ್ನ ಕಲಾ ಜೀವನದಲ್ಲಿ ಇನ್ನಷ್ಟು ಸಾಧಿಸಿ ಯಶಸ್ಸು ಪಡೆದು ತನ್ನಲ್ಲಿನ ಪ್ರತಿಭೆ ಹಣತೆ ಹಚ್ಚಿದ ದೀಪದಂತೆ ಸದಾ ಬೆಳಗುತ್ತಿರಲಿ, ಆತೀಷ್ ಶೆಟ್ಟಿಯ ಮುಂದಿನ ಎಲ್ಲ ಕನಸುಗಳು ನನಸಾಗಲಿ ಎಂಬುದು ಕರ್ನಾಟಕ ಜನತೆಯ ಆಶಯ.
Discussion about this post