ನವದೆಹಲಿ: ಇಂದು ಗುರು ಪೂರ್ಣಿಮೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಉಡುಪಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ನವದೆಹಲಿಯಲ್ಲಿ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದ ವಿಚಾರವನ್ನು ಟ್ವಿಟರ್ ಮೂಲಕ ಮೋದಿಯವರು ಹಂಚಿಕೊಂಡಿದ್ದಾರೆ.
A special day made even more special.
On the blessed occasion of #GuruPurnima, had the honour of spending time with Sri Vishvesha Teertha Swamiji of the Sri Pejawara Matha, Udupi.
Learning from him and hearing his thoughts is a very humbling experience. pic.twitter.com/DcP0GtF3HG
— Narendra Modi (@narendramodi) July 16, 2019
ಇದು ನನ್ನ ಪಾಲಿಗೆ ಇನ್ನಷ್ಟು ವಿಶೇಷವಾಗಿದೆ. ಗುರುಪೂರ್ಣಿಮೆಯ ಶುಭ ಸಮಯದಲ್ಲಿ ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಗಳ ಜತೆಗೆ ಸಮಯ ಕಳೆಯುವ ಸುವರ್ಣಾವಕಾಶ ಲಭಿಸಿದೆ. ಅವರ ಮಾತುಗಳನ್ನು ಕೇಳಿ ಅವರಿಂದ ಕಲಿಯುವುದು ಸಾಕಷ್ಟಿದೆ. ಅವರ ಆಲೋಚನೆಗಳನ್ನು ಕೇಳುವುದು ಒಂದು ವಿಶೇಷ ಅನುಭವ ಎಂದು ಸಂತಸ ಹಂಚಿಕೊಂಡಿದ್ದಾರೆ.
Discussion about this post