ಅಸ್ಸಾಂ: ರಾಜ್ಯದ ಹಲವೆಡೆ ಭಾರೀ ಪ್ರವಾಹ ಅಪ್ಪಳಿಸಿರುವ ಪರಿಣಾಮ ಸುಮಾರು 15 ಮಂದಿ ಮೃತಪಟ್ಟಿದ್ದು, 43 ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.
ರಾಜ್ಯದಲ್ಲಿರುವ 33 ಜಿಲ್ಲೆಯಲ್ಲಿ 32ರಲ್ಲಿ ಪ್ರವಾಹ ಉಂಟಾಗಿದ್ದು, ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಶೇ.90ರಷ್ಟು ಮುಳುಗಡೆಯಾಗಿದೆ.
ಪ್ರವಾಹದ ಪರಿಣಾಮ ಅಸ್ಸಾಂ ಅತ್ಯಂತ ಆತಂಕದ ಪರಿಸ್ಥಿತಿಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಕ್ಕಾಗಿ ತುರ್ತು ಪರಿಹಾರವಾಗಿ 251.55 ಕೋಟಿ ರೂ.ಗಳ ಪರಿಹಾರವನ್ನು ಎಸ್’ಡಿಆರ್’ಎಫ್’ಗೆ ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ.
Discussion about this post