ನವದೆಹಲಿ: ಪಾಕಿಸ್ಥಾನಿ ಆಕ್ರಮಿತ ಕಾಶ್ಮೀರ ಸೇರಿದಂತೆ ಇಡಿಯ ಜಮ್ಮು ಕಾಶ್ಮೀರದ ಹಕ್ಕು ಭಾರತದ್ದು ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಪ್ರತಿಪಾದನೆ ಮಾಡುವ ಮೂಲಕ ಪಾಕಿಸ್ಥಾನಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
20ನೆಯ ಕಾರ್ಗಿಲ್ ವಿಜಯೋತ್ಸವ ಆಚರಣೆ ಸಂದರ್ಭದಲ್ಲಿ ಮಾತನಾಡಿರುವ ಅವರು, ಇಡಿಯ ಕಣಿವೆ ರಾಜ್ಯದ ಸಂಪೂರ್ಣ ಹಕ್ಕು ಭಾರತದ್ದು. ಆದರೆ, ಇದನ್ನು ರಾಜಕೀಯ ಅಥವಾ ಸರ್ಕಾರ ತನ್ನ ನಿರ್ಧಾರದಿಂದ ಹೇಗೆ ಹಿಂದಕ್ಕೆ ಪಡೆಯುತ್ತದೆ ಎಂಬುದು ಮುಖ್ಯವಾಗಿದೆ. ಸರ್ಕಾರ ಕೈಗೊಳ್ಳುವ ನಿರ್ಧಾರದ ಬೆನ್ನಿಗೆ ಸೇನೆ ಇದೆ ಎಂದಿದ್ದಾರೆ.
ಪಿಒಕೆ ಹಾಗೂ ಜಮ್ಮು ಕಾಶ್ಮೀರವನ್ನು ಯಾವ ಮಾರ್ಗದಲ್ಲಿ ಭಾರತ ಹಿಂಪಡೆಯಬೇಕು ಎಂಬ ನಿರ್ಧಾರವನ್ನು ಸರ್ಕಾರ ಕೈಗೊಳ್ಳಬೇಕಿದ್ದು, ಅದು ರಾಜತಾಂತ್ರಿಕ ಮಾರ್ಗದಲ್ಲೋ ಅಥವಾ ಬೇರೆ ಮಾರ್ಗದಲ್ಲೋ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಈ ರೀತಿ ಮಾರ್ಮಿಕವಾಗಿ ಮಾತನಾಡುವ ಮೂಲಕ ಪಿಒಕೆ ಸೇರಿದಂತೆ ಇಡಿಯ ಜಮ್ಮು ಕಾಶ್ಮೀರವನ್ನು ಭಾರತದ ವಶಕ್ಕೆ ಪಡೆಯಲು ಹೋರಾಡಲು ಸೇನೆ ಸಿದ್ದವಿದೆ ಎಂಬ ಸಂದೇಶವನ್ನು ಸರ್ಕಾರಕ್ಕೆ ಸೇನಾ ಮುಖ್ಯಸ್ಥರು ರವಾನಿಸಿದ್ದಾರೆ.
Discussion about this post