ಮಂಜುನಾಥ ಚೇರ್ಕಾಡಿ. ಇವರು ನರಸಿಂಹ ಹಾಗೂ ಬೇಬಿ ಅವರ ಪುತ್ರ. 1992ರ ಸೆಪ್ಟೆಂಬರ್ 17ರಂದು ಚೇರ್ಕಾಡಿಯಲ್ಲಿ ಜನಿಸಿದ ಇವರು, ಏನೊ ಕಷ್ಟಪಟ್ಟು ಶಿಕ್ಷಣವನ್ನು ಮುಗಿಸಿ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಹಟ ಇವರದು. ಅದರೆ ಏನು ಮಾಡುವುದು ಕೈಯಲ್ಲಿ ಹಣ ಇಲ್ಲ, ಯಾರ ಸಪೋರ್ಟ್ ಕೂಡ ಇಲ್ಲ.
ಪ್ರೈಮರಿ ಪೇತ್ರಿ ಶಾಲೆಯಲ್ಲಿ ಓದಿ ಈ ಸಮಯದಲ್ಲಿ ಈತನಿಗೆ ಸಫೋರ್ಟ್ ಮಾಡಿದವರು ಸಾಧು ಸರ್, ನಂದಿನಿ ಮೇಡಂ. ತದನಂತರ ಶಾರದಾ ಪ್ರೌಢಶಾಲೆಯಲ್ಲಿ ನನ್ನ ಜೀವನ ಪಥವನ್ನು ಬದಲಾಯಿಸಿದ ಗುರು ರೇವತಿ ಮೇಡಂ.
ನನ್ನಲ್ಲಿ ಒಂದು ಪ್ರತಿಭೆ ಇದೇ ಎಂದು ಜನರಿಗೆ ಪರಿಚಯ ಮಾಡಿದೋರು ಗೀತಾ ಟೀಚರ್ ಅವರು ನಡೆಸಿ ಕೊಡುವ *ಬೇಸಿಗೆ ಶಿಬಿರ. ಅದರೆ ಛಲ ಬಿಡದ ಇವರು ಸಿನಿಮಾ ರಂಗದ ಕಡೆ ಹೆಚ್ಚು ಆಸಕ್ತಿ ಇರುವುದರಿಂದ. ಅಲ್ಲಿ ಇಲ್ಲಿ ಕೆಲಸ ಮಾಡಿ ಬಂದ ಹಣದಲ್ಲಿ ಜೀವನ ಸಾಗಿಸುತ್ತಾ ಯಾವುದಾದರೂ ಒಂದು ಸಿನಿಮಾದಲ್ಲಿ ನನ್ನ ಪ್ರತಿಭೆಯನ್ನು ತೋರಿಸಬೇಕೆಂಬುದು ಇವರ ಆಸೆಯಾಗಿತ್ತು. ಅದೇ ಸಂದರ್ಭದಲ್ಲಿ ಆರೂರು ಜಗದೀಶ್ ಅವರ ಶುಭ ವಿವಾಹ ಎಂಬ ಧಾರಾವಾಹಿ ಸೂರಾಲ್ಲಿನಲ್ಲಿ ನಡೆಯುತ್ತಿತ್ತು. ಆಗ ಆರೂರು ಪ್ರವೀಣ ಅಣ್ಣನ ಮೂಲಕ ಜಗದೀಶ್ ಅವರಲ್ಲಿ ಒಂದು ಅವಕಾಶವನ್ನು ಕೇಳಿಕೊಂಡರು. ಇವರ ಪ್ರತಿಭೆ ನೋಡಿ ಒಂದು ಚಿಕ್ಕ ಅವಕಾಶವನ್ನು ಕೊಟ್ಟರು. 2017ರಲ್ಲಿ Zee TVಯಲ್ಲಿ ಪ್ರಸಾರವಾಗುತ್ತಿರುವ ಶುಭವಿವಾಹ ಧಾರಾವಾಹಿಯಲ್ಲಿ ಮೊದಲ ಅವಕಾಶವನ್ನು ಯಶಸ್ವಿಯಾಗಿ ಪಾತ್ರವನ್ನು ನಿಭಾಯಿಸಿದರು.
ಆಮೇಲೆ ಆಭಯಸಿಂಹ ಅವಾರ್ಡ್ ವಿನ್ ಲಿಸ್ಟ್’ನಲ್ಲಿ ಪಡ್ದಾಯಿ ಅಲ್ ನಟಿಸಿದರು. ತದನಂತರ ಹಿಂದೂ ಮುಂದೆ ನೋಡಲಿಲ್ಲ. ಇನ್ನು ಸದ್ಯದಲ್ಲಿ ತೆರೆ ಕಾಣಲಿರುವ ಕನ್ನಡ ಹಿಂದಿ ಮರಾಠಿ ದೊಡ್ಡದೊಡ್ಡ ಚಲನಚಿತ್ರದಲ್ಲಿ ಮೂರು ಭಾಷೆಗಳಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಅವರ ಅವನೇ ಶ್ರೀಮನ್ನಾರಾಯಣ ಮೂವಿಯಲ್ಲಿ ಚಿಕ್ಕದಾಗಿ ಅಭಿನಯಿಸಿದ್ದಾರೆ. ಅಲ್ಲದೇ, ಸಂಹಾರ ಶಾರ್ಟ್ ಮೂವಿ ಅಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ CPL Cricket ತುಳು ಫಿಲ್ಮ್ ಅರ್ಜುನ್ ಕಾಪಿಕಾಡ್ ಅವರ ತಂಡಕ್ಕೆ ನಮ್ಮ ಬ್ರಹ್ಮಾವರದಿಂದ ಆಯ್ಕೆಯಾಗಿ ರನ್ನರ್ಸ್ ಆಗಿ ಮೂಡಿಬಂದಿದ್ದಾರೆ.
ಲೂಸ್ ಮಾದ ಯೋಗಿ ಅವರ ಲಂಕೆ ಮೂವಿಯಲ್ಲೂ ಕೂಡ ಅಭಿನಯಿಸಿದ್ದಾರೆ. ವಿಶೇಷವೆಂದರೆ ರೌಡಿ ಬೇಬಿ ಮೂವಿಯಲ್ಲಿ ಕೂಡ ಅಭಿನಯಿಸಿದ್ದಾರೆ. ಇವೆಲ್ಲವುಗಳ ಹೊರತಾಗಿ, ಅವರು ದುಡಿದ ಹಣದಲ್ಲಿ ಅಲ್ಲಿ-ಇಲ್ಲಿ ಚಿಕ್ಕಚಿಕ್ಕ ಸಮಾಜಸೇವೆಯನ್ನು ಕೂಡ ಮಾಡುತ್ತಿದ್ದಾರೆ. ಉಡುಪಿ ಹೆಲ್ಪ್’ಲೈನ್ ತಂಡದಲ್ಲಿದಲ್ಲಿರುವ ಇವರು, ಹಸಿದವರಿಗೆ ಅನ್ನ ನೀಡುವ ಸಭೆ-ಸಮಾರಂಭಗಳಲ್ಲಿ ಉಳಿದವುಗಳನ್ನು ಸಂಗ್ರಹಿಸಿ ಹಸಿದವರಿಗೆ ನೀಡುವ ತಂಡ ಅನಾಥಾಶ್ರಮ ವೃದ್ರಾಶ್ರಮ ಅಂಗವಿಕಲರಿಗೆ ಸಹಾಯ ಮಾಡುತ್ತಿದ್ದಾರೆ. ಇವರ ಈ ಚಿಕ್ಕ ಪ್ರತಿಭೆಯನ್ನು ಗುರುತಿಸಿ ಹಲವು ಕಡೆ ಗೌರವ ಕೂಡ ಬಂದಿದೆ.
ತಾನು ಕಲಿತ ಶಾಲೆಗೆ ಏನದ್ರು ಕೊಡಬೇಕು ಅಂತ ನಿರ್ದಾರ ಮಾಡಿ. ಹಾಗೆ ತಾನು ಅನುಭವಿಸಿದ ಕಷ್ಟಗಳನ್ನು ನಮ್ಮೂರಿನ ಅದೆಷ್ಟೋ ಪ್ರತಿಭೆಗಳು ಅನುಭವಿಸುವುದು ಬೇಡ ನನ್ನಲ್ಲಿ ಆಗುವಷ್ಟು. ಪ್ರತಿಭೆಗಳನ್ನು ಬೆಳಕಿಗೆ ತರಬೇಕು ಅಂತ ನನ್ನದೇ ಹೊಸ @ಕಲಾಗೊಂಚ ಎನ್ನುವ ಯೂಟ್ಯೂಬ್ ಚಾನಲ್ ಓಪನ್ ಮಾಡಿ ಹೊಸ ಕಿರುಚಿತ್ರ ಮಾಡಿ ಬಿಡುಗಡೆಗೊಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.
ಕಿರುಚಿತ್ರ ಯಾವುದೆಂದರೆ ‘ನಾವೆಲ್ಲರೂ ಭಾರತೀಯರು’. ಈ ಕಿರುಚಿತ್ರದಲ್ಲಿ ವಿದ್ಯಾರ್ಥಿಗಳಿಗೆ ರಾಷ್ಟ್ರಪ್ರೇಮದ ಅರಿವು ಮೂಡಿಸುವ ಚಿತ್ರವಾಗಿದೆ. ಇದನ್ನು ಖುದ್ದಾಗಿ ಮಂಜುನಾಥ ಚೇರ್ಕಾಡಿ ಇವರ ಮೊದಲ ಕಥೆ, ನಿರ್ದೇಶನ ಚಿತ್ರ ಇದು ಅಗಿದೆ. ಇವರಿಗೆ ಬೆನ್ನೆಲುಬಾಗಿ ನಿಂತವರು ಸತ್ಯಾನಂದ ಅವರ ಸಹಕಾರ.
ಇವರಿಂದ ಇನ್ನು ಹೆಚ್ಚಿನ ಪ್ರೋತ್ಸಾಹ ನೀಡಿ ಇನ್ನೂ ಹೆಚ್ಚೆಚ್ಚು ಕಿರುಚಿತ್ರ ಇವರಿಂದ ಮೂಡಿಬರಲಿ ನಾವೆಲ್ಲ ಸೇರಿ ಇವರಿಗೆ ಸಪೋರ್ಟ್ ಮಾಡೋಣ ನಮ್ಮೂರಿನ ಕಲಾವಿದನಿಗೆ ಪ್ರೋತ್ಸಾಹ ಮಾಡೋಣ ಎಲ್ಲರೂ ಕೈಜೋಡಿಸೋಣ.
ದೇಶ ಕಾಯುವ ಯೋಧ ಬಿಡುಗಡೆ ಮಾಡಿದ ಟ್ರೈಲರ್’ನ ಕಿರುಚಿತ್ರ ಹೇಗಿದೆ ನೋಡಿ:
ಲೇಖನ, ಚಿತ್ರಕೃಪೆ: ಪ್ರಸನ್ನ ಭಂಡಾರಿ ಕಡಂಗೋಡು
Discussion about this post