ನವದೆಹಲಿ: ಭಾರತ ವಿರುದ್ಧ ಹಲವು ಬಾರಿ ಸಂಚು ರೂಪಿಸಿ ಜಾಗತಿಕ ಮಟ್ಟದಲ್ಲಿ ತನ್ನ ಮಾನವನ್ನು ತಾನೇ ಹರಾಜು ಹಾಕಿಕೊಂಡಿರುವ ಪಾಕ್ ಈಗ ಮತ್ತೆ ಅಂತಹುದ್ದೇ ಎಡವಟ್ಟು ಮಾಡಿಕೊಂಡಿದೆ.
ಗಡಿಯಲ್ಲಿ ಉಗ್ರರ ನೆಲಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದ್ದು ಸುಳ್ಳು ಎಂದು ಸಾಬೀತು ಮಾಡಲು ವಿದೇಶಿ ನಿಯೋಗವನ್ನು ಕರೆದುಕೊಂಡು ಹೋದ ಪಾಕಿಸ್ಥಾನಕ್ಕೆ ಮತ್ತೆ ಜಾಗತಿಕ ಮಟ್ಟದಲ್ಲಿ ಭಾರೀ ಮುಖಭಂಗವಾಗಿದೆ.
People’s National Alliance in Mazafarabad Kashmir protest lathi charged by police. Tear gas and also aerial firing. pic.twitter.com/bS8XqwDYPV
— Dr. Taimur Rahman (@Taimur_Laal) October 22, 2019
ವಿದೇಶಿ ನಿಯೋಗವನ್ನು ದಾಳಿ ನಡೆದ ಸ್ಥಳಕ್ಕೆ ಪಾಕಿಸ್ಥಾನ ಸರ್ಕಾರದ ಅಧಿಕಾರಿಗಳು ಕರೆದುಕೊಂಡು ಹೋದ ವೇಳೆ ಸ್ಥಳೀಯ ನಿವಾಸಿಗಳು ಅಲ್ಲಿನ ಸರ್ಕಾರ ಹಾಗೂ ಸೇನೆ ವಿರುದ್ಧ ಭಾರೀ ಪ್ರತಿಭಟನೆ ನಡೆಸಿ, ಛೀಮಾರಿ ಹಾಕಿದ್ದಾರೆ.
ಪಾಕ್ ಸರ್ಕಾರದ ನೀತಿ ಹಾಗೂ ನಿರ್ಧಾರಗಳ ವಿರುದ್ಧ ಘೋಷಣೆ ಕೂಗಿನ ಅಲ್ಲಿನ ನಿವಾಸಿಗಳು ಇಂದಿನ ಅನಾಹುತಗಳಿಗೆ ನೀವೇ ಕಾರಣ ಎಂದು ಟೀಕಿಸಿದ್ದಾರೆ.
Discussion about this post