ಭದ್ರಾವತಿ: ಮಹಾರಾಷ್ಟ್ರದಲ್ಲಿ ಇತ್ತೀಚಿಗೆ ನಡೆದ 3 ನೆಯ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ತಾಲೂಕಿನ ದೊಣಬಘಟ್ಟ ಸೆವೆನ್ಸ್ ಸ್ಪೋರ್ಟ್ಸ್ ಕ್ಲಬಿನ ತಂಡದವರು ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾರೆ.
ವಾಲಿಬಾಲ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಹಾಗೂ ಕಬ್ಬಡಿ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕಗಳನ್ನು ಪಡೆದು ರಾಜ್ಯ, ಜಿಲ್ಲೆ ಹಾಗೂ ತಾಲೂಕಿಗೆ ಕೀರ್ತಿ ತಂದಿರುತ್ತಾರೆ. ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಕೀರ್ತಿ ತಂದ ಕ್ರೀಡಾಪಟುಗಳು ಹಾಗೂ ತರಬೇತಿದಾರರಿಗೆ ನಗರದ ಸ್ನೇಹಜೀವಿ ಉಮೇಶ್ (ಪೋಲಿಸ್ ಇಲಾಖೆ) ನಗದು ಪುರಸ್ಕಾರ ನೀಡಿ ಗೌರವಿಸಿದ್ದಾರೆ.
ಈ ಸಂದರ್ಭದಲ್ಲಿ ಕ್ರೀಡಾಪಟುಗಳಾದ ಇಮ್ರಾನ್ ಅಲಿ, ಹುಸೇನ್, ಇರ್ಫಾನ್ ಅಲಿ, ಮಹಮದ್ ರುಹಾನ್, ಮಹಮದ್ ಇಫ್ರಾನ್, ಮುರ್ತುಜಾ ಅಲಿ, ರಸೂಲ್ ಖಾನ್ ಸೇರಿದಂತೆ ಅನೇಕರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post