ತಿರುವನಂತಪುರಂ: ದಕ್ಷಿಣ ಭಾರತ ಪವಿತ್ರ ಪುಣ್ಯ ಕ್ಷೇತ್ರ ಶಬರಿಮಲೆಯಲ್ಲಿ ಮಂಡಲ ಪೂಜೆಯ ಹಿನ್ನೆಲೆಯಲ್ಲಿ ಮಂಜಾಗ್ರತಾ ಕ್ರಮವಾಗಿ 10 ಸಾವಿರ ಪೊಲೀಸರನ್ನು ನಿಯೋಜಿಸಲು ನಿರ್ಧರಿಸಲಾಗಿದೆ.
ನವೆಂಬರ್ 15ರಿಂದ ಐದು ಹಂತಗಳಲ್ಲಿ ಭದ್ರತೆಗಾಗಿ 10 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲು ಕೇರಳ ಪೊಲೀಸರು ನಿರ್ಧರಿಸಿದ್ದಾರೆ.
ನವೆಂಬರ್ 16ರಂದು ಶಬರಿಮಲೆ ದೇವಾಲಯ ತೆರೆಯಲಿದ್ದು, ಮುಂದಿನ ಮೂರು ತಿಂಗಳು ಭಕ್ತರಿಗೆ ಕಣ್ತುಂಬಿಕೊಳ್ಳಲು ಅವಕಾಶವಿದೆ. ಹೀಗಾಗಿ, ಈ ಅವಧಿಯಲ್ಲಿ ಲಕ್ಷಾಂತರ ಭಕ್ತರು ಶಬರಿಮಲೆಗೆ ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಭದ್ರತೆ ಒದಗಿಸಲು ಕೇರಳ ಪೊಲೀಸರು ನಿರ್ಧರಿಸಿದ್ದು, ಇದಕ್ಕಾಗಿ 24 ಎಸ್’ಪಿಗಳು, 112 ಡಿವೈಎಸ್’ಪಿ, 264 ಇನ್ಸ್’ಪೆಕ್ಟರ್ಸ್, 1185 ಸಬ್’ಇನ್ಸ್’ಪೆಕ್ಟರ್ಸ್, 8402 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ.
Discussion about this post