ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಲಕ್ನೋ: ಪೌರತ್ವ ಕಾಯ್ದೆ ವಿರೋಧಿ ಹೋರಾಟದ ವೇಳೆಯಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ನಾಶ ಮಾಡುವವರ ವೈಯಕ್ತಿಕ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಪುಂಡ ಪುಡಾರಿಗಳು ಬೆಚ್ಚಿ ಬೀಳುವಂತಹ ಹೆಜ್ಜೆಯನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಟ್ಟಿದ್ದಾರೆ.
ಲಕ್ನೋ, ಮುಜಾಫರ್ ನಗರ ಸೇರಿದಂತೆ ಹಲವು ನಗರಗಳಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನಾಕಾರರು ದೊಂಬಿ ನಡೆಸಿದ್ದರು. ಈ ವೇಳೆ ಗಲಭೆಯಲ್ಲಿ ಭಾಗಿಯಾಗಿ ಸಾರ್ವಜನಿಕ ಸ್ವತ್ಥನ್ನು ಹಾಳುಗೆಡವಿದವರಿಗೆ ಸೇರಿದ ಸುಮಾರು 67 ಅಂಗಡಿಗಳಿಗೆ ಬೀಗ ಹಾಕಿ, ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಭರ್ಜರಿ ಶಾಕ್ ನೀಡಲಾಗಿದೆ.
ಉತ್ತರ ಪ್ರದೇಶದಲ್ಲಿ ಶುಕ್ರವಾರ ನಡೆದ ಗಲಭೆಯಲ್ಲಿ ಬೈಕ್, ಕಾರುಗಳು ಮಾತ್ರವಲ್ಲದೇ ಹಲವು ಸಾರ್ವಜನಿಕ ಆಸ್ತಿಯನ್ನು ಧ್ವಂಸ ಮಾಡಲಾಗಿತ್ತು.
Get in Touch With Us info@kalpa.news Whatsapp: 9481252093














