ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಗೌರಿಬಿದನೂರು: 2017ನೆಯ ಸಾಲಿನ ಕೆಪಿಎಸ್’ಸಿ ಪರೀಕ್ಷೆ ಎದುರಿಸಿದ್ದ ಅಭ್ಯರ್ಥಿಗಳ ಫಲಿತಾಂಶ ಪಟ್ಟಿ ಪ್ರಕಟಗೊಂಡಿದ್ದು, ಇದರಲ್ಲಿ ತಾಲೂಕಿನ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ತಾಲೂಕಿನ ಪುರ ಗ್ರಾಮದ ಪಿ.ವಿ. ಸುಖದೇವಪ್ಪ ಮತ್ತು ಶಾರದಮ್ಮ ಅವರ ಪುತ್ರಿ ಪಿ.ಎಸ್. ರಾಜೇಶ್ವರಿ ಗ್ರೇಡ್-2 ತಹಶೀಲ್ದಾರ್ ಹುದ್ದೆಗೆ ಆಯ್ಕೆಯಾಗಿದ್ದಾರೆ.
ನಗರದ ವಿನಾಯಕನಗರ್ ನಿವಾಸಿ ಶಿವಕುಮಾರ್ ಮತ್ತು ಪ್ರೇಮಕುಮಾರಿ ಅವರ ಪುತ್ರಿ ಜಿ.ಎಸ್. ಸ್ಮಿತಾ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರಾಗಿ ಆಯ್ಕೆಯಾಗಿದ್ದಾರೆ.
ಮಾಧವ ನಗರದ ಎಸ್. ರಾಘವೇಂದ್ರ ವಾಣಿಜ್ಯ ತೆರಿಗೆ ಅಧಿಕಾರಿಯಾಗಿ ನಿವೃತ್ತ ಸೇನಾನಿ ಕೋಟಾದಡಿ ಆಯ್ಕೆಯಾಗಿದ್ದಾರೆ.
ಈ ಮೂವರು ಪ್ರತಿಭಾನ್ವಿತ ಸಾಧಕರನ್ನು ತಾಲೂಕಿನ ಗಣ್ಯರು ಹಾಗೂ ಜನರು ಅಭಿನಂದಿಸಿದ್ದಾರೆ.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Get in Touch With Us info@kalpa.news Whatsapp: 9481252093
Discussion about this post