ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಹಿಂದೂ ಕಾರ್ಯಕರ್ತ ಹನುಮ ಸಿಂಗ್ ಎನ್ನುವವರ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ದಾಳಿ ನಡೆಸಿದ್ದು, ಹತ್ಯೆ ಯತ್ನ ನಡೆದಿದೆ.
ಸಿದ್ದಾರೂಢ ನಗರದಲ್ಲಿರುವ ಹಾರ್ಡ್‌ವೇರ್ ಶಾಪ್ ಮಾಲೀಕರಾದ ಹನುಮ ಸಿಂಗ್ ಅವರು ನಿನ್ನೆ ಅಂಗಡಿ ಮುಚ್ಚಿ ಮನೆಗೆ ತೆರಳುವ ವೇಳೆ ಖಾಜಿ ಮೊಹಲ್ಲಾ ಬಳಿ ಬೈಕ್’ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದಾರೆ. ಇದರಿಂದಾಗಿ ಅಸ್ವಸ್ಥಗೊಂಡ ಹನುಮ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೆಲವು ದಿನಗಳ ಹಿಂದೆ ಚಿಕ್ಕ ಮಕ್ಕಳ ಕ್ರಿಕೆಟ್ ಆಡುತ್ತಿದ್ದ ವಿಚಾರಕ್ಕೆ ಸಣ್ಣ ವಾಗ್ವಾದಗಳು ನಡೆದಿದ್ದು, ಇದರಲ್ಲಿ ಹನುಮ ಅವರು ಬುದ್ದಿ ಹೇಳಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕಾಗ ಹತ್ಯೆ ಯತ್ನ ನಡೆಸಲಾಗಿದೆ ಎಂದು ಹೇಳಲಾಗಿದ್ದರೂ, ಖಚಿತ ಕಾರಣ ತಿಳಿದುಬಂದಿಲ್ಲ.
ಘಟನೆ ಖಂಡಿಸಿ, ಹಿಂದೂ ಪರ ಸಂಘಟನೆಗಳ ವತಿಯಿಂದ ರಂಗಪ್ಪ ಸರ್ಕಲ್’ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ.
Get in Touch With Us info@kalpa.news Whatsapp: 9481252093

















