ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ವಾಷಿಂಗ್ಟನ್: ತಾವು ಅಮೆರಿಕಾ ಅಧ್ಯಕ್ಷರಾದ ನಂತರ ಇದೇ ಮೊದಲ ಬಾರಿಗೆ ಭಾರತಕ್ಕೆ ಐತಿಹಾಸಿಕ ಭೇಟಿ ನೀಡುತ್ತಿರುವ ಡೊನಾಲ್ಡ್ ಟ್ರಂಪ್ ಅವರು, ತಮ್ಮ ಸಂತಸವನ್ನು ಹಿಂದಿಯಲ್ಲಿ ವ್ಯಕ್ತಪಡಿಸಿ, ಆನಂತರ ಭಾರತಕ್ಕೆ ಪ್ರಯಾಣ ಆರಂಭಿಸಿದ್ದಾರೆ.
ಈ ಕುರಿತಂತೆ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅವರ ಭಾರತ ಭೇಟಿಗೆ ಉತ್ಸುಕನಾಗಿದ್ದೇನೆ. ಈಗ ದಾರಿಯಲ್ಲಿದ್ದೇವೆ. ಇನ್ನು ಕೆಲವೇ ಗಂಟೆಗಳಲ್ಲಿ ನಿಮ್ಮೆಲ್ಲರನ್ನು ಭೇಟಿಯಾಗುತ್ತೇನೆ ಎಂದಿದ್ದಾರೆ.
हम भारत आने के लिए तत्पर हैं । हम रास्ते में हैँ, कुछ ही घंटों में हम सबसे मिलेंगे!
— Donald J. Trump (@realDonaldTrump) February 24, 2020
ಇನ್ನೊಂದು ಟ್ವೀಟ್’ನಲ್ಲಿ ಮೆಲಾನಿಯಾ ಜೊತೆಯಲ್ಲಿ ಭಾರತಕ್ಕೆ ಹೊರಟಿದ್ದೇನೆ ಎಂದು ತಾವು ಹೊರಡುತ್ತಿರುವ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
Departing for India with Melania! pic.twitter.com/sZhb3E1AoB
— Donald J. Trump (@realDonaldTrump) February 23, 2020
ಮಧ್ಯಾಹ್ನದ ವೇಳೆಗೆ ಅಹಮದಾಬಾದ್’ಗೆ ಆಗಮಿಸಲಿರುವ ಟ್ರಂಪ್, ಸುಮಾರು 22 ಕಿಮೀ ದೂರದ ರೋಡ್ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ ಆಗ್ರಾದಲ್ಲಿರುವ ತಾಜ್ ಮಹಲ್ ತಮ್ಮ ಪತ್ನಿಯೊಂದಿಗೆ ಅವರು ಭೇಟಿ ನೀಡಲಿದ್ದು, ಮಾರ್ಗದ ಉದ್ದಕ್ಕೂ ಮೂರು ಸಾವಿರ ಕಲಾವಿದರು ಅವರಿಗೆ ಸ್ವಾಗತ ಕೋರಲಿದ್ದಾರೆ. ವಿಮಾನ ನಿಲ್ದಾಣದಿಂದ ತಾಜ್ ಮಹಲ್ ವರೆಗೆ ಸಾಗುವ 10 ಕಿಮೀ ಉದ್ದದ ಹೆದ್ದಾರಿವರೆಗೂ 16 ಸಾವಿರ ಹೂಕುಂಡಗಳನ್ನು ಇಡಲಾಗಿದ್ದು, ಮಕ್ಕಳು 60 ಸಾವಿರ ಭಾರತ-ಅಮೆರಿಕಾ ಧ್ವಜವನ್ನು ಬೀಸಲಿದ್ದಾರೆ.
ನವದೆಹಲಿಗೆ ಆಗಮಿಸಿದ ನಂತರ ಸುಮಾರು 36 ಗಂಟೆಗಳ ಕಾಲ ಬಹುತೇಕ ನಿರಂತರ ಕಾರ್ಯಕ್ರಮ ಹಾಗೂ ಸಭೆಗಳಲ್ಲಿ ಟ್ರಂಪ್ ಪಾಲ್ಗೊಳ್ಳಲಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post