ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಿಸಬೇಕು ಎಂದು ರಾಜ್ಯ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಶ್ರೀಮಠದ ಅರ್ಜಿಯನ್ನು ಮಾನ್ಯ ಮಾಡಿದ ಸುಪ್ರೀಂ ಕೋರ್ಟ್, ಸದ್ಯ ಯಥಾ ಸ್ಥಿತಿಯನ್ನು ಕಾಪಾಡಿಕೊಳ್ಳುವಂತೆ ಆದೇಶ ನೀಡಿದೆ.
ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಶ್ರೀಮಠದ ವಿರುದ್ಧ ಹೂಡಿರುವ ದಾವೆಯು ನ್ಯಾಯಯುತವಾಗಿದ್ದಲ್ಲವೆಂದು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ದಾಖಲಿಸಲಾಗಿತ್ತು. ಇಂದು ಕೂಲಂಕುಶವಾಗಿ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಉಚ್ಚ ನ್ಯಾಯಾಲಯದಲ್ಲಿರುವ ಪ್ರಕರಣದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಆದೇಶಿಸಿದೆ.
ಈ ಹಿಂದೆ ಟಿ.ಟಿ. ಹೆಗಡೆ ಮತ್ತು ಪ್ರಶಾಂತ್ ಮತ್ತು ಲೋಕೇಶ್ ಎಂಬುವವರು ಸೆಕ್ಷನ್ 92 ಅಡಿಯಲ್ಲಿ ಶ್ರೀಮಠದ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ, ಸೆಷನ್ ಕೋರ್ಟ್ ಬೆಂಗಳೂರಿನಲ್ಲಿ ದಾವೆ ಹೂಡಿದ್ದರು. ಸದರಿ ಎರಡೂ ಅರ್ಜಿಗಳೂ ವಜಾ ಆಗಿರುವುದನ್ನು ವಾದದ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯದ ಗಮನಕ್ಕೆ ತರಲಾಗಿದ್ದು, ಸೆಕ್ಷನ್ 92 ಮೊಕದ್ದಮೆ ಬಾಕಿ ಇರುವಾಗ ಅಥವಾ ವಜಾಗೊಳಿಸಿದಾಗ ಪಿಐಎಲ್‌ನಲ್ಲಿ ಅಂತಹ ಪ್ರಾರ್ಥನೆಗಳನ್ನು ನೀಡಬಹುದೇ ಎಂದು ನಾವು ಪರಿಶೀಲಿಸುತ್ತೇವೆ ಎಂದು ನ್ಯಾಯಾಧೀಶರು ಹೇಳಿರುವುದು ಇಲ್ಲಿ ಗಮನಾರ್ಹವಾಗಿದೆ.
ಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿ ತೊಡಗಿಸಿಕೊಂಡಿರುವ ಶ್ರೀಶಂಕರಾಚಾರ್ಯ ಪರಂಪರೆಯ ಶ್ರೀರಾಮಚಂದ್ರಾಪುರ ಮಠದ ವಿರುದ್ಧ ಸುಳ್ಳು ಆರೋಪ ಹೊರಿಸಿದ್ದವರಿಗೆ ತೀವ್ರ ಹಿನ್ನೆಡೆಯಾಗಿದ್ದು, ಸರ್ವೋಚ್ಚ ನ್ಯಾಯಾಲಯ ಶ್ರೀಮಠದ ಅರ್ಜಿಯನ್ನು ಪುರಸ್ಕರಿಸಿದೆ.
Get in Touch With Us info@kalpa.news Whatsapp: 9481252093
Discussion about this post