ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಖಚಿತ ಮಾಹಿತಿಯ ಆಧಾರದಲ್ಲಿ ಪೊಲೀಸರು ನಡೆಸಿದ ದಾಳಿಯಲ್ಲಿ ಐವರು ದರೋಡೆಕೋರರನ್ನು ವಶಕ್ಕೆ ಪಡೆದಿದ್ದು, ಏಳು ಲಕ್ಷ ರೂ. ಬೆಲೆಯ ಡಸ್ಟರ್ ಕಾರು, 30 ಸಾವಿರ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ.
ಫೆ.27 ನಿನ್ನೆ ನಸುಕಿನಲ್ಲಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಎಚ್.ಕೆ. ಜಂಕ್ಷನ್ ರಾಮಿನಕೊಪ್ಪ ಕ್ರಾಸ್ ಬಳಿ ಅನುಮಾನಾಸ್ಪದ ವ್ಯಕ್ತಿಗಳು ಮಾರಕಾಸ್ತ್ರಗಳೊಂದಿಗೆ ದರೋಡೆಗೆ ಸಂಚು ರೂಪಿಸಿದ್ದಾರೆ ಎಂಬ ಖಚಿತ ಮಾಹಿತಿ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಐವರು ಆರೋಪಿಗಳು, ಏಳು ಲಕ್ಷ ರೂ. ಬೆಲೆಯ ಡಸ್ಟರ್ ಕಾರು, 30,500 ರೂ. ಹಾಗೂ ಚಿನ್ನದ ಉಂಗುರಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳನ್ನು ಹಾಸನ ಜಿಲ್ಲೆಯ ಹಿರೇಸಾವೆಯ ಲಯನ್ ಎಂ.ಎನ್. ಸಿಂಹ, ನಿಖಿಲ್, ಬೆಂಗಳೂರು ಸಂಜೀವಿನಿ ನಗರದ ಮಧುಸೂಧನ್, ವಿಜಯನಗರದ ಅರ್ಜುನ್ ಹಾಗೂ ಹಾಸನ ಜಿಲ್ಲೆ ಸುಬ್ಬನಹಳ್ಳಿಯ ಕೌಶಿಕ್ ಕುಮಾರ್ ಎಂದು ಗುರುತಿಲಾಗಿದೆ.
ಭದ್ರಾವತಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಸುಧಾಕರ ನಾಯ್ಕ್ ಅವರ ಮಾರ್ಗದರ್ಶನದಲ್ಲಿ, ಭದ್ರಾವತಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಮಂಜುನಾಥ ಇಒ ಅವರ ನೇತೃತ್ವದ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ಯಎಎಸ್’ಐ ಕೃಷ್ಣಮೂರ್ತಿ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
Get in Touch With Us info@kalpa.news Whatsapp: 9481252093
Discussion about this post