ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ದೇಶದಾದ್ಯಂತ ಕೊರೋನಾ ವೈರಸ್ ವ್ಯಾಪಕವಾಗಿ ಹರಡಲು ಕಾರಣವಾದ ನಿಜಾಮುದ್ದೀನ್ ತಬ್ಲಿಘಿ ಜಮಾತ್ ಮಸೀದಿಯ ಮೌಲಾನಾ ಸಾದ್ ಆಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದು, ತಮ್ಮ ಅನುಯಾಯಿಗಳು ಸರ್ಕಾರದ ಆದೇಶವನ್ನು ಪಾಲಿಸಬೇಕು ಎಂದಿದ್ದಾರೆ.
ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ಸುಮಾರು 200 ದೇಶಗಳಲ್ಲಿ 100 ಕೋಟಿಗೂ ಅಧಿಕ ಅನುಯಾಯಿಗಳನ್ನು ಹೊಂದಿರುವ ಈ ತಬ್ಲಿಘಿ ಮಸೀದಿಯ ಸಾದ್ ಆಡಿಯೋ ಸಂದೇಶ ರವಾನಿಸಿದ್ದಾರೆ. ವೈದ್ಯರ ಸಲಹೆಯ ಮೇರೆಗೆ ತಾವು ಐಸೊಲೇಶನ್’ನಲ್ಲಿದ್ದು ಅದರಂತೆ ತಮ್ಮೆಲ್ಲಾ ಅನುಯಾಯಿಗಳು ಸರ್ಕಾರ ನೀಡುವ ಆದೇಶದಂತೆ ನಡೆದುಕೊಳ್ಳಬೇಕು ಎಂದಿದ್ದಾರೆ.
ಇಂಡೋನೇಷ್ಯಾದಿಂದ ಆಗಮಿಸಿದ್ದ ನೂರಾರು ಬೋಧಕರ ಸಮ್ಮುಖದಲ್ಲಿ ದೇಶದ ಎಲ್ಲ ರಾಜ್ಯಗಳಿಂದ 800 ಸಾವಿರಕ್ಕೂ ಅಧಿಕ ಮುಸ್ಲಿಮರು ಸಭೆಯಲ್ಲಿ ಪಾಲ್ಗೊಂಡಿದ್ದು, ಇದರಿಂದಾಗಿ ದೇಶದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡಿದೆ. ಆದರೆ, ಇಡಿಯ ಮಸೀದಿ ಪ್ರದೇಶವನ್ನು ಸ್ಯಾನಿಟೈಸೇಶನ್ ಮಾಡುವ ಸಲುವಾಗಿ ಖಾಲಿ ಮಾಡುವಂತೆ ಸೂಚಿಸಲಾಯಿತು. ಅಲ್ಲದೇ, ಸಭೆಯಲ್ಲಿ ಪಾಲ್ಗೊಂಡವರನ್ನೆಲ್ಲಾ ಕ್ವಾರಂಟೈನ್’ನಲ್ಲಿ ಇರಿಸುವಂತೆ ಸೂಚಿಸಲಾಯಿತು.
ಆದರೆ, ಮಸೀದಿ ಖಾಲಿ ಮಾಡಲು ಹಾಗೂ ಕ್ವಾರಂಟೈನ್’ಗೆ ಒಳಗಾಗಲು ನಿರಾಕರಿಸಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್, ರಾತ್ರೋರಾತ್ರಿ ಸ್ಥಳ ಪರಿಶೀಲನೆ ನಡೆಸಿ, ಮಸೀದಿ ಖಾಲಿ ಮಾಡಿಸುವಲ್ಲಿನ ತಂತ್ರಗಾರಿಕೆ ಬಳಸಿ ಯಶಸ್ವಿಯಾಗಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post