ನವದೆಹಲಿ: ದೇಶದಲ್ಲಿ ಮಾರಕ ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್19 ಸೋಂಕು ಪೀಡಿತರಿಗಾಗಿ ಚಿಕಿತ್ಸಾ ಕಿಟ್’ಗಳು ಶೀಘ್ರದಲ್ಲೇ ಭಾರತಕ್ಕೆ ಬರಲಿದೆ.
ಈ ಕುರಿತಂತೆ ವಿದೇಶಾಂಗ ಸಚಿವಾಲಯ ಮಾಹಿತಿ ಪ್ರಕಟಿಸಿದ್ದು, 3 ಲಕ್ಷ ಕ್ಷಿಪ್ರ ಪ್ರತಿಕಾಯ ಪರೀಕ್ಷಾ ಕಿಟ್‌ಗಳು ಸೇರಿದಂತೆ ಸುಮಾರು 6.5 ಲಕ್ಷ ವೈದ್ಯಕೀಯ ಕಿಟ್‌ಗಳು ಚೀನಾದಿಂದ ಶೀಘ್ರದಲ್ಲೇ ಬರಲಿವೆ.
ಇಂದು ಸುಮಾರು 6.5 ಲಕ್ಷ ವೈದ್ಯಕೀಯ ಕಿಟ್‌ಗಳು ನಮ್ಮನ್ನು ತಲುಪಬೇಕು ಎಂದು ಎಂಇಎ ಮೂಲಗಳು ತಿಳಿಸಿವೆ.
ಬೀಜಿಂಗ್‌ನಲ್ಲಿರುವ ನಮ್ಮ ರಾಯಭಾರ ಕಚೇರಿ ಮತ್ತು ಗುವಾಂಗ್ ನಲ್ಲಿನ ಕಾನ್ಸುಲೇಟ್ ಇದರಲ್ಲಿ ಪ್ರಮುಖ ಪಾತ್ರ ವಹಿಸಿದೆ.
Discussion about this post