ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕಿರಿಮಂಜೇಶ್ವರ: ಇಲ್ಲಿನ ಗ್ರಾಮ ಪಂಚಾಯತ್’ಗೆ ಭೇಟಿ ನೀಡಿದ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು, ಕೋವಿಡ್19 ಸೋಂಕು ಹರಡದಂತೆ ತೆಗೆದುಕೊಳ್ಳಲಾಗಿರುವ ಮುಂಜಾಗ್ರತಾ ಕ್ರಮಗಳ ಕುರಿತಾಗಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಮುಂಜಾಗ್ರತೆ ಕ್ರಮಗಳ ಪಂಚಾಯತ್ ಅಧ್ಯಕ್ಷರು, ತಾಲೂಕು ಪಂಚಾಯತ್ ಅಧ್ಯಕ್ಷರು, ಪಂಚಾಯತ್ ಉಪಾಧ್ಯಕ್ಷರು, ಪಂಚಾಯತ್ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ, ಗ್ರಾಮ ಲೆಕ್ಕಿಗರೊಂದಿಗೆ ಚರ್ಚೆ ನಡೆಸಿದರು.
ವಿದೇಶದಿಂದ ಆಗಮಿಸಿದವರ ಹೋಂ ಕ್ವಾರಂಟೈನ್ ಸಂಬಂಧಿಸಿದಂತೆ ವೈದ್ಯರಿಂದ ಮಾಹಿತಿ ಪಡೆದರು. ಅಲ್ಲದೇ ಮೀನುಗಾರರ ಮೀನು ಮಾರಾಟದ ವ್ಯವಸ್ಥೆ ಬಗ್ಗೆ, ಪಡಿತರ ಮಾರಾಟದ ವ್ಯವಸ್ಥೆ ಬಗ್ಗೆ, ಔಷಧಿ ಸಾಮಗ್ರಿಗಳ ಲಭ್ಯತೆ ಬಗ್ಗೆ ಚರ್ಚಿಸಿ, ಅಗತ್ಯವಿದ್ದಲ್ಲಿ ಸಂಪರ್ಕಿಸುವಂತೆ ತಿಳಿಸಿದರು.
Get in Touch With Us info@kalpa.news Whatsapp: 9481252093















