ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮುಳಬಾಗಿಲು: ಕುಡಿದ ಮತ್ತಿನಲ್ಲಿ ಯುವಕನೋರ್ವ ಹಾವೊಂದನ್ನು ಬಾಯಿಯಿಂದ ಕಚ್ಚಿ, ಸಿಗಿದು ಕೊಂದಿರುವ ಘಟನೆ ನಡೆದಿದೆ.
ಮುಳಬಾಗಿಲು ತಾಲೂಕಿನ ಮುಷ್ಟೂರಿನಲ್ಲಿ ಈ ಘಟನೆ ನಡೆದಿದ್ದು, ಈ ಯುವಕ ಕುಡಿದುಕೊಂಡೇ ಬೈಕ್ ಓಡಿಸಿಕೊಂಡು ಹೋಗುತ್ತಿದ್ದ ವೇಳೆ ಹಾವೊಂದು ದಾರಿಯಲ್ಲಿ ಅಡ್ಡ ಸಿಕ್ಕಿದೆ. ತತಕ್ಷಣ ಆತ ಆ ಹಾವನ್ನು ಎತ್ತಿ ಕೊರಳಿಗೆ ಸುತ್ತಿಕೊಂಡು ಬೈಕ್ ಮೇಲೆ ಕುಳಿತಂತೆಯೇ ಕುಡಿದು, ಹಾವನ್ನು ತನ್ನ ಬಾಯಿಯಿಂದ ಕಚ್ಚಿ, ಅದನ್ನು ಸಿಗಿದು ಸಾಯಿಸಿದ್ದಾರೆ.
ಈ ದೃಶ್ಯವನ್ನು ನೂರಾರು ಮಂದಿ ನಿಂತು ನೋಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Get in Touch With Us info@kalpa.news Whatsapp: 9481252093
Discussion about this post