ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹಿರಿಯೂರು: ತಾಲೂಕಿನ ಕಲಮರಹಳ್ಳಿ ಮತ್ತು ಹೊಸಹಳ್ಳಿ ಸಮೀಪದ ವೇದವತಿ ನದಿಯಲ್ಲಿ ಈಜಲು ತೆರಳಿದ್ದ ಯುವಕನೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹಿರಿಯೂರು ತಾಲೂಕಿನ ಗೂಳ್ಯ ಗ್ರಾಮದ ರವಿ (22) ಮೃತ ಯುವಕ ಎಂದು ಗುರುತಿಸಲಾಗಿದೆ.
ಹಲವು ವರ್ಷಗಳಿಂದ ನದಿಯಲ್ಲಿ ನೀರು ಇರಲಿಲ್ಲ. ಆದರೆ, ಇತ್ತೀಚೆಗೆ ವೇದವತಿ ನದಿಗೆ ವಿವಿ ಸಾಗರದಿಂದ ಕುಡಿಯುವ ನೀರಿಗಾಗಿ 02.5 ಟಿಎಂಸಿ ನೀರು ಬಿಡಲಾಗಿತ್ತು. ಕಲಮರಹಳ್ಳಿ ಸಮೀಪ ವೇದವತಿ ನದಿಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆಂದು ದೊಡ್ಡ ಗುಂಡಿ ತೆಗೆಲಾಗಿತ್ತು. ಇಂದು ಯವಕರ ಜೊತೆ ನದಿಗೆ ಬಂದಿದ್ದ ರವಿ ನೀರಿನಲ್ಲಿ ಈಜಲು ನದಿಗೆ ಇಳಿದಿದ್ದಾನೆ. ಗುಂಡಿಯಲ್ಲಿ ಸುಳಿ ಇದ್ದ ಕಾರಣ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಹಬ್ಬಿನಹೊಳೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get in Touch With Us info@kalpa.news Whatsapp: 9481252093














