ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಉಡುಪಿ: ನೆಮ್ಮದಿಯಾಗಿದ್ದ ಜಿಲ್ಲೆಯಲ್ಲಿ ಒಂದೇ ದಿನ 210 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇಡಿಯ ಕರಾವಳಿಯನ್ನೇ ಬೆಚ್ಚಿ ಬೀಳಿಸಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ಸಚಿವ ಆರ್. ಆಶೋಕ್, ಉಡುಪಿಯಲ್ಲಿ 210 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಮಹಾರಾಷ್ಟ್ರದಿಂದ ಬಂದ ಪ್ರಯಾಣಿಕರಲ್ಲೇ ಹೆಚ್ಚಿನ ಸೋಂಕು ಪತ್ತೆಯಾಗಿದೆ. ಹೀಗಾಗಿ, ಅಲ್ಲಿಂದ ಬಂದವರ ಮೇಲೆ ಹೆಚ್ಚಿನ ನಿಗಾ ವಹಿಸಲು ಸೂಚಿಸಲಾಗಿದೆ. ಅಲ್ಲದೇ, ಹೊರರಾಜ್ಯದಿಂದ ಬಂದು ಕ್ವಾರಂಟೈನ್’ನಲ್ಲಿರುವವರ ಗಂಟಲು ದ್ರವದ ವರದಿ ಇಂದು ದೊರೆಯಲಿದೆ ಎಂದಿದ್ದಾರೆ.
ಇನ್ನು, ಇಂದು 210 ಪ್ರಕರಣಗಳು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 470ಕ್ಕೆ ಏರಿಕೆಯಾಗಿದೆ.
Get in Touch With Us info@kalpa.news Whatsapp: 9481252093

















