ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಹಾ! ವರ್ಷದಲ್ಲಿ ಸುಮಾರು ವೇದಿಕೆಗಳಲ್ಲಿ ಬಣ್ಣದೊಡನೆ ಕಲೆತು ಆಡುವ ಮನಗಳು ಎಂದರೆ ಕಲಾವಿದರು. ಆದರೆ ಈ ವರ್ಷ ಕಲಾವಿದರ ಮನದ ಬಾಗಿಲನ್ನು ಹಾಕಿ ಬಿಟ್ಟಿತು ಈ ಕೊರೊನಾ ಎಂದು ಅದೇಷ್ಟೋ ಮಂದಿ ಬಡಬಡಾಯಿಸಿಕೊಂಡಿದ್ದಾರೆ!
ಆದರೇನಂತೆ.. ಒಂದು ದಾರಿ ಮುಚ್ಚಿದರೇನೂ ನೂರು ದಾರಿ ನಮ್ಮೆದುರು ಇರುವಾಗ ಎಂದು ಮಕ್ಕಿಮನೆ ಕಲಾವೃಂದ ಹೆಮ್ಮೆಯಿಂದಲೇ ಕಲಾವಿದರನ್ನು ಬೆಳೆಸುತ್ತಿದೆ. ಒಂದು ವಸಂತಕ್ಕೆ ಸುಮಾರು ಮೂವತ್ತು ವೇದಿಕೆಯನ್ನು ಅಲಂಕರಿಸಿ ರಂಜಿಸುತ್ತಿದ್ದ ಬಳಗಕ್ಕೆ ಇಂದು ಈ ಕೊರೋನಾ ಆತಂಕದಿಂದ ಎಲ್ಲಾ ಕಾರ್ಯಕ್ರಮ ಕೂಡ ನಿಂತಂತಾಗಿದೆ. ಇದರ ನಡುವೆಯೇ ಸೋಲೊಪ್ಪದ ಇವರು ಬರದೀ ಸಾಗುವ ಜಗದಲ್ಲಿ ತಂತ್ರಜ್ಞಾನ, ಮಾದ್ಯಮಗಳಾದ ಫೇಸ್’ಬುಕ್, ಯೂಟ್ಯೂಬ್ ಎಲ್ಲವನ್ನು ಬಳಸಿಕೊಂಡು ಕೃಷ್ಣ ನೃತ್ಯೋಲ್ಲಾಸ ಎಂಬ ನೃತ್ಯ ಪ್ರಸ್ತುತಿ ಜನಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಇದೇ ಮಾರ್ಗದಲ್ಲಿ ಯಕ್ಷೋಲ್ಲಾಸ ಎಂಬ ವೀಡಿಯೋ ಪ್ರಸ್ತುತಿ ಅತೀ ಶೀಘ್ರದಲ್ಲೇ ನಡೆಯಲಿದೆ.
ಕರಾವಳಿಯ ಗಂಡುಕಲೆ ಎಂದೇ ಪ್ರಖ್ಯಾತಿ ಪಡೆದ ಯಕ್ಷಗಾನ ವನ್ನ ಮಕ್ಕಿಮನೆ ಕಲಾವೃಂದ ನುರಿತ ಕಲಾವಿದರು ನಿಮ್ಮ ಮುಂದೆ ಪ್ರಸ್ತುತ ಪಡಿಸಲಿದ್ದಾರೆ. ಬಣ್ಣಗಳ ಸೆಳೆತವೇ ಹಾಗೇರಿ ಬಣ್ಣಿಸಲು ಸಾಧ್ಯವಿಲ್ಲ. ಎಂತ ಮನದಲ್ಲಾದರು ನೋವನ್ನು ಮರೆಸಿ ಒಂದರಗಳಿಗೆ ಕಿರು ನಗೆಯ ಬೀರಿಸಬಲ್ಲ ಒಂದು ಸಾಮರ್ಥ್ಯ ಕಲೆಗೆ ಮಾತ್ರ ಸಿಗಲು ಸಾಧ್ಯ, ಅದರಲ್ಲೂ ಯಕ್ಷಗಾನ ಒಂದರಗಳಿಗೆ ಎಲ್ಲರ ಮೈಮನವನ್ನೇ ಮರೆಸಿಬಿಡುತ್ತದೆ. ಈ ಒಂದು ಸಾಹಿತ್ಯ ರಚನೆಯನ್ನು ಯಕ್ಷಗಾನ ಪ್ರಸಂಗಕರ್ತರು ಆಗಿರುವ ಶುಭಾಶಯ ಜೈನ್ ಅವರು ಮಾಡಿರುತ್ತಾರೆ. ಭಾಗವತಿಗೆ ಯನ್ನು ಯಕ್ಷಗಾನ ಕ್ಷೇತ್ರದ ಪ್ರಸಿದ್ಧ ಯುವ ಭಾಗವತರಾಗಿರುವ ಸ್ವರ ಸಿಂಧೂರಿ ಅಮೃತ ಅಡಿಗ ಅವರದ್ದು ಚಂಡೆ-ಮದ್ದಳೆಯಲ್ಲಿ ಕೌಶಿಕ್ ರಾವ್ ಹಾಗೂ ಕೌಶಲ್ ರಾವ್ ಸಹಕಾರ ನೀಡಿದ್ದಾರೆ.
ಸುದೇಶ್ ಜೈನ್ ಮಕ್ಕಿಮನೆ ಸಂಯೋಜನೆಯಲ್ಲಿ ನಿಶಾಲ್ ವಾಮಂಜೂರು ಸಂಕಲನದಲ್ಲಿ ವಿಡಿಯೋ ಪ್ರಸ್ತುತಿ ಅತಿ ಶೀಘ್ರದಲ್ಲಿ ಬಿಡುಗಡೆ ಆಗಲಿದೆ. ಯಕ್ಷಗಾನ ಕ್ಷೇತ್ರದ ಯುವ ಪ್ರತಿಭೆಗಳಾದ ಸಾಯಿಸುಮಾ ನಾವಡ ಕಾರಿಂಜ, ವಿಜೇಶ್ ದೇವಾಡಿಗ ಮಂಗಳಾದೇವಿ, ರಕ್ಷಿತ್ ಪೂಜಾರಿ ಕಾರ್ಕಳ, ಮೈತ್ರಿ ಭಟ್ ಮಾವ್ವಾರು, ವಿನುತಾ ಕೆ ಗಟ್ಟಿ ಕೈರಂಗಳ, ಟಿ.ಎನ್. ಶ್ರೀರಕ್ಷಾ ಕಳಸ, ಕೃತಿ ವಿ ರಾವ್ ಚಿತ್ರಾಪುರ, ವಿದ್ಯಾ ಭಟ್ ಕುಂಟಿಕಾನಮಠ, ಅನನ್ಯ ಬೆಳ್ತಂಗಡಿ, ಸುಷ್ಮಿತಾ ಆರ್ ಕಳಸ ಹಾಗೂ ಬಾಲ ಪ್ರತಿಭೆಗಳಾದ ಅಭಿನವಿ ಹೊಳ್ಳ ಬೈಕಂಪಾಡಿ, ಸ್ವಸ್ತಿಶ್ರೀ ಕದ್ರಿ ಮಂಗಳೂರು, ಖ್ಯಾತಿ ಆರ್ ಬಂಜನ್ ಸುರತ್ಕಲ್, ವಿಧಿಶಾ ಸುರತ್ಕಲ್, ಯಶ್ನ ಸುರತ್ಕಲ್ ಈ ಎಲ್ಲಾ ಪ್ರತಿಭೆಗಳು ಕೂಡ ಈ ಒಂದು ಸುಸಮಯವನ್ನು ಬಳಸಿಕೊಂಡು ತಮ್ಮ ಮನೆಯಂಗಳದಲ್ಲಿಯೇ ಹೆಜ್ಜೆಗೆ ಗೆಜ್ಜೆ ಕಟ್ಟುತ್ತಿದ್ದಾರೆ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕಾಸರಗೋಡು ಹೀಗೆ ನಾನಾ ಜಿಲ್ಲೆಯ ಪ್ರತಿಭೆಗಳ ಅನಾವರಣ ಒಂದೇ ವೇದಿಕೆಯಲ್ಲಿ ಮಾದ್ಯಮಗಳ ಸಹಕಾರದಿಂದ ನಿಮ್ಮ ಮುಂದೆ ಪ್ರಸ್ತುತಿ ಪಡಿಸಲು ಬಳಗವೇ ಸಜ್ಜಾಗಿದೆ. ಈ ಮನಗಳ ಹರಸಿ ಹಾರೈಸಿ ಬೆಳೆಸುವ ಕರ್ತೃಗಳಾಗಿ ನಿಮ್ಮ ಹೂ ಮನದ ಹಾರೈಕೆ ಬಯಸುವ ಪುಟ್ಟ ಬಳಗ ನಮ್ಮದು.
Get In Touch With Us info@kalpa.news Whatsapp: 9481252093
Discussion about this post