ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ನಗರ ಹಾಗೂ ಗ್ರಾಮೀಣ ಪ್ರದೇಶ ಸೇರಿದಂತೆ ತಾಲೂಕಿನಲ್ಲಿ ಇಂದು ಒಟ್ಟು ಆರು ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಅರಬಿಳಚಿ ಗ್ರಾಮದಲ್ಲಿ ಸೋಂಕಿತ ವ್ಯಕ್ತಿಯ ಪತ್ನಿ ಗರ್ಭಿಣಿಯಿದ್ದು ಅವರ ತಪಾಸಣೆಗೆ ಹೋಗಿದ್ದ 38 ವರ್ಷ ಮತ್ತು 37 ವರ್ಷದ ಇಬ್ಬರು ಆಶಾ ಕಾಯಕರ್ತೆಯರಿಗೆ ಪಾಸಿಟಿವ್’ಯಿರುವುದು ಧೃಡಪಟ್ಟಿದೆ.
ಅದೇ ಗ್ರಾಮದ 41 ವರ್ಷದ ಓರ್ವ ಅಂಗನವಾಡಿ ಕಾಯಕರ್ತೆಗೆ, ಅರಬಿಳಚಿ ಕ್ಯಾಂಪ್ನಲ್ಲಿ 70 ವರ್ಷದ ವೃದ್ಧೆಗೆ ಹಾಗೂ ಆನವೇರಿಯಲ್ಲಿ ಐವತ್ತು ವರ್ಷದ ಮಹಿಳೆಗೆ ಪಾಸಿಟಿವ್ ಕಾಣಿಸಿಕೊಂಡಿದೆ.
ಇನ್ನು, ನಗರಸಭೆ ವ್ಯಾಪ್ತಿಯ ಕಾಗದನಗರದ ಸುರಗಿತೋಪಿನ ನ್ಯಾಯಬೆಲೆ ಅಂಗಡಿಯ ಮಾಲೀಕರ ಪುತ್ರ 31 ವರ್ಷದ ಯುವಕನಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿದ್ದು, ಆತನನ್ನು ಬುಧವಾರ ರಾತ್ರಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈತ ಕೆಲವು ದಿನಗಳಿಂದ ನ್ಯುಮೋನಿಯಾದಿಂದ ನರಳುತ್ತಿದ್ದನೆಂದು ಹಿನ್ನೆಲೆಯಲ್ಲಿ ಚಿಕಿತ್ಸೆಗೆಂದು ಹೋದಾಗ ಈತನಲ್ಲಿ ಸೋಂಕಿನಯಿರುವಿಕೆಯ ಲಕ್ಷಣ ಕಂಡುಬಂದಿದೆ. ಈ ಮೇರೆಗೆ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿಯಲ್ಲಿ ಪಾಸಿಟಿವ್ ಬಂದಿದೆ.
ಇನ್ನು, ಪಾಸಿಟಿವ್ ಪ್ರಕರಣ ಪತ್ತೆಯಾದವರ ನಿವಾಸದ ರಸ್ತೆಗಳನ್ನು ಸೀಲ್ ಡೌನ್ ಮಾಡಲಾಗಿದ್ದು, ಸ್ಯಾನಿಟೈಸ್ ಮಾಡಲಾಗಿದೆ.
Get In Touch With Us info@kalpa.news Whatsapp: 9481252093
Discussion about this post