ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಅಚಾನಕ್ ಆಗಿ ನಿರ್ದೇಶಕ ಸುಕ್ಕ ಸೂರಿ ಕಣ್ಣಿಗೆ ಬಿದ್ದು, ಸಿನಿ ದುನಿಯಾಗೆ ಬಲಗಾಲಿಟ್ಟ ಪ್ರತಿಭೆ ಯೋಗಿ ಯೋಗೇಶ್. ಚಿಕ್ಕ ವಯಸ್ಸಿನಲ್ಲಿಯೇ ಸ್ಯಾಂಡಲ್’ವುಡ್’ನಲ್ಲಿ ಮಿಂಚಿ ತಮ್ಮದೇ ಆದ ಛಾಪು ಮೂಡಿಸಿದ ನಟ. ಖಳನಟನಾಗಿ ಚಂದನವನಕ್ಕೆ ಎಂಟ್ರಿ ಕೊಟ್ಟು, ಹೀರೋ ಆಗಿ ಸಹ ಮಿಂಚಿದವರು. ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡರು. ಮೊದ ಮೊದಲು ಗೆದ್ದರು, ನಂತರ ಸೋಲಿನಲ್ಲಿ ಬಿದ್ದರೂ ಮೈಕೊಡವಿ ಎದ್ದರು. ಇಂತಹ ಯೋಗಿ ಮೊನ್ನೆಯಷ್ಟೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.
ಬಹಳ ಬೇಗ ಸಿನಿಪ್ರವರ್ತಮಾನಕ್ಕೆ ಬಂದು, ಸಾಲು ಸಾಲು ಸಿನಿಮಾದಲ್ಲಿ ಮಿಂಚಿದ ಯೋಗಿ, ಸದ್ಯ ಒಂದು ಬಿಗ್ ಬ್ರೇಕ್ ಗಾಗಿ ಕಾಯುತ್ತಿದ್ದಾರೆ. ಈಗಾಗಲೇ ಸುಮಾರು 30 ಸಿನಿಮಾಗಳನ್ನು ಮಾಡಿರುವ ಲೂಸ್ ಮಾದ ಅವರ ಬಳಿ ಅನೇಕ ಹೊಸ ಹೊಸ ಸಿನಿ ಪ್ರಾಜೆಕ್ಟ್ ಇವೆ. ಒಂಬತ್ತನೇ ದಿಕ್ಕು’ , ಪರಿಮಳ ಲಾಡ್ಜ್’ ಸಿನಿಮಾದ ಶೂಟಿಂನ್’ನಲ್ಲಿ ಬಿಜಿಯಾಗಿದ್ದಾರೆ. ಜೊತೆಗೆ ನಾಗರಾಜ್ ಸೋಮಯಾಜಿ ಅನ್ನೋ ಹೊಸ ಪ್ರತಿಭೆಯ ನಿರ್ದೇಶನದಲ್ಲಿ ಸಿನಿಮಾ ಮಾಡಲು ಸಜ್ಜಾಗುತ್ತಿದ್ದಾರೆ ಯೋಗಿ. ಆ ಸಿನಿಮಾವೇ ಅಕಟಕಟ’.

ಯೋಗಿ ಚಾನ್ಸ್ ಕೊಟ್ಟಿರುವ ನಾಗರಾಜ್ ಸಿನಿಮಾ ಫ್ಯಾಷನ್ ಇರೋ ಯುವ ಪ್ರತಿಭೆ. ಮೂಲತಃವಾಗಿ ಕ್ಯಾಮೆರಾ ಮ್ಯಾನ್ ಕಂ ರಂಗಕರ್ಮಿ. ಬೆಸ್ಟ್ ಆ್ಯಕ್ಟರ್ ಅನ್ನೋ ವಂಡರ್ಫುಲ್ ಮೈಕ್ರೋ ಶಾರ್ಟ್ ಫಿಲ್ಮ್ ಮಾಡಿದ್ದರು ನಾಗರಾಜ್ ಸೋಮಯಾಜಿ. ಆ ಶಾರ್ಟ್ ಫಿಲ್ಮ್ ನೋಡಿ ಯೋಗಿ ಅಕಟಕಟ’ ಚಿತ್ರಕ್ಕೆ ಸೈ ಎಂದಿದ್ದಾರೆ.

ಸದ್ಯಕ್ಕೆ ಕೊರೋನಾ, ಲಾಕ್ ಡೌನ್ ಸಮಸ್ಯೆಗಳು ಇರೋವುದರಿಂದ ಶೂಟಿಂಗ್ ಅಖಾಡಕ್ಕೆ ಇಳಿಯದೆ ಒಂದಷ್ಟು ಹೊಸ ಬಗೆಯ ಕಥೆಗಳನ್ನು ಕೇಳುತ್ತಿದ್ದಾರೆ ಯೋಗಿ. ಆದಷ್ಟು ಬೇಗ ಗೆಲುವಿನ ಲಯಕ್ಕೆ ಲೂಸ್ ಮಾದ ಬರಲಿ ಎಂದು ಹಾರೈಸೋಣ.
Get In Touch With Us info@kalpa.news Whatsapp: 9481252093

















