Friday, May 9, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಇವರ ಕಲಾ ಸಾಮರ್ಥ್ಯಕ್ಕೆ ಗಿನ್ನಿಸ್ ದಾಖಲೆಯೇ ಶರಣಾಯಿತು: ಆದರೆ, ಸರ್ಕಾರದ ಕೃಪಾದೃಷ್ಠಿ ಮಾತ್ರ ಕುರುಡಾಯಿತು

ಮೈಕ್ರೊ ಕಲಾವಿದ ಸುರೇಂದ್ರ ಆಚಾರ್ಯ ಕಾರ್ಕಳ ಅವರಿಗೆ ಬೇಕಿದೆ ಸರ್ಕಾರದ ಸಹಾಯ: (ಹನ್ನೊಂದು ವರ್ಷಗಳಿಂದ ಕನಿಷ್ಠ ವೇತನ, ಉದ್ಯೋಗ ಖಾತರಿ ಇಲ್ಲದೆ ಮೆಸ್ಕಾಂನಲ್ಲಿ ದುಡಿಯುತ್ತಿರುವ ಮೈಕ್ರೊ ಕಲಾವಿದರೊರ್ವರ ಬದುಕಿನ ಚಿತ್ರಣ)

July 7, 2020
in Special Articles
0 0
0
Share on facebookShare on TwitterWhatsapp
Read - 3 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಕಾರ್ಕಳ, ಉಡುಪಿ ಜಿಲ್ಲೆಯ ತಾಲೂಕು ಪ್ರದೇಶ. ಈ ತಾಲೂಕು ಪ್ರದೇಶದಲ್ಲಿ ಕಪ್ಪು ಕಲ್ಲು (ಕಪ್ಪು ಶಿಲೆ)ಗಳು ಹೇರಳವಾಗಿ ಇರುವುದರಿಂದ ತುಳುವಿನಲ್ಲಿ ’ಕಾರ್ಲ’ ಎಂಬ ಶಬ್ದವು ಕನ್ನಡದಲ್ಲಿ ’ಕಾರ್ಕಳ’ ಎಂದಾಯಿತು ಎಂಬ ಅಭಿಪ್ರಾಯ ಇದೆ.

ಹಲವು ಇತಿಹಾಸ ಪ್ರಸಿದ್ಧ ತಾಣಗಳು ಕಾರ್ಕಳದಲ್ಲಿವೆ. ತ್ಯಾಗಮೂರ್ತಿ ಬಾಹುಬಲಿಯ ವಿಶ್ವಪ್ರಸಿದ್ಧ ಏಕಶಿಲಾ ಮೂರ್ತಿ, ಚತುರ್ಮುಖ ಬಸದಿ ಸಮೇತ ಹದಿನೆಂಟು ಬಸದಿಗಳು, ಪಡುತಿರುಪತಿ ಎಂದು ಕರೆಯಲ್ಪಡುವ ವೆಂಕಟರಮಣ ದೇವಸ್ಥಾನ, ಅನಂತ ಪದ್ಮನಾಭ ದೇವಸ್ಥಾನ, ರಾಮಸಮುದ್ರ, ಆನೆಕೆರೆ, ಸರ್ವಧರ್ಮಿಯರ ಶ್ರದ್ದಾಕೇಂದ್ರ ಅತ್ತೂರು ಇಗರ್ಜಿ ಮುಂತಾದುವುಗಳು ಮುಖ್ಯವಾಗಿವೆ. ವೀರಪಾಂಡ್ಯ ಬೈರವರಸು ಆಳಿದ್ದರಿಂದ ಪಾಂಡ್ಯನಗರಿ ಎಂದು ಇತಿಹಾಸದಲ್ಲಿ ಕರೆಯಲ್ಪಡುತ್ತಿತ್ತು ಕಾರ್ಕಳ. ’ಕರಿಕೊಳ’ (ಆನೆಕೆರೆ) ಇಲ್ಲಿ ಇರುವುದರಿಂದಲೂ ಕಾರ್ಕಳ ಎಂಬ ಹೆಸರು ನಿಷ್ಪತ್ತಿಗೊಂಡಿದೆ ಎಂಬ ವಾದವೂ ಇದೆ.

ಜೈನಕಾಶಿ ಎಂದು ಹೆಸರಾದ ಕಾರ್ಕಳವು ಕಲಾವಿದರಿಗೆ ಆಶ್ರಯತಾಣವಾಗಿತ್ತು ಎಂದು ತಿಳಿದು ಬರುತ್ತದೆ. ಇತಿಹಾಸದ ಕೊಂಡಿ ಎಂಬಂತೆ ರೆಂಜಾಳ ಗೋಪಾಲಕೃಷ್ಣ ಶೆಣೈ ಅವರಂತಹ ಪ್ರಸಿದ್ಧ ಸ್ಥಪತಿಗಳು ಕಾರ್ಕಳದವರು. ನಾಗಮೂರ್ತಿ, ತುಳಸಿಕಟ್ಟೆ, ದೇವರ ವಿಗ್ರಹ ಮುಂತಾದ ಶಿಲಾಮೂರ್ತಿಗಳನ್ನು ಮಾಡುವುದರಲ್ಲಿ ಕಾರ್ಕಳದ ಶಿಲ್ಪಿಗಳು ಸಿದ್ಧಹಸ್ತರು ಮತ್ತು ಪ್ರಸಿದ್ಧರು.


ತುಳುನಾಡಿನಲ್ಲಿ ನಿತ್ಯಸತ್ಯವಾದ ಮಾತೊಂದು ಚಾಲ್ತಿಯಲ್ಲಿದೆ. ವಿಶ್ವಕರ್ಮ ಸಮುದಾಯದ ಗಂಡು ಮಕ್ಕಳು ಅಭಿಯಂತ (ಇಂಜಿನಿಯರ್)ರಾಗಿ ಜನಿಸುತ್ತಾರೆ ಎಂಬುದು. ಈ ಮಾತು ನೂರಕ್ಕೆ ನೂರು ಸತ್ಯವೆನಿಸುವಷ್ಟು ತುಳುನಾಡಿನ ಶಿಲ್ಪಕಲಾ ವೈಭವಗಳು ಸಾಕ್ಷಿ ನುಡಿಯುತ್ತವೆ. ಇವುಗಳನ್ನು ಕಟ್ಟಿದ ಸ್ಥಪತಿಗಳು, ಕುಸುರಿ ಕೆಲಸಗಾರರು, ಬಡಗಿಗಳು ಜಗತ್ತಿನ ಯಾವುದೇ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಪದವಿ ಪಡೆದವರಲ್ಲ. ಅಂತಹ ವಿಶ್ವಕರ್ಮ ಸಮುದಾಯದ ಹೆಮ್ಮೆಯ ಕುವರ ಗಿನ್ನಿಸ್ ದಾಖಲೆಯ ಕಲಾವಿದ ಸುರೇಂದ್ರ ಆಚಾರ್ಯ ಕಾರ್ಕಳ. ಇವರೊಬ್ಬ ಶ್ರೇಷ್ಠ ಮಟ್ಟದ ಮೈಕ್ರೊ ಕಲಾವಿದರು.

ನಮ್ಮ ನೆರೆರಾಷ್ಟ್ರ ಪಾಕಿಸ್ಥಾನದ ಹೆಸರಲ್ಲಿದ್ದ ಗಿನ್ನಿಸ್ ದಾಖಲೆಯೊಂದನ್ನು ಮುರಿದು ತಮ್ಮ ಹೆಸರಿಗೆ ಮಾಡಿಕೊಳ್ಳುವುದರೊಂದಿಗೆ ನಮ್ಮ ದೇಶ, ರಾಜ್ಯ, ಜಿಲ್ಲೆಗೆ ಕೀರ್ತಿ ತಂದವರು. ಪೆನ್ಸಿಲ್ ಲೆಡ್’ನಲ್ಲಿ ಐವತ್ತು ಚೈನ್ ಲಿಂಕ್ಸ್‌ ಮಾಡಿದ್ದ ಸಾಧನೆ ಪಾಕಿಸ್ಥಾನದ ಅಬ್ದುಲ್ ಬಶೀರ್ ಅವರ ಹೆಸರಲ್ಲಿತ್ತು. ಸುರೇಂದ್ರ ಅವರು ಐವತ್ತೆಂಟು ಲಿಂಕ್ಸ್‌ ಮಾಡುವ ಮೂಲಕ 2019ರಲ್ಲಿ ಆ ಗಿನ್ನಿಸ್ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡರು. ಇದು ನಮ್ಮ ನಾಡಿನ ಹೆಮ್ಮೆ. ಈ ದಾಖಲೆಯ ಯಶವನ್ನು ತಮಗೆ ಸಹಕರಿಸಿದ ಎಲ್ಲ ಸಂಘ ಸಂಸ್ಥೆಗಳಿಗೆ ಬಹಳ ವಿಧೇಯತೆಯಿಂದ ಸಮರ್ಪಿಸುತ್ತಾರೆ ಸುರೇಂದ್ರ ಅವರು.

ಬಾಲ್ಯದಿಂದಲೇ ಹಲವು ಕಲಾ ಪ್ರಕಾರಗಳಲ್ಲಿ ಹವ್ಯಾಸವಿದ್ದ ಸುರೇಂದ್ರ. 2011ರ ಕ್ರಿಕೆಟ್ ವಲ್ಡರ್ ಕಪ್ ಅವಧಿಯಲ್ಲಿ ವೃತ್ತ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ಚಾಕ್-ಪೀಸ್’ನಲ್ಲಿ ರಚಿತಗೊಂಡಿದ್ದ ವಲ್ಡರ್ ಕಪ್ ಲಾಂಛನದ ಕಲಾಕೃತಿಯನ್ನು ನೋಡಿ ಸ್ಪೂರ್ತಿಗೊಂಡು ಇವರು ಪೆನ್ಸಿಲ್ ಲೆಡ್ ನಿಂದ ಅಂಥದೇ ಪ್ರತಿಕೃತಿಯನ್ನು ತಯಾರಿಸಿದರು. ಇಲ್ಲಿಂದ ಆರಂಭವಾಯಿತು ಮೈಕ್ರೊ ಕಲಾಕೃತಿಗಳ ರಚನೆ. ತಾಳ್ಮೆ, ಸಹನೆ, ತದೇಕ ಚಿತ್ತದಿಂದ ಧ್ಯಾನ ಮಾಡುವ ತಪಸ್ವಿಗಳಂತೆ ನಡೆಯುತ್ತದೆ ಈ ಮೈಕ್ರೊ ಕಲಾಕೃತಿಗಳ ರಚನೆ.


ಸುರೇಂದ್ರ ಅವರು 120ಕ್ಕಿಂತ ಹೆಚ್ಚು ಕಲಾಕೃತಿಗಳನ್ನು ರಚಿಸಿದ್ದಾರೆ. ಕೆಲವೊಮ್ಮೆ ಕೃತಿರಚನೆ ಮುಗಿದು ಅಂತಿಮ ಸ್ಪರ್ಶ (Final Touch) ಕೊಡುವಾಗ ಮುರಿದು ಹೋಗುವ ಸಂಭವವಿರುತ್ತದೆ. ನಂತರ ಮೊದಲಿನಿಂದ ಆರಂಭಿಸಬೇಕಾಗುತ್ತದೆ. ಸಂಗೀತದ ಪರಿಕರಗಳು, ಭರತನಾಟ್ಯದ ಭಂಗಿಗಳು, ಬಸವಣ್ಣ, ನರೇಂದ್ರ ಮೋದಿ, ಜಿನನಾಥ, ಏಸುಸ್ವಾಮಿ, ಮದರ್ ತೆರೆಸಾ, ಕುದುರೆ, ಮಾನವನ ಅಲ್ಲಿ ಪಂಜರ, ಡಾ. ಶಾಂತವೀರ ಸ್ವಾಮಿಜಿ ಮುಂತಾದ ಕಲಾಕೃತಿಗಳು ಇವರ ಕರಗಳಲ್ಲಿ ಜೀವ ತಳೆದಿವೆ. ಆಂಗ್ಲ ಭಾಷೆಯಲ್ಲಿ Pencil Sculpting ಎಂದು ಕರೆಯಲ್ಪಡುವ ಈ ಕಲೆಯು ಜಾಗತಿಕ ಮನ್ನಣೆಗಳಿಸಿದೆ.

ನಡೆದಾಡುವ ದೇವರೆಂದೇ ಜನಮಾನಸದಲ್ಲಿ ಸ್ಥಾಯಿಯಾಗಿದ್ದ ತುಮಕೂರಿನ ಡಾ. ಶಿವಕುಮಾರ ಸ್ವಾಮಿಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವಿರೇಂದ್ರ ಹೆಗ್ಡೆ ಮೊದಲಾದವರು ಇವರ ಕಲಾಕೃತಿಗಳನ್ನು ಮೆಚ್ಚಿ ಶ್ಲಾಘಿಸಿದ್ದಾರೆ. ಆಳ್ವಾಸ್ ನುಡಿಸಿರಿಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಇವರ ಕಲಾಕೃತಿಗಳು ಪ್ರದರ್ಶನಗೊಂಡು ಅಪಾರ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ. ನೆರೆ ರಾಜ್ಯ ಕೇರಳದಲ್ಲೂ ಇವರ ಕಲಾಕೃತಿಗಳು ಪ್ರದರ್ಶನಗೊಂಡಿವೆ.

ಕಾರ್ಕಳದ ಹೊಸ್ಮಾರು ನೂರಾಳ್ ಬೆಟ್ಟಿನ ನಿವಾಸಿಯಾಗಿರುವ ಸುರೇಂದ್ರ ಅವರು ಶ್ರೀಮತಿ ಲಲಿತಾ ಆಚಾರ್ಯ ಹಾಗೂ ಶ್ಯಾಮರಾಯ ಆಚಾರ್ಯ ದಂಪತಿಗಳ ಪುತ್ರ. ತಂದೆ ಶ್ಯಾಮರಾಯ ಆಚಾರ್ಯ ಅವರು ಪಾರಂಪರಿಕ ಮರಗೆಲಸದ ನುರಿತ ಕೆಲಸಗಾರರು. ತಾಯಿ ಮನೆವಾರ್ತೆಯೊಂದಿಗೆ ಹೈನುಗಾರಿಕೆ ಮಾಡುತ್ತಿದ್ದಾರೆ. ಸುರೇಂದ್ರ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ನೂರಾಳ್ ಬೆಟ್ಟು ಮತ್ತು ಹೊಸ್ಮಾರುಗಳಲ್ಲಿ ಮಾಡಿದ್ದಾರೆ.

ಬಜೆಗೋಳಿಯಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿ, ಕಾರ್ಕಳದಲ್ಲಿ ಇಲೆಕ್ಟ್ರಿಕಲ್ ಕೋರ್ಸ್ ಮಾಡಿದ್ದಾರೆ. ದೂರ ಶಿಕ್ಷಣ ಕ್ರಮದಲ್ಲಿ ’ಬೆಂಕಿ ಮತ್ತು ರಕ್ಷಣೆ’ ಎಂಬ ವಿಷಯದ ಮೇಲೆ ಡಿಪ್ಲೊಮಾ ಮಾಡಿದ್ದಾರೆ. ಮುದ್ರಣ ಮಾಧ್ಯಮ, ದೂರದರ್ಶನ ಮಾಧ್ಯಮಗಳು ಇವರ ಕಲಾಕೃತಿಗಳನ್ನು ಲೋಕಮುಖಕ್ಕೆ ಪರಿಚಯಿಸಿವೆ. ಸುರೇಂದ್ರ ಆಚಾರ್ಯರು ತಮ್ಮ ಕಲಾಕೃತಿಗಳ ಮೂಲಕ ಪ್ರಚಾರ ಪಡೆದರು. ಗಿನ್ನಿಸ್ ದಾಖಲೆ ಬರೆದರು. ಆದರೆ ಅವರ ಬದುಕಿನ ಬವಣೆಯ ಭಾರ ಹಗುರವಾಗಿಲ್ಲ. ಮೆಸ್ಕಾಂನ ಕಾರ್ಕಳ ವಿಭಾಗದಲ್ಲಿ ಸ್ಟೇಷನ್ ಸಹಾಯಕರಾಗಿ ಹನ್ನೊಂದು ವರ್ಷಗಳಿಂದ ತಾತ್ಕಾಲಿಕ ನೆಲೆಯಲ್ಲಿ ದುಡಿಯುತ್ತಿದ್ದಾರೆ. ಕರ್ನಾಟಕ ಸರಕಾರ ನಿಗದಿ ಪಡಿಸಿದ ’ಕನಿಷ್ಠ ವೇತನ’ಕ್ಕಿಂತಲೂ ಕಡಿಮೆ ಸಂಬಳಕ್ಕೆ ದುಡಿಯುವ ಇವರು ಉದ್ಯೋಗ ಖಾತರಿಯಿಂದಲೂ ವಂಚಿತರಾಗಿದ್ದಾರೆ. ಜನಬಲ, ಧನಬಲ ಎರಡು ಇಲ್ಲದ ಈ ಬಡ ಕಲಾವಿದರ ಪಾಡು ಕೇಳುವವರಿಲ್ಲದಂತಾಗಿದೆ. ಆದ್ದರಿಂದ ಮನೆಯವರ ಒತ್ತಾಯವಿದ್ದರೂ ಮದುವೆಯನ್ನು ಮುಂದೂಡುತ್ತಾ ಬರುತ್ತಿದ್ದಾರೆ. ಉದ್ಯೋಗವೊಂದು ಶಾಶ್ವತವಾದರೆ ಮತ್ತೆ ಸಂಸಾರಿಗನಾಗುವ ಕನಸು ಈ ಗಿನ್ನಿಸ್ ದಾಖಲೆಯ ಕಲಾವಿದನದು. ಆದ್ದರಿಂದ ಮೆಸ್ಕಾಂನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಯೋಚಿಸಿ ಕಾರ್ಯ ಪ್ರವೃತ್ತರಾಗಬೇಕು.


ಪ್ರಚಾರ ದೊರೆತರೂ ಉಪಚಾರವಿಲ್ಲದೆ ಸೊರಗಿದ ಬದುಕು ಅವರದು. ಈಗಿರುವ ಉದ್ಯೋಗ ವ್ಯವಸ್ಥೆಯಲ್ಲಿ ಬದುಕಿನ ಬುತ್ತಿ ತುಂಬುತ್ತಿಲ್ಲ. ಹಾಗಿರುವಾಗ ಭವ್ಯ ಭವಿತವ್ಯದ ಯೋಜನೆಯನ್ನು ಹೇಗೆ ಮಾಡಲಿ ಎಂದು ವಿನಮ್ರವಾಗಿ ಪ್ರಶ್ನಿಸುತ್ತಾರೆ ಕಲಾವಿದ ಸುರೇಂದ್ರ ಆಚಾರ್ಯರು. ರಾಜಪ್ರಭುತ್ವದಂತೆ ಪ್ರಜಾಪ್ರಭುತ್ವದಲ್ಲೂ ಕಲಾವಿದರಿಗೆ ಮನ್ನಣೆ ಸಿಗುತ್ತ ಬಂದಿದೆ. ಆದರೆ ನಾನೇಕೆ ಅಸ್ಪೃಶ್ಯನಾಗಿ ಉಳಿದೆ? ನಾನೇಕೆ ಸರಕಾರದ ಅವಕೃಪೆಗೆ ಪಾತ್ರನಾದೆ? ಎಂಬ ಕೊರಗು ಅವರದು. ಜೀವನ ನಿರ್ವಹಣೆಗೆ ಪಾಡು ಪಡುವಂತಾಗಿದೆ. ಭವಿಷ್ಯದ ಬಾಳಿಗೆ ಉದ್ಯೋಗ ಒಂದು ಶಾಶ್ವತವಾದರೆ ಈ ಕಲಾವಿದರಿಂದ ಇನ್ನಷ್ಟು ಮತ್ತಷ್ಟು ಅಮೋಘವಾದ ಕಲಾಕೃತಿಗಳು ಸುಲಲಿತಲಾಗಿ ಮೂಡಿ ಬರುವುದಂತು ಸತ್ಯ.

ಆ ಮೂಲಕ ನಾಡಿಗೂ ದೇಶಕ್ಕೂ ಕೀರ್ತಿ ಬರುವುದಂತು ಪರಮ ಸತ್ಯ.


Get In Touch With Us info@kalpa.news Whatsapp: 9481252093

Tags: Guinness recordKannada News WebsiteLatest News KannadaMicro artworkPencilPencil SculptingTuluNaduಉಡುಪಿಕಾರ್ಕಳಗಿನ್ನಿಸ್ ದಾಖಲೆತುಳುನಾಡುಪಡುತಿರುಪತಿಪೆನ್ಸಿಲ್ಹೈನುಗಾರಿಕೆ
Previous Post

ಅನಾವಶ್ಯಕವಾಗಿ ವಾಹನ ಚಲಾಯಿಸಿದರೆ ಕಾನೂನು ಕ್ರಮ: ಡಿವೈಎಸ್’ಪಿ ಶ್ರೀಧರ್

Next Post

ಜಿಲ್ಲೆಯಲ್ಲಿ ಇಂದು 33 ಹೊಸ ಕೊರೋನಾ ಪಾಸಿಟಿವ್: ಸೋಂಕಿತರ ಸಂಖ್ಯೆ 318ಕ್ಕೆ ಏರಿಕೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಜಿಲ್ಲೆಯಲ್ಲಿ ಇಂದು 33 ಹೊಸ ಕೊರೋನಾ ಪಾಸಿಟಿವ್: ಸೋಂಕಿತರ ಸಂಖ್ಯೆ 318ಕ್ಕೆ ಏರಿಕೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಕ್ರೈಸ್ಟ್‌ಕಿಂಗ್: ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ರ್‍ಯಾಂಕ್ ವಿಜೇತರಿಗೆ ಸನ್ಮಾನ

May 9, 2025

ಮೇ 10ರಿಂದ ಮೂರು ದಿನ ಶ್ರೀ ನರಸಿಂಹ ಜಯಂತಿ ಉತ್ಸವ, ಬ್ರಹ್ಮರಥೋತ್ಸವ

May 9, 2025

ಪಾಕ್ ದಾಳಿ ವಿಫಲ | ವೈಮಾನಿಕ ದಾಳಿ ನಡೆಸಿ ಭಾರತ ದಿಟ್ಟ ಉತ್ತರ

May 9, 2025

ಪಾಕಿಸ್ತಾನದ ಪ್ರಧಾನಿ ನಿವಾಸದ ಬಳಿಯೇ ಭಾರತ ಅಟ್ಯಾಕ್ | ಭಾರಿ ಸ್ಫೋಟಕ್ಕೆ ನಡುಕ

May 8, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಕ್ರೈಸ್ಟ್‌ಕಿಂಗ್: ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ರ್‍ಯಾಂಕ್ ವಿಜೇತರಿಗೆ ಸನ್ಮಾನ

May 9, 2025

ಮೇ 10ರಿಂದ ಮೂರು ದಿನ ಶ್ರೀ ನರಸಿಂಹ ಜಯಂತಿ ಉತ್ಸವ, ಬ್ರಹ್ಮರಥೋತ್ಸವ

May 9, 2025

ಪಾಕ್ ದಾಳಿ ವಿಫಲ | ವೈಮಾನಿಕ ದಾಳಿ ನಡೆಸಿ ಭಾರತ ದಿಟ್ಟ ಉತ್ತರ

May 9, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!