ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಬ್ ಕುಟುಂಬಕ್ಕೆ ಕೊರೋನಾ ಕಂಟಕವಾಗಿದ್ದು, ಈಗ ಐಶ್ವರ್ಯಾ ರೈ ಬಚ್ಚನ್ ಹಾಗೂ ಅವರ ಪುತ್ರಿ ಆರಾಧ್ಯಾಗೂ ಸಹ ಪಾಸಿಟಿವ್ ಬಂದಿದೆ.
ಈ ಮೊದಲು ಅಮಿತಾಬ್ ಹಾಗೂ ಅಭಿಶೇಕ್’ಗೆ ಪಾಸಿಟಿವ್ ಬಂದ ವೇಳೆ, ಇವರ ಕುಟುಂಬಸ್ಥರೆಲ್ಲರಿಗೂ ನೆಗೆಟಿವ್ ಬಂದಿತ್ತು. ಆದರೆ, ಎರಡನೆ ಬಾರಿ ಪರೀಕ್ಷೆ ಮಾಡಿದ ವೇಳೆ ಐಶ್ವರ್ಯಾ ಹಾಗೂ ಆರಾಧ್ಯಾಗೂ ಸಹ ಪಾಸಿಟಿವ್ ಬಂದಿದ್ದು, ಜಯಾ ಬಚ್ಚನ್’ಗೆ ನೆಗೆಟಿವ್ ಬಂದಿದೆ.
ಮುಂಬೈ ನಗರ ಪಾಲಿಕೆಯ ಉಪ ಆಯುಕ್ತ ಸುರೇಶ್ ಕಕಾನಿ ಈ ಬಗ್ಗೆ ಮಾಹಿತಿ ನಿಡಿದ್ದು, ಬಚ್ಚನ್ ಮನೆಯ ಕೆಲಸದವರನ್ನೂ ಸೇರಿಸಿ 16 ಜನರನ್ನು ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಕೆಲವು ವರದಿ ಇನ್ನು ಕೈ ಸೇರಬೇಕಿದೆ. ಐಶ್ವರ್ಯಾ ರೈ ಮತ್ತು ಆರಾಧ್ಯ ಅವರಿಗೆ ಯಾವುದೇ ಕೋವಿಡ್ ಸೋಂಕು ಲಕ್ಷಣಗಳಿಲ್ಲ. ಒಂದು ವೇಳೆ ಅವರು ಬಯಸಿದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು, ಇಲ್ಲದಿದ್ದರೆ ಮನೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುವುದು ಎಂದಿದ್ದಾರೆ.
ಅಮಿತಾಬ್ ಬಚ್ಚನ್ ಅವರ ನಿವಾಸವನ್ನು ಸ್ಯಾನಿಟೈಸ್ ಮಾಡಲಾಗಿದೆ. ಬಚ್ಚನ್ ನಿವಾಸಕ್ಕೆ ಯಾರಿಗೂ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗಿದೆ. ಈ ಪ್ರದೇಶವನ್ನು ಕಂಟೈನ್ಮೆಂಟ್ ಏರಿಯಾ ಎಂದು ಘೋಷಿಸಲಾಗಿದೆ.
Get In Touch With Us info@kalpa.news Whatsapp: 9481252093





Discussion about this post