ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕಠ್ಮಂಡು: ಅಖಂಡ ಹಿಂದೂ ಸಾಮ್ರಾಜ್ಯದ ಸಾಮ್ರಾಟ ಪ್ರಭು ಶ್ರೀರಾಮನ ಕುರಿತಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ವಿವಾದ ಏಳುವ ಎಲ್ಲ ಲಕ್ಷಣಗಳು ಕಾಣುತ್ತಿವೆ.
ಹೌದು… ಈ ಕುರಿತಂತೆ ಹಕ್ಕು ಪ್ರತಿಪಾದನೆ ಮಾಡಿರುವ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ, ದೇವನಾದ ರಾಮ ಭಾರತೀಯನಲ್ಲ. ಬದಲಾಗಿ ಅವನು ನೇಪಾಳಿ. ಅಲ್ಲದೇ, ರಾಮನ ನಿಜವಾದ ಜನ್ಮ ಸ್ಥಳ ಅಯೋಧ್ಯಾ ನೇಪಾಳದಲ್ಲಿದ್ದು, ಅದು ಭಾರತದಲ್ಲಿ ಇಲ್ಲ ಎಂದಿದ್ದಾರೆ.
ಭಾನುಭಕ್ತ ಆಚಾರ್ಯರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಪಿಎಂ ಒಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಿಜವಾದ ಅಯೋಧ್ಯೆ ಬಿರ್ಗುಂಜ್ನ ಪಶ್ಚಿಮದಲ್ಲಿರುವ ಥೋರಿಯಲ್ಲಿ ನೆಲೆಗೊಂಡಿದೆ. ಆದರೂ, ಭಗವಾನ್ ರಾಮ ಅಲ್ಲಿಯೇ ಜನಿಸಿದನೆಂದು ಭಾರತ ಹೇಳಿಕೊಂಡಿದೆ. ಈ ನಿರಂತರ ಹಕ್ಕುಗಳಿಂದಾಗಿ, ದೇವತೆ ಸೀತಾ ಭಾರತದ ರಾಜಕುಮಾರ ರಾಮನನ್ನು ಮದುವೆಯಾದರು ಎಂದು ನಾವು ನಂಬಿದ್ದೇವೆ. ಆದಾಗ್ಯೂ, ವಾಸ್ತವದಲ್ಲಿ, ಅಯೋಧ್ಯೆ ಬಿರ್ಗುಂಜ್ನ ಪಶ್ಚಿಮಕ್ಕೆ ಇರುವ ಹಳ್ಳಿಯಾಗಿದೆ ಎಂದಿದ್ದಾರೆ.
ನಕಲಿ ಅಯೋಧ್ಯೆಯನ್ನು ಸೃಷ್ಟಿಸುವ ಮೂಲಕ ಭಾರತವನ್ನು ಸಾಂಸ್ಕೃತಿಕ ಅತಿಕ್ರಮಣ ಮಾಡಿದೆ ಎಂದು ಆರೋಪಿಸಿದ್ದಾರೆ.
ಈವರೆಗೆ ನಾವು ಸೀತಾಳನ್ನು ಮದುವೆಯಾದ ರಾಮ ಒಬ್ಬ ಭಾರತೀಯನೆಂಬ ನಂಬಿಕೆಯಲ್ಲಿಯೇ ಉಳಿದಿದ್ದೇವೆ. ಅವನು ಭಾರತೀಯನಲ್ಲ, ಬದಲಾಗಿ ನೇಪಾಳಿ. ಬಾಲ್ಮಿಕಿ ಆಶ್ರಮ ನೇಪಾಳದಲ್ಲಿದೆ ಎಂದಿದ್ದಾರೆ.
ನೇಪಾಳ ಪ್ರಧಾನಿಯ ಈ ಗಂಭೀರ ಆರೋಪಕ್ಕೆ ಭಾರತ ಸರ್ಕಾರ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎಂಬ ಕುತೂಹಲ ಈಗ ಸೃಷ್ಠಿಯಾಗಿದೆ.
Get In Touch With Us info@kalpa.news Whatsapp: 9481252093
Discussion about this post