ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ತಾಲೂಕಿನಾದ್ಯಂತ ಇಂದು ಏಳು ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.
ಹೊಸಮನೆ ಬಡಾವಣೆಯ ನಾಲ್ಕನೆಯ ತಿರುವಿನಲ್ಲಿ 8 ವರ್ಷದ ಬಾಲಕ, ಮತ್ತು 46 ವರ್ಷದ ಪುರುಷ, ವಿಜಯನಗರ ಬಡಾವಣೆಯಲ್ಲಿ 73ವರ್ಷದ ವೃದ್ಧ, ಕಾಗದನಗರದ 6ನೆಯ ವಾರ್ಡ್‌ನಲ್ಲಿ 32 ವರ್ಷದ ಪುರುಷ, ಕಾರೆಹಳ್ಳಿ ಗ್ರಾಮದಲ್ಲಿ 36 ವರ್ಷದ ಮಹಿಳೆ, ಬೆಳ್ಳಿಗೆರೆಯ ಭೈರನ ಕ್ಯಾಂಪ್‌ನಲ್ಲಿ 26 ವರ್ಷದ ಯುವಕ, ಹಾಗೂ ಗೋಣಿಬೀಡಿನಲ್ಲಿ 24 ವರ್ಷದ ಪುರುಷ ಸೇರಿದಂತೆ ಏಳುಜನರಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.
ಸೋಂಕಿತರ ನಿವಾಸದ ಸ್ಥಳಗಳಿಗೆ ತಾಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ, ನಗರಸಭೆ ಆಯುಕ್ತ ಮನೋಹರ್, ಆರೋಗ್ಯ ಇಲಾಖೆ ಸಿಬ್ಬಂದಿ ನೀಲೇಶ್‌ರಾಜ್, ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಸೋಂಕಿತರನ್ನು ಶಿವಮೊಗ್ಗದ ಕೋವಿಡ್ ಚಿಕಿತ್ಸಾ ಘಟಕಕ್ಕೆ ರವಾನಿಸಿದರು.
Get In Touch With Us info@kalpa.news Whatsapp: 9481252093

















