ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಅಯೋಧ್ಯೆ: ಇಡಿಯ ವಿಶ್ವವೇ ತಿರುಗಿ ನೋಡುವಂತ ಕ್ಷಣಕ್ಕೆ ಭಾರತ ಸಾಕ್ಷಿಯಾಗಿದ್ದು, ಕೋಟ್ಯಂತರ ಹಿಂದೂಗಳ ನೂರಾರು ವರ್ಷಗಳ ಬಯಕೆಯಂತೆ ರಾಮ ಜನ್ಮ ಭೂಮಿಯನ್ನು ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಿದ್ದಾರೆ.
ಇಂದು ಮಧ್ಯಾಹ್ನ 12.15ಕ್ಕೆ ನಡೆದ ಶುಭ ಮುಹೂರ್ತದಲ್ಲಿ ಪೂಜೆ ಸಲ್ಲಿಸಿದ 50 ಕೆಜಿ ತೂಕದ ಬೆಳ್ಳಿಯ ಇಟ್ಟಿಗೆ ಇರಿಸುವ ಮೂಲಕ ರಾಮ ಮಂದಿರ ನಿರ್ಮಾಣಕ್ಕೆ ಅಧಿಕೃತ ಚಾಲನೆಯನ್ನು ಪ್ರಧಾನಿಯವರು ನೀಡಿದ್ದಾರೆ.
श्रीराम जन्मभूमि मंदिर हेतु भूमिपूजन एवं कार्यारम्भ कार्यक्रम में आदरणीय प्रधानमंत्री श्री @narendramodi जी के साथ मुख्यमंत्री श्री @myogiadityanath जी… निवेदक : श्री राम जन्मभूमि तीर्थ क्षेत्र… https://t.co/i1GxglSkgl
— Shri Ram Janmbhoomi Teerth Kshetra (@ShriRamTeerth) August 5, 2020
ರಾಮ ಜನ್ಮ ಭೂಮಿಗೆ ಆಗಮಿಸಿದ ಪ್ರಧಾನಿಯವರು ಮೊದಲು ಬಾಲ ರಾಮನ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿ, ಮುಂಭಾಗದಲ್ಲಿಯೇ ಪಾರಿಜಾತ ಗಿಡವನ್ನು ನೆಟ್ಟು, ನೀರು ಎರೆದರು. ಈ ವೇಳೆ ರಾಮದೇವರಿಗೆ ಪ್ರಧಾನಿಯವರು ದೀರ್ಘದಂಡ ನಮಸ್ಕಾರ ಹಾಕಿದ್ದು ವಿಶೇಷವಾಗಿತ್ತು.
ಆನಂತರ ಭೂಮಿ ಪೂಜಾ ಸ್ಥಳಕ್ಕೆ ಆಗಮಿಸಿದ ಪ್ರಧಾನಿಯವರು ಹಿಂದೂ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು.
ಗಣಪತಿ ಪ್ರಾರ್ಥನೆಯೊಂದಿಗೆ ಪೂಜೆ ಆರಂಭವಾಯಿತು. ಪ್ರಧಾನಿಯವರೇ ದೇಶವನ್ನು ಮುನ್ನಡೆಸುವ ಯಜಮಾನರಾಗಿರುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯವರ ಗೋತ್ರ, ನಕ್ಷತ್ರ ಹಾಗೂ ರಾಶಿಯನ್ನು ಪುರೋಹಿತರು ಪಠಿಸಿ, ಸ್ವರಾಜ್ಯದ ಯಜಮಾನ ಎಂದು ಸಂಕಲ್ಪ ಮಾಡಿದರು.
Get In Touch With Us info@kalpa.news Whatsapp: 9481252093
Discussion about this post