ಶ್ರೀನಗರ, ಸೆ. 5: ಹಿಂದೂ, ಇಂದು, ಮುಂದು, ಎಂದೆಂದೂ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿರುತ್ತದೆ. ಅಲ್ಲದೆ ಪ್ರತಿ ಭಾರತೀಯನೂ ಕಾಶ್ಮೀರದ ಪರಿಸ್ಥಿತಿ ಸುಧಾರಿಸಬೇಕು ಎಂದು ಭಯಸುತ್ತಾನೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಪಾಕಿಸ್ತಾನಕ್ಕೆ ಟಾಂಗ್ ನೀಡಿದ್ದಾರೆ.
ಈ ಕುರಿತಂತೆ ಇಂದು ಮಾತನಾಡಿರುವ ಅವರು, ಪ್ರತ್ಯೇಕತಾವಾದಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ”ಯಾರಾದರೂ ಮಾತುಕತೆಗೆ ಹೋದರೆ ಪ್ರತ್ಯೇಕತಾವಾದಿಗಳು ನಿರಾಕರಿಸಿದರೆ ಅವರು ಕಾಶ್ಮೀರಿಗಳನ್ನು, ಮಾನವೀಯತೆಯನ್ನು ನಂಬುವುದಿಲ್ಲವೆಂದೇ ಅರ್ಥ. ಸರ್ವಪಕ್ಷ ನಿಯೋಗದ ಕೆಲ ಸದಸ್ಯರು ಹುರ್ರಿಯತ್ ಮುಖಂಡರನ್ನು ಭೇಟಿ ಮಾಡಲು ಹೋಗಿದ್ದರು, ಸರ್ಕಾರ ಒಪ್ಪಿಗೆ ನೀಡಿದೆಯೇ ಎಂದು ಕೇಳಿದ್ದಕ್ಕೆ ಒಪ್ಪಿಕೊಳ್ಳಲೂ ಇಲ್ಲ, ನಿರಾಕರಿಸಲೂ ಇಲ್ಲ ಎಂದರು.
ಕಾಶ್ಮೀರದಲ್ಲಿ ಶಾಂತಿ ನೆಲೆಸಲು ನಿಜಾವವಾಗಿ ಯಾರು ಭಯಸುತ್ತಾರೋ ಅವರು ಮುಂದೆ ಬರಲಿ. ಅವರೊಂದಿಗೆ ಮಾತುಕತೆ ನಡೆಸಲು ನಾವು ಸಿದ್ಧರಿದ್ದೇವೆ. ಈ ನಿಟ್ಟಿನಲ್ಲಿ ಎಲ್ಲ ರೀತಿಯ ಸಹಕಾರ ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದಿದ್ದಾರೆ.
ಹಿಜಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವನಿ ಹತ್ಯೆ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಸುಮಾರು ಒಂದು ತಿಂಗಳು ನಡೆದ ಗಲಭೆ ಯಲ್ಲಿ ಇದುವರೆಗೂ ಸುಮಾರು 74 ಮಂದಿ ಬಲಿಯಾಗಿದ್ದು, 12000 ಮಂದಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಣಿವೆ ರಾಜ್ಯದಲ್ಲಿ ಶಾಂತಿ ಕಾಪಾಡಲು ಶ್ರಮಿಸುತ್ತಿದೆ. ಆದರೆ ಪಾಕ್ ಪ್ರೇರಿತ ಪ್ರತ್ಯೇಕತಾವಾದಿಗಳು ಹಾಗು ದುಷ್ಕರ್ಮಿಗಳು ಶಾಂತಿ ಕಾದಾಡುತ್ತಲೇ ಇದ್ದಾರೆ.
KRCS Shikaripura Achieves 100% Result in CBSE Class X Board Exams
Kalpa Media House | Shikaripura | Kumadvathi Residential Central School (KRCS), Shikaripura, has achieved a 100% pass result in the...
Read moreDetails














