ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕಟುಕರ ಕ್ರೂರ ಕೈನಿಂದ ತಪ್ಪಿಸಿಕೊಂಡು ಬಂದ ಗಾಯಗೊಂಡ ಹಸುವೊಂದನ್ನು ಬಜರಂಗದಳ ಕಾರ್ಯಕರ್ತರು ರಕ್ಷಿಸಿ, ಚಿಕಿತ್ಸೆ ನೀಡಿರುವ ಘಟನೆ ನಗರದಲ್ಲಿ ನಡೆದಿದೆ.
ಬೊಮ್ಮನಕಟ್ಟೆಯಲ್ಲಿ ಗೋವೊಂದನ್ನು ಕತ್ತರಿಸುವ ಪ್ರಯತ್ನದಲ್ಲಿ ಜೀವಂತ ಹಸುವಿನ ಚರ್ಮವನ್ನು ಕಟುಕರು ಸುಲಿದಿದ್ದಾರೆ. ಆದರೆ, ಈ ವೇಳೆ ಹಸು ಅಲ್ಲಿಂದ ತಪ್ಪಿಸಿಕೊಂಡು ಹುಡ್ಕೋ ಕಾಲೋನಿವರೆಗೂ ನರಳುತ್ತಲೇ ಓಡಿ ಬಂದಿದೆ. ತತಕ್ಷಣ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಬಜರಂಗ ದಳದ ತಾಲೂಕು ಸಂಚಾಲಕವೇಲು ಮತ್ತು ಭದ್ರಾವತಿ ನಗರ ಸಹ ಸಂಯೋಜಕರಾದ ಕಿರಣ್ ನೇತೃತ್ವದ ತಂಡ ಹಸುವನ್ನು ರಕ್ಷಿಸಿದ್ದಾರೆ.
ಕಾರ್ಯಕರ್ತರು ಸ್ಥಳಕ್ಕೆ ಭೇಟಿ ನೀಡಿದಾಗ ಕಂಡಿದ್ದ ಮನ ಕಲುಕುವ ಹೃದಯ ವಿದ್ರಾವಕ ದೃಶ್ಯ. ಕಟುಕರು ಜೀವಂತವಿದ್ದ ಹಸುವಿನ ಕಾಲಿನ ಚರ್ಮವನ್ನೇ ಸುಲಿದು ವಿಕೃತಿ ಮೆರೆದಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಹಸು ಅಕ್ಷರಶಃ ನರಕ ವೇದನೆ ಅನುಭವಿಸುತ್ತಿತ್ತು. ಬಜರಂಗದಳದ ಕಾರ್ಯಕರ್ತರು ತಕ್ಷಣ ಆ ಗೋವಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಸೂಕ್ತ ರೀತಿಯ ಆರೈಕೆ ಮಾಡಿಸಿ ಆ ಗೋವು ಗುಣಮುಖವಾಗುವವರೆಗೂ ಪ್ರಾಣಿ ಪ್ರಿಯರಾದ ಸ್ಥಳೀಯ ನಿವಾಸಿಯೊಬ್ಬರಿಗೆ ಗೋವಿನ ಜವಾಬ್ದಾರಿ ವಹಿಸಿದ್ದಾರೆ.
ಹೆಚ್ಚು ಕಾಫಿ ಕುಡಿದರೆ ಗ್ಯಾಸ್ಟ್ರಿಕ್ ಗ್ಯಾರೆಂಟಿ | ಜೀವನಶೈಲಿ ಹೀಗಿರಲಿ | Gastric | Tips For Healthy Life
ಆರೋಗ್ಯ ಸಲಹೆ ಕುರಿತಾಗಿ ನಿರಂತರ ಮಾಹಿತಿ ಪಡೆಯಲು ಕಲ್ಪ ಯೂಟ್ಯೂಬ್ ಚಾನಲ್’ಗೆ Free subscribe ಆಗಿ, ಲೈಕ್ ಮಾಡಿ ಹಾಗೂ ಶೇರ್ ಮಾಡಿ
ಈ ವಿಚಾರವಾಗಿ ಭದ್ರಾವತಿ ಬಜರಂಗದಳದ ವತಿಯಿಂದ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಬಜರಂಗದಳದ ಜಿಲ್ಲಾ ಸಂಚಾಲಕ ಸುನಿಲ್ ಕುಮಾರ್, ಈ ರೀತಿಯ ಹೀನ ಕೃತ್ಯ ಹೇಸಗಿರುವ ರಾಕ್ಷಸರನ್ನು ಪತ್ತೆ ಮಾಡಿ ಅವರ ವಿರುದ್ಧ ಸೂಕ್ತ ರೀತಿಯ ಕಠಿಣ ಕಾನೂನು ಕ್ರಮ ಜರುಗಿಸ ಬೇಕು ಎಂದು ಆಗ್ರಹಿಸಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post