ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಇತ್ತೀಚೆಗಷ್ಟೆ ಜಿಲ್ಲೆಯ ಪೊಲೀಸ್ ಅಧಿಕಾರಿಯೋರ್ವರ ಫೇಸ್‌ಬುಕ್ ಅಕೌಂಟ್ ಹ್ಯಾಕ್ ಆಗಿದ್ದ ಬೆನ್ನಲ್ಲೇ, ಇದೀಗ ಇನ್ಸ್‌ಪೆಕ್ಟರ್ ಓರ್ವರ ಫೇಸ್‌ಬುಕ್ ಅಕೌಂಟ್ ಕೂಡ ಹ್ಯಾಕ್ ಆದ ಘಟನೆ ವರದಿಯಾಗಿದೆ.
ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ್ ಅವರ ಫೇಸ್‌ಬುಕ್ ಖಾತೆ ಹ್ಯಾಕ್ ಮಾಡಲಾಗಿದೆ. ಫೇಸ್‌ಬುಕ್ ಸ್ನೇಹಿತರಿಗೆ ಹಣ ಕಳುಹಿಸುವಂತೆ ಸಂದೇಶವನ್ನು ಹ್ಯಾಕರ್ಸ್’ಗಳು ಕಳುಹಿಸುತ್ತಿದ್ದಾರೆ.
ಇನ್ಸ್‌ಪೆಕ್ಟರ್ ರವರ ಫೋಟೋ ಬಳಸಿ, ನಕಲಿ ಅಕೌಂಟ್ ಸೃಷ್ಟಿಸುರುವ ಹ್ಯಾಕರ್ಸ್’ಗಳು, ಫ್ರೆಂಡ್ಸ್ ರಿಕ್ವೆಸ್ಟ್ ಹಾಗೂ ಮೆಸೆಂಜರ್ ತಾಣದ ಮೂಲಕ ಸಂದೇಶ ಕಳುಹಿಸುತ್ತಿದ್ದಾರೆ.
’ತಾವು ಸಂಕಷ್ಟದಲ್ಲಿದ್ದು, ತುರ್ತಾಗಿ ತಮ್ಮ ಅಕೌಂಟ್’ಗೆ ಹಣ ಕಳುಹಿಸುವಂತೆ’ ಹ್ಯಾಕರ್ಸ್’ಗಳು ಕೋರುತ್ತಿದ್ದಾರೆ. ಈ ನಡುವೆ ಅಭಯ್ ಪ್ರಕಾಶ್ ಸೋಮನಾಳ್ ಅವರು ತಮ್ಮ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದ್ದು, ಅದರಲ್ಲಿ ಬರುವ ಸಂದೇಶ ನಂಬದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಮನವಿ ಮಾಡಿಕೊಂಡಿದ್ದಾರೆ.
Get In Touch With Us info@kalpa.news Whatsapp: 9481252093















