ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಸಮಾಜಕ್ಕೆ ಮಾರಕವಾಗಿ ಕಾಡುತ್ತಿರುವ ಗಾಂಜಾವನ್ನು ರಾಜ್ಯದಿಂದ ಹೊಡೆದೋಡಿಸಿ, ಗಾಂಜಾ ಮುಕ್ತ ಕರ್ನಾಟಕವಾಗಬೇಕು ಎಂದು ಬಜರಂಗದಳದ ವತಿಯಿಂದ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾ ಸಂಚಾಲಕ ಸುನಿಲ್ ಕುಮಾರ್, ಮಾನವನ ಮಿದುಳಿನ ಕಾರ್ಯ ವಿಧಾನವನ್ನು ಬದಲಾಯಿಸುವ ರಾಸಾಯನಿಕ ಡ್ರಗ್ಸ್’ಗಳು ಮಿದುಳಿಗೆ ಪ್ರವೇಶಿಸಿ, ಮಿದುಳಿನಲ್ಲಿ ಉತ್ಪಾದನೆಯಾಗುವ ನೈಸರ್ಗಿಕವಾದ ರಾಸಾಯನಿಕಗಳ ಪ್ರಮಾಣವನ್ನು ಕುಗ್ಗಿಸುತ್ತದೆ. ಕಾಫಿ, ಮದ್ಯ, ತಂಬಾಕು, ದೀರ್ಘಕಾಲದ ಔಷಧ ಸೇವನೆ, ಮನೋಲ್ಲಾಸಕ್ಕಾಗಿ ಬಳಸುವ ಕೃತಕ ಸಾಧನಗಳು ಮುಂತಾದ ಎಲ್ಲವುಗಳನ್ನು ಡ್ರಗ್ಸ್ ಎಂದು ಕರೆಯಬಹುದು ಹಾಗೂ ಇದರಿಂದ ಯುವ ಶಕ್ತಿಯ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡುತ್ತಿದೆ. ಆದ್ದರಿಂದ ನಾವುಗಳು ಮಾದಕ ವ್ಯಸನಗಳಿಗೆ ದಾಸರಾಗುತ್ತಿರುವಂತ ಯುವ ಜನತೆಗೆ ಸರಿ ದಾರಿಗೆ ತರುವುದು ನಾಗರಿಕರಾದ ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ತಾಲೂಕು ಸಂಚಾಲಕ ವಡಿವೇಲು ಮಾತನಾಡಿ, ವಾಸ್ತವವೆಂದರೆ ವ್ಯಸನಿಗಳಾಗಲು ವಂಶವಾಹಿ ಮತ್ತು ಸುತ್ತಮುತ್ತಲಿನ ವಾತಾವರಣ ಹೆಚ್ಚಿನ ಕಾರಣವಾಗಿರಬಹುದು. ಜೊತೆಗೆ ಇದು ವ್ಯಕ್ತಿಗತ ಆಯ್ಕೆಯೂ ಆಗಿರಬಹುದು. ಧೂಮಪಾನ, ಗಾಂಜಾ ಮುಂತಾದವುಗಳನ್ನು ಸೇದುವುದು, ಇಂಜೆಕ್ಷನ್ ಚುಚ್ಚಿಕೊಳ್ಳುವುದು, ಜಗಿಯುವುದು ಮತ್ತು ಕುಡಿಯುವುದು ಮುಂತಾಗಿ ಅನೇಕ ವಿಧದಲ್ಲಿ ಮಾದಕ ದ್ರವ್ಯಗಳನ್ನು ಬಳಸಲಾಗುತ್ತಿದೆ. ಸಮಾಜಕ್ಕೆ ಮಾರಕವಾಗಿರುವ ಇದನ್ನು ಹೊಡೆದೋಡಿಸಬೇಕು ಎಂದು ಕರೆ ಕೊಟ್ಟರು.
ಬಜರಂಗದಳ ಭೂತನಗುಡಿ ಘಟಕದ ಕೃಷ್ಣ, ಮಣಿಕಂಠ, ರೋಹಿತ್ ಶಿವಾಜಿ, ರಘು, ಶ್ರೀಕಾಂತ್ ರವರ ನೇತೃತ್ವದಲ್ಲಿ ನಶೆ ಮುಕ್ತ ಭಾರತ ಹಾಗೂ ಗಾಂಜಾ ಮುಕ್ತ ಕರ್ನಾಟಕದ ಸಹಿ ಸಂಗ್ರಹಣೆ ಅಭಿಯಾನ ನಡೆಸಲಾಯಿತು. ಬಜರಂಗದಳದ ಗ್ರಾಮಾಂತರ ಸಂಚಾಲಕರಾದ ಕೆ.ಎಸ್. ವಾಗೀಶ್ ಮತ್ತು ನಗರ ಸಹ ಸಂಯೋಜಕರಾದ ಕಿರಣ್ ಭಾಗವಹಿಸಿದ್ದರು.
ಮಣಿಕಂಠ ಅವರ ಅದ್ಬುತ ನಿರೂಪಣೆಯು ಪ್ರಭು ಶ್ರೀರಾಮನ ಘೋಷಣೆಯೊಂದಿಗೆ ಪ್ರಾರಂಭವಾಗಿ ಬಜರಂಗದಳದ ಶಾಂತಿ ಮಂತ್ರದೊಂದಿಗೆ ಕೊನೆಗೊಂಡಿತು.
Get In Touch With Us info@kalpa.news Whatsapp: 9481252093
Discussion about this post