ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಪ್ರಮುಖ ಅಗ್ನಿಶಾಮಕರಾಗಿ ಮುಂಬಡ್ತಿ ಹೊಂದಿ ಕಾರವಾರದ ಹಳಿಯಾಳ ಠಾಣೆಗೆ ವರ್ಗಾವಣೆ ಗೊಂಡಿರುವ ಬಾಬು ಎಸ್. ಗೌಡ ಅವರಿಗೆ ಸನ್ಮಾನಿಸಿ ಬೀಳ್ಕೊಡಲಾಯಿತು.
ಸ್ಥಳೀಯ ಅಗ್ನಿಶಾಮಕ ಠಾಣೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಗ್ನಿಶಾಮಕ ಠಾಣಾಧಿಕಾರಿ ಎನ್. ವಸಂತಕುಮಾರ್, ಠಾಣೆಯ ಎಲ್ಲ ಸಿಬ್ಬಂದಿಗಳೊಂದಿಗೆ ಉತ್ತಮ ಒಡನಾಡಿಯಾಗಿ. ತಮಗೆ ವಹಿಸಿದ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿಭಾಯಿಸಿ ಇದೀಗ ಪದೋನ್ನತಿ ಹೊಂದಿ ವರ್ಗಾವಣೆಗೊಂಡಿರುವ ಬಾಬು ಗೌಡ ಅವರು ಮುಂದಿನ ದಿನಗಳಲ್ಲೂ ಉತ್ತಮ ಕರ್ತವ್ಯ ಮುಂದುವರೆಸಲಿ ಎಂದು ಶುಭ ಹಾರೈಸಿದರು.
ಬೀಳ್ಕೊಡುಗೆ ಹಾಗೂ ಸನ್ಮಾನ ಸ್ವೀಕರಿಸಿದ ಬಾಬು ಎಸ್. ಗೌಡ ಅವರು ಭೇಟಿ ಆಕಸ್ಮಿಕ, ಅಗಲಿಕೆ ಅನಿವಾರ್ಯ. ಹತ್ತು ವರ್ಷಗಳ ಕಾಲ ನನಗೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞನಾಗಿರುವೆ ಎಂದು ಹೇಳುತ್ತಾ ಭಾವುಕರಾದರು.
ಅ.ಶಾ. ವಿನೂತನ್ ಮಾತನಾಡಿ, ಠಾಣೆಯಲ್ಲಿ ತಮ್ಮೊಂದಿಗೆ ಎಂಟು ವರ್ಷಗಳಿಂದ ಒಡನಾಡಿಯಾಗಿದ್ದ ಬಾಬುರವರು ಅಜಾತಶತ್ರು ಎಂದರು.
ಅ.ಶಾ.ಚಾಲಕ ಡಿ.ಎನ್. ಸುರೇಶ್ ಮಾತನಾಡಿ, ಬಾಬುರವರು ಚಾಲಕರು, ಸಿಬ್ಬಂದಿಗಳು ಎಂಬ ಯಾವುದೇ ಬೇಧ ಭಾವ ಮಾಡದೇ ಠಾಣೆಯ ಮತ್ತು ಸಿಬ್ಬಂದಿಗಳ ವಸತಿಗೃಹಗಳಿಗೆ ಸಂಬಂಧಪಟ್ಟ ಎಲ್ಲಾ ರೀತಿಯ ಕೆಲಸಗಳನ್ನು ನಿರ್ವಹಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಠಾಣೆಯಲ್ಲಿ 30 ವರ್ಷಗಳಿಂದ ಸ್ವೀಪರ್ ಕೆಲಸ ಮಾಡಿ ನಿವೃತ್ತರಾದ ಮಹಿಮೂಮ(ಕಾಕಮ್ಮ) ಅವರನ್ನೂ ಸನ್ಮಾನಿಸಿ ಗೌರವಿಸಲಾಯಿತು.
ಪ್ರಮುಖ ಅಗ್ನಿಶಾಮಕ ಕೆ.ಎಸ್. ರಮೇಶ್ ಎಲ್ಲರನ್ನೂ ಸ್ವಾಗತಿಸಿ, ಅ.ಶಾ. ಎಂ. ವಿನೂತನ್ ಪ್ರಾರ್ಥಿಸಿದರು., ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭದಲ್ಲಿ ಅ.ಶಾ. ಚಾಲಕರುಗಳಾದ ಎಚ್.ವಿ. ಸುರೇಶಾಚಾರ್, ಎಸ್.ಎಚ್. ಕುಮಾರ್, ಜಿ.ಟಿ. ಶ್ರೀನಿವಾಸ್, ಅ.ಶಾ. ಸಿಬ್ಬಂದಿ ಆರ್. ಕರಿಯಣ್ಣ, ಎಂ.ಸಿ. ಮಹೇಂದ್ರ, ಎಚ್.ಎಂ. ಹರೀಶ್, ಕೆ.ಎಚ್. ರಾಜಾನಾಯ್ಕ್, ಗೃಹರಕ್ಷಕ ಸಿಬ್ಬಂದಿಗಳಾದ ಪರಮೇಶ್ವರ ನಾಯ್ಕ, ಕೆ.ಆರ್. ಶಂಕರ್, ಜಿ.ಸುರೇಶ್, ಡಿ.ಜಿ. ಸುನೀಲ್, ಸ್ವೀಪರ್’ಗಳಾದ ಮುಬಾರಕ್ ಮತ್ತು ವೆಂಕಟೇಶ್ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post