No Result
View All Result
Railway Board hubballi-rameswaram-train-extended-9-trip
English Articles

Railway Board Hubballi–Rameswaram Special Express Services Extended

by kalpa News
September 3, 2026
0

Kalpa Media House  |  Hubballi   | In a move aimed at managing the additional passenger rush during the festive season,...

Read moreDetails
Indian Railways Nepalganj Bahraich Line Upgrade 730 Crore

Indian Railways Boosts Nepal Border Connectivity With ₹730 Crore Bahraich Rail Project

September 1, 2026
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
SWR food-safety-drive in Karnataka Railway Stations

SWR Intensifies Food Safety Checks Across Karnataka Railway Stations

August 28, 2026
  • Advertise With Us
  • Grievances
  • About Us
  • Contact Us
Friday, September 4, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಗುಡವಿಯಲ್ಲಿ ಪಕ್ಷಿ ಸಂತಾನ ಪ್ರಕ್ರಿಯೆಗೆ ಸುಸ್ಥಿರ ಅವಕಾಶ ಕಲ್ಪಿಸಿ: ಅನಂತ ಹೆಗಡೆ ಆಶಿಸರ

kalpa News by kalpa News
November 16, 2020
in Small Bytes, ಸೊರಬ
0
ಗುಡವಿಯಲ್ಲಿ ಪಕ್ಷಿ ಸಂತಾನ ಪ್ರಕ್ರಿಯೆಗೆ ಸುಸ್ಥಿರ ಅವಕಾಶ ಕಲ್ಪಿಸಿ: ಅನಂತ ಹೆಗಡೆ ಆಶಿಸರ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಸೊರಬ: ಜೀವವೈವಿಧ್ಯ ಮಂಡಳಿ ವತಿಯಿಂದ ಈಗಾಗಲೇ ಜಿಲ್ಲೆಯಕಾನುಅರಣ್ಯ ಪ್ರದೇಶಗಳ ಜೊತೆಗೆಜೀವವೈವಿಧ್ಯತೆಯ ಸಮತೋಲನಕ್ಕೆ ಪೂರಕವಾಗಿ ಅನೇಕ ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಪರಿಸರತಜ್ಞರು, ಪರಿಸರಾಸಕ್ತರು ಕೈ ಜೋಡಿಸುವ ಮೂಲಕ ಪರಿಸರ ಜಾಗೃತಿಯತ್ತ ಗಮನಹರಿಸಬೇಕು ಎಂದು ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತಹೆಗಡೆ ಅಶಿಸರ ಹೇಳಿದರು.


ಪಕ್ಷಿ ತಜ್ಞರ ತಂಡದೊಂದಿಗೆ ಶಿರಸಿಯ ಅಶಿಸರ ಕೈಲಾಸ ಗುಡ್ಡ ಸಮೀಪದಲ್ಲಿ ಪಕ್ಷಿವೀಕ್ಷಣೆ ಬಳಿಕ, ಬನವಾಸಿ ಗುಡ್ನಾಪುರಕೆರೆಯಲ್ಲಿ ತಂಗುವ ಪಕ್ಷಿ ವೀಕ್ಷಣೆ ನಡೆಸಿ ಸೊರಬ ತಾಲೂಕಿನ ಗುಡವಿಯಲ್ಲಿ ನಡೆದ ಶಿಬಿರವನ್ನುದ್ಧೇಶಿಸಿ ಅವರು ಮಾತನಾಡಿದರು.


ಪಕ್ಷಿ ತಜ್ಞ ಸುಹಾಸ ಹೆಗಡೆ ಮಾತನಾಡಿ, ರಾಜ್ಯದ ಬಹುದೊಡ್ಡ ವಿಸ್ತಾರವುಳ್ಳ ಗುಡವಿ ಪಕ್ಷಿಧಾಮಕ್ಕೆ ಪಕ್ಷಿತಜ್ಞರನ್ನು ಸೆಳೆವ ಮೂಲಕ ಇನ್ನಷ್ಟು ಅಭಿವೃದ್ಧಿಯಾಗಬೇಕು. ಅವುಗಳ ಸಂತಾನ ಪ್ರಕ್ರಿಯೆಗೆ ಇನ್ನಷ್ಟು ಸುಸ್ಥಿರ ಅವಕಾಶ ಮಾಡಿಕೊಡಬೇಕು ಎಂದರು.


ಜೀವವೈವಿಧ್ಯ ಅಧ್ಯಯನಕಾರ ಹೊಸಬಾಳೆ ಮಂಜುನಾಥ ಹೆಗಡೆ, ಇಕೋ ಟೂರಿಸಂ ಸ್ಪಾಟ್ ಆಗಬೇಕಾದ ಇಲ್ಲಿ ಆಗಾಗ್ಗೆ ನೀರಿನ ಗುಣಮಟ್ಟದ ಪರೀಕ್ಷೆ ಆಗಬೇಕು. ಪಕ್ಷಿಗಳು ಬತ್ತದ ಭೂಮಿಯನ್ನು ಹೆಚ್ಚು ಪ್ರೀತಿಸುತ್ತವೆ. ಅಲ್ಲಿನ ಕೀಟಗಳನ್ನು ತಮ್ಮ ಆಹಾರವನ್ನಾಗಿಸಿಕೊಂಡು ಬೆಳೆಯ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ರೈತನ ಮಿತ್ರವಾಗುತ್ತವೆ. ಈ ನಿಟ್ಟಿನಲ್ಲಿ ತಾಲೂಕಿನ ಚಂದ್ರಗುತ್ತಿ, ಕಸಬಾ, ಉಳವಿ, ಆನವಟ್ಟಿ ಹೋಬಳಿಗಳ ತರಿ ಜಮೀನಿನಲ್ಲಿ ಅತಿಯಾದ ರಾಸಾಯನಿಕ ಕೀಟನಾಶಕಗಳನ್ನು ಬಳಸದಂತೆ ಎಚ್ಚರವಹಿಸಬೇಕು. ಸುತ್ತಮತ್ತಲ ಜಲಾನಯನ ಪ್ರದೇಶಗಳಲ್ಲಿ ವಿಷಕಾರಕ ಅಂಶಗಳು ಸೇರದಂತೆ ನಿಗಾವಹಿಸಬೇಕಿದೆ ಎಂದರು.


ಶಿರಸಿ ಅರಣ್ಯ ಕಾಲೇಜು ಪ್ರಾಧ್ಯಾಪಕ ಶ್ರೀಧರ ಭಟ್ ಮಾತನಾಡಿ, ಪಕ್ಷಿ, ಉರಗತಜ್ಞ ಬಾಲಚಂದ್ರ ಸಾಯಿಮನೆ ಪಕ್ಷಿ ವಲಸೆ, ಅವುಗಳ ಚಲನವಲನ, ವಲಸೆ ಸಂದರ್ಭದಲ್ಲಿನ ಜಾಗೃತಿ, ಅವಶ್ಯ ಕಾರ್ಯಚಟುವಟಿಕೆ ಹಾಗೂ ಗುಡವಿಗೆ ಆಗಮಿಸುವ ವಿಶೇಷ ಪಕ್ಷಿ ಸಂಕುಲಗಳ ಕುರಿತಂತೆ ವಿಷಯ ಹಂಚಿಕೊಂಡರು.

ಪಕ್ಷಿಧಾಮದ ಅಭಿವೃದ್ಧಿ, ಇಕೋ ಡೆವಲಪ್‌ಮೆಂಟ್ ಕಮಿಟಿ, ಅಡ್ವೈಸಿಂಗ್ ಕಮಿಟಿ, ಮಂಗಗಳ ಉಪಟಳ, ಇನ್ನಷ್ಟು ವ್ಯವಸ್ಥಿತ ಅಧ್ಯಯನ ನಡೆಸುವ ಬಗ್ಗೆ, ಮುಖ್ಯಮಂತ್ರಿಗಳ ಬಳಿ ತೆರಳಲು ನಿಯೋಗವೊಂದನ್ನು ರಚಿಸುವ ಕುರಿತಂತೆ ಚರ್ಚೆ ನಡೆಯಿತು. ಚರ್ಚೆಯಲ್ಲಿ ಸೊರಬದ ಪರಿಸರ ಜಾಗೃತಿ ಟ್ರಸ್ಟ್‌ ಅಧ್ಯಕ್ಷ ಎಂ.ಆರ್. ಪಾಟೀಲ್, ಉಪಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ, ಪ್ರಧಾನ ಕಾರ್ಯದರ್ಶಿ ಸಿ.ಪಿ. ಈರೇಶಗೌಡ, ವೈದ್ಯ ಡಾ.ಜ್ಞಾನೇಶ್, ಮೋಹನ್ ಸುರಭಿ, ಹಾಲೇಶ್ ನವುಲೆ, ಕೃಷ್ಣಾನಂದ್, ಷಣ್ಮುಖಾಚಾರ್, ಮಂಜಪ್ಪ ಹುಲ್ತಿಕೊಪ್ಪ, ಸ್ಥಳೀಯ ಗ್ರಾಪಂ ಜೀವವೈವಿಧ್ಯ ಸಮಿತಿಯವರು ಇದ್ದರು.


ಗ್ರಾಮ ಪ್ರಮುಖರಾದ ನಾಗರಾಜಗೌಡ, ಯಂಕಪ್ಪ, ವೃಕ್ಷಲಕ್ಷ ಆಂದೋಲನದ ಗಣಪತಿ ಬಿಸಲಕೊಪ್ಪ, ವಿಶ್ವನಾಥ ಹೆಗಡೆ, ಸೋಂದಾ ರತ್ನಾಕರ್, ವನ್ಯಜೀವಿ ವಿಭಾಗದ ಎಸಿಎಫ್ ಶ್ರೀಧರನಾಯ್ಕ್‌, ಆರ್‌ಎಫ್‌ಒ ಪ್ರೀತಿ ನಾಯ್ಕ್‌, ಸೊರಬ ಅರಣ್ಯ ಇಲಾಖೆ ಎಸಿಎಫ್ ಪ್ರವೀಣ್ ಬಸ್ರೂರು, ಆರ್‌ಎಫ್‌ಒ ಪ್ರಭುರಾಜ ಪಾಟೀಲ್, ಆನವಟ್ಟಿ ರೇಂಜ್ ಆರ್‌ಎಫ್‌ಒ ಜಾವೀದ್ ಅಂಗಡಿ, ಡಿವೈಆರ್‌ಎಫ್‌ಒ ಮಂಜುನಾಥ್ ದೊಡ್ಡಮನಿ, ಅರಣ್ಯ ಇಲಾಖೆ ಡಿವೈಆರ್‌ಎಫ್‌ಒ ಯುವರಾಜ್, ಗಾರ್ಡ್ ಧನರಾಜ್, ಪಿಡಿಒ ರಾಜಶೇಖರ್, ವಾಚರ್ ರಾಮಪ್ಪ, ಇನ್ನೂ ಅನೇಕ ಅರಣ್ಯಅಧಿಕಾರಿ, ಸಿಬ್ಬಂದಿ ಇದ್ದರು.

(ವರದಿ: ಮಧುರಾಮ್, ಸೊರಬ)

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: Gudavi Bird SanctuaryKannada News WebsiteLatest News KannadaMalnad NewsShimogaShivamoggaShivamogga NewsSirsiSorabaಗುಡವಿ ಪಕ್ಷಿಧಾಮಜೀವವೈವಿಧ್ಯ ಮಂಡಳಿವನ್ಯಜೀವಿ ವಿಭಾಗಸೊರಬ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಪಟಾಕಿ ಕಿಡಿಯಿಂದ ಹೊತ್ತಿಕೊಂಡ ತೆಂಗಿನ ಮರ: ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ

Next Post

ತೀರ್ಥಹಳ್ಳಿಯ ಬಾಳೆಬೈಲು ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಡಿ.14ರವರೆಗೂ ಕಾರ್ತಿಕ ದೀಪೋತ್ಸವ

kalpa News

kalpa News

Next Post
ತೀರ್ಥಹಳ್ಳಿಯ ಬಾಳೆಬೈಲು ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಡಿ.14ರವರೆಗೂ ಕಾರ್ತಿಕ ದೀಪೋತ್ಸವ

ತೀರ್ಥಹಳ್ಳಿಯ ಬಾಳೆಬೈಲು ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಡಿ.14ರವರೆಗೂ ಕಾರ್ತಿಕ ದೀಪೋತ್ಸವ

Leave a Reply Cancel reply

Your email address will not be published. Required fields are marked *

No Result
View All Result
Railway Board hubballi-rameswaram-train-extended-9-trip
English Articles

Railway Board Hubballi–Rameswaram Special Express Services Extended

by kalpa News
September 3, 2026
0

Kalpa Media House  |  Hubballi   | In a move aimed at managing the additional passenger rush during the festive season,...

Read moreDetails
Indian Railways Nepalganj Bahraich Line Upgrade 730 Crore

Indian Railways Boosts Nepal Border Connectivity With ₹730 Crore Bahraich Rail Project

September 1, 2026
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
SWR food-safety-drive in Karnataka Railway Stations

SWR Intensifies Food Safety Checks Across Karnataka Railway Stations

August 28, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL