ಉಡುಪಿ: ಸೆ. 14: ಕಾಪು ರಾಷ್ಟ್ರೀಯ ಹೆದ್ದಾರಿ 66 ರ ಬಳಿಯಿರುವ ಸಾರ್ವಜನಿಕ ಹಿಂದೂ ರುದ್ರಭೂಮಿ ಪ್ರದೇಶ ಕಸದಿಂದ ತುಂಬಿಹೋಗಿದ್ದು ರಸ್ತೆಯನ್ನು ನುಂಗಿಹಾಕಿದೆ…
ಈ ಮೊದಲು ಕಾಪು ಪರಿಸರದ ಕಸವನ್ನು ಹಿಂದೂ ರುದ್ರಭೂಮಿ ಪ್ರದೇಶದಲ್ಲಿ ಹಾಕುತ್ತಿದ್ದರು ಆ ನಂತರ ಅ ಕಸವನ್ನು ಬೇರೆ ಕಡೆ ಸಾಗಿಸುತ್ತಿದ್ದರು.. ಆದರೆ ಕಳೆದ 10-20 ದಿನಗಳಿಂದ ಕಸವನ್ನು ಬೇರೆ ಕಡೆ ಸಾಗಿಸದೇ ಈ ಪ್ರದೇಶ ಕಸದಿಂದ ಗಬ್ಬೆದ್ದು ನಾರುತ್ತಿದೆ.
ಇನ್ನು ಒಂದೆರಡು ದಿನದಲ್ಲಿ ಕಸ ವಿಲೇವಾರಿ ಮಾಡದಿದ್ದಲ್ಲಿ ರುದ್ರಭೂಮಿಯ ಗೇಟು ಕಸದಿಂದ ಮುಚ್ಚಿಹೋಗಲಿದೆ. ಯಾರದರೂ ಸತ್ತು ಹೋದಲ್ಲಿ ಅವರ ಸಂಬಂಧಿಕರು ಮೊದಲು ಗೇಟಿನ ಬಳಿ ಇರುವ ಕಸವನ್ನು ತೆರವುಗೊಳಿಸಿ ಅ ನಂತರ ಅಂತ್ಯಸಂಸ್ಕಾರ ನೆರವೇರಿಸುವ ಪರಿಸ್ಥಿತಿ ಬಂದರೂ ಅಚ್ಚರಿಯಿಲ್ಲ..
ಈ ನಡುವೆ ಕಾಪು ಪ್ರದೇಶದಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದು ಇಲ್ಲಿ ನೀರು ನಿಂತು ಸಾಂಕ್ರಮಿಕ ಖಾಯಿಲೆ ಹರಡುವ ಭೀತಿ ಸ್ಥಳೀಯರನ್ನು ಕಾಡುತ್ತಿದೆ.
ಈ ಸ್ಥಳದಿಂದ 100 ಮೀಟರ್ ಅಂತರದಲ್ಲಿ ನಾಲ್ಕು ಶಾಲಾ-ಕಾಲೇಜುಗಳಿದ್ದು ಹಾಗೂ ಧಾರ್ಮಿಕ ಶ್ರದ್ಧಾಕೇಂದ್ರಗಳಿವೆ. ಕಾಂಗ್ರೇಸ್ ಆಡಳಿತ ಇರುವ ಕಾಪು ಪುರಸಭೆಯ ಸದಸ್ಯರು ಹಾಗೂ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸಾಂಕ್ರಮಿಕ ರೋಗ ಹರಡದಂತೆ ತಡೆಯಬೇಕಾಗಿ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
Discussion about this post