ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪನಿಯು ಶ್ರೀರಾಂಪುರ ವ್ಯಾಪ್ತಿಯಲ್ಲಿ ನಿರಂತರ ಜ್ಯೋತಿ ಕಾಮಗಾರಿಯ ಪ್ರಗತಿಯಲ್ಲಿರುವ್ಯದರಿಂದ ಆಲ್ಕೋಳ ವಿವಿ ಕೇಂದ್ರದಲ್ಲಿ ಎಂಎಫ್-13,19 ಮತ್ತು 12 ಮಾರ್ಗ ಹಾಗೂ ಮಾಚೇನಹಳ್ಳಿ 110/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ಲಿಂಕ್‌ಲೈನ್ ಮಾರ್ಗ ರಚಿಸುವ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಶಿವಮೊಗ್ಗದ ಹಲವು ಕಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವುಂಟಾಗಲಿದೆ.
ಡಿ.20ರ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ:
ಗೆಜ್ಜೇನಹಳ್ಳಿ, ದೇವಕಾತಿಕೊಪ್ಪ, ಬೋವಿಕಾಲೋನಿ, ಅಂಬೇಡ್ಕರ್‌ನಗರ, ಬೈರನಕೊಪ್ಪ, ಹನುಮಂತನಗರ, ವೆಟರ್ನರಿ ಕಾಲೇಜ್, ಕ್ರಷರ್ಸ್ ವ್ಯಾಪ್ತಿ, ಆಲ್ಕೋಳ ಎಸ್.ಎಲ್.ವಿ.ಲೇಔಟ್, ಜೆ.ಹೆಚ್.ಪಾಟೀಲ್ ಬಡಾವಣೆ, ಕೆ.ಎಸ್.ಆರ್.ಟಿ.ಸಿ. ಲೇಔಟ್, ಸಂಗೊಳ್ಳಿರಾಯಣ್ಣ ಲೇಔಟ್, ನರಸಮ್ಮ ಲೇಔಟ್, ಸಹ್ಯಾದ್ರಿನಗರ, ಆದರ್ಶನಗರ, ಪುಷ್ಪಗಿರಿ ಲೇಔಟ್, ಸೋಮಿನಕೊಪ್ಪ, ವಿಜಯಲಕ್ಷ್ಮೀ ಲೇಔಟ್, ಎಂ.ಎಂ.ಎಸ್.ಲೇಔಟ್, ಕೆ.ಎಚ್.ಬಿ.ಲೇಔಟ್, ಮಹಾಲಕ್ಷ್ಮೀ ಲೇಔಟ್, ಶಿವಸಾಯಿ ಕ್ಯಾಸ್ಟ್ ಫ್ಯಾಕ್ಟರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಡಿ.20ರ ಭಾನುವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 5ರವರೆಗೆ:
ಮಾಚೇನಹಳ್ಳಿ, ಬಿದರೆ, ನಿದಿಗೆ, ಓತಿಘಟ್ಟ, ಸಿದ್ದರಗುಡಿ, ಹಾರೇಕಟ್ಟೆ, ಸೋಗಾನೆ, ಆಚಾರಿಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ, ಶುಗರ್ ಕಾಲೋನಿ, ವೀರಭದ್ರಕಾಲೋನಿ, ಹಸೂಡಿ, ಹಸೂಡಿ ಫಾರಂ, ಯಲವಟ್ಟಿ ಮತ್ತು ಜಯಂತಿಗ್ರಾಮ, ಕಿಯೋನಿಕ್ಸ್ ಐಟಿ ಪಾರ್ಕ್, ಮಲ್ನಾಡ್ ಆಸ್ಪತ್ರೆ, ನಂಜುಂಡೇಶ್ವರ ರೈಸ್ ಮಿಲ್, ಕೆ.ಎಸ್.ಆರ್.ಪಿ.ಕಾಲೋನಿ, ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ, ನಿಧಿಗೆ ಕೈಗಾರಿಕಾ ಪ್ರದೇಶ ಹಾಗೂ ಸುತ್ತಮುತ್ತಲಿನ ಗ್ರಾಮಗಳು.
ಡಿ.21ರ ಸೋಮವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 5ರವರೆಗೆ:
ಶಿವಮೊಗ್ಗ ನಗರ ವ್ಯಾಪ್ತಿಯ ಹಲವೆಡೆ ಸ್ಮಾರ್ಟ್‌ಸಿಟಿ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಈ ಕೆಳಕಂಡ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಕೋಟೆ ಓಬಿಎಲ್ ರಸ್ತೆ, ಪೆನ್ಷನ್ ಮೊಹಲ್ಲಾ, ಕೋಟೆ ರಸ್ತೆ, ಸೈನ್ಸ್ ಕಾಲೇಜ್ ರಸ್ತೆ, ಅಪ್ಪಾಜಿ ರಾಜ್ ಕಾಂಪೌಂಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news















