ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕೋವಿಡ್19 ಮಹಾಮಾರಿ ವಿರುದ್ಧದ ಹೋರಾಟದ ಭಾಗವಾಗಿ ಲಸಿಕಾ ಅಭಿಯಾನದಲ್ಲಿ ತಾಲೂಕಿನ ಸರ್ಕಾರಿ ವೈದ್ಯಕೀಯ ಹಾಗೂ ವೈದ್ಯಕಿಯೇತರ ಸಿಬ್ಬಂದಿಗಳಿಗೆ ವ್ಯಾಕ್ಸಿನ್ ಮಾಡಲಾಯಿತು.
ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್, ಆಡಳಿತ ವೈದ್ಯಾಧಿಕಾರಿ ಡಾ. ದೇವಾನಂದ್, ಹಿರಿಯ ಪ್ರಧಾನ ಆರೋಗ್ಯ ಸಹಾಯಕ ಶ್ರೀ ನೀಲೇಶ್ ರಾಜ್, ವೈದ್ಯಾಧಿಕಾರಿ ಡಾ.ದೇವರಾಜ್, ಹಿರಿಯ ಆರೋಗ್ಯ ಸಹಾಯಕ ಹಾಲಸ್ವಾಮಿ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಎಲ್ಲ ವೈದ್ಯಾಧಿಕಾರಿಗಳು, ಕಿರಿಯ ಆರೋಗ್ಯ ಸಹಾಯಕರು ಆರೋಗ್ಯ ಕೇಂದ್ರದ ಎಲ್ಲ ಸಿಬ್ಬಂದಿಗಳಿಗೆ ಚುಚ್ಚುಮದ್ದು ಹಾಕಲಾಯಿತು.ಕಿರಿಯ ಫಾರ್ಮಸಿ ಅಧಿಕಾರಿಗಳಾದ ದತ್ತಾತ್ರೇಯ ಅವರಿಗೆ ಮೊದಲ ವ್ಯಾಕ್ಸಿನ್ ಹಾಕುವ ಮೂಲಕ ಇಂದಿನ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಆಸ್ಪತ್ರೆಯ ಸ್ಪಾಫ್ ನರ್ಸ್ ಡಯಾನಾ ಅವರು ಎಲ್ಲರಿಗೂ ವ್ಯಾಕ್ಸಿನ್ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post