ಇಸ್ಲಾಮಾಬಾದ್, ಸೆ.16: ಜಗತ್ತಿನ ಅತ್ಯಂತ ವೇಗದಿಂದ ಬೆಳವಣಿಗೆ ಹೊಂದುತ್ತಿರುವ ಪರಮಾಣು ಅಸ್ತ್ರ ಸಂಗ್ರಹವನ್ನು ಹೊಂದಿದೆ ಎಂದು ಊಹಿಸಲಾಗಿರುವ ಪಾಕಿಸ್ಥಾನ ಹೊಸ ಯುರೇನಿಯಂ ಸಂಸ್ಕರಣ ಸಂಕೀರ್ಣವೊಂದನ್ನು ನಿರ್ಮಿಸುತ್ತಿರಬಹುದು ಎಂದು ಪಾಶ್ಚಾತ್ಯ ರಕ್ಷಣಾ ತಜ್ಞರು ನಡೆಸಿರುವ ವಾಣಿಜ್ಯಿಕ ಉಪಗ್ರಹ ಚಿತ್ರಗಳ ವಿಶ್ಲೇಷಣೆಯಿಂದ ವ್ಯಕ್ತವಾಗಿದೆ.
ಇಸ್ಲಾಮಾಬಾದ್ನಿಂದ ಪೂರ್ವಕ್ಕೆ ಸುಮಾರು 30ಕಿ.ಮೀ.(ಮೈಲುಗಳು) ದೂರದಲ್ಲಿರುವ ಕಹುಟಾದಲ್ಲಿ ಹೊಸ ನಿವೇಶನವೊಂದರ ನಿರ್ಮಾಣವಾಗುತ್ತಿರುವುದನ್ನು ನೋಡಿದರೆ ಪಾಕಿಸ್ಥಾನ ತನ್ನ ಅಣ್ವಸ್ತ್ರ ಕೋಠಿಯನ್ನು ವೃದ್ಧಿಸಲು ಹೇಗೆ ಪ್ರಯತ್ನಿಸುತ್ತಿದೆ ಎಂಬುದರ ಹೊಸ ಪುರಾವೆ ಒದಗುತ್ತದೆ. ಇದು ಪಾಕಿಸ್ಥಾನ ಸೇರಲು ಬಯಸುತ್ತಿರುವ ಪರಮಾಣು ಪೂರೈಕೆದಾರರ ಒಕ್ಕೂಟದ ತತ್ವಗಳಿಗೆ ವಿರುದ್ಧವಾಗಿದೆ ಎಂದು ವಿಶ್ಲೇಷಣೆಯು ಹೇಳಿದೆ.
ಏರ್ಬಸ್ ಡಿಫೆನ್ಸ್ ಅಂಡ್ ಸ್ಪೇಸ್ 2015 ಸೆ.28 ಮತ್ತು 2016 ಏಪ್ರಿಲ್ 18ರಂದು ತೆಗೆದಿರುವ ಉಪಗ್ರಹ ಚಿತ್ರಗಳನ್ನು ಬಳಸಿ ಐಎಚ್ಎಸ್ ಜೇನ್ಸ್ ಗುಪ್ತಚರ ಸಮೀಕ್ಷೆಯಿಂದ ಈ ವಿಶ್ಲೇಷಣೆ ನಡೆದಿದೆ.
1998ರಲ್ಲಿ ನ್ನ ಮೊದಲ ಪರಮಾಣು ಪರೀಕ್ಷೆಗಳನ್ನು ನಡೆಸಿದ್ದ ಪಾಕಿಸ್ಥಾನ ಸುಮಾರು 120 ಪರಮಾಣು ಅಸ್ತ್ರಗಳನ್ನು ಹೊಂದಿದೆ ಎಂದು ನಂಬಲಾಗಿದೆ. ಇದು ಭಾರತ, ಇಸ್ರೇಲ್ ಮತ್ತು ಉತ್ತರ ಕೊರಿಯಾ ಹೊಂದಿರುವುದಕ್ಕಿಂತ ಅಕವಾಗಿದೆ.
ಕಾರ್ನಗಿ ಎಂಡೋಮೆಂಟ್ ಫಾರ್ ಇಂಟರ್ ನ್ಯಾಶನಲ್ ಪೀಸ್ ಮತ್ತು ದಿ ಸ್ಟಿಮ್ಸನ್ ಸೆಂಟರ್ನ ತಜ್ಞರು 2015ರಲ್ಲಿ ಬರೆದಿರುವ ವರದಿಯ ಪ್ರಕಾರ ಪಾಕಿಸ್ಥಾನ ತನ್ನ ಪರಮಾಣು ಅಸ್ತ್ರ ಸಂಗ್ರಹವನ್ನು ವರ್ಷಕ್ಕೆ 20 ಸಿಡಿತಲೆಗಳಂತೆ ಹೆಚ್ಚಿಸಬಹುದು ಮತ್ತು ಒಂದು ದಶಕದಲ್ಲಿ ಜಗತ್ತಿನ 3ನೇ ಅತ್ಯಂತ ದೊಡ್ಡ ಪರಮಾಣು ಅಸ್ತ್ರ ಸಂಗ್ರಹವನ್ನು ಹೊಂದಬಹುದಾಗಿದೆ.
ಕುತೂಹಲ ಕೆರಳಿಸಿರುವ ಪ್ರದೇಶವು ಅಂದಾಜು 1.2ಹೆಕ್ಟೇರ್ ವಿಸ್ತೀರ್ಣದ್ದಾಗಿದ್ದು ಖಾನ್ ರೀಸರ್ಚ್ ಲ್ಯಾಬೊರೇಟರೀಸ್(ಕೆಆರ್ಎಲ್)ನ ಸುರಕ್ಷಿತ ಪ್ರದೇಶದೊಳಗೆ, ಸಂಕೀರ್ಣದ ನೈಋತ್ಯ ಭಾಗದಲ್ಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ನಿವೇಶನದ ರಚನೆಯು ಯುರೋಪ್ನಲ್ಲಿ ಅನೇಕ ಪರಮಾಣು ಸ್ಥಾವರಗಳನ್ನು ನಿರ್ವಹಿಸುತ್ತಿರುವ ಪರಮಾಣು ಇಂಧನ ಕಂಪೆನಿ ಯುರೆಂಕೊ ನಿರ್ಮಿಸಿರುವ ಸೌಲಭ್ಯಗಳನ್ನು ಬಹುತೇಕವಾಗಿ ಹೋಲುತ್ತಿವೆ ಎಂದು ವರದಿ ಹೇಳಿದೆ.
Ramachandrapura Seer Hails PM Narendra Modi’s Leadership
Kalpa Media House | Honavar/Sagara | Jagadguru Shankaracharya Sri Raghaveshwara Bharathi Mahaswamiji of Ramachandrapura Math has extended his congratulations to...
Read moreDetails














