ಮುಂಬೈ:ಸೆ:17:: ಭಾರತೀಯ ನೌಕಾಪಡೆಗೆ ಮತ್ತಷ್ಟು ಆನೆಬಲ ಬಂದಿದೆ. ಮುಂಬೈನ ಮಝ್ಗಾಂವ್ ಬಂದರಿನಲ್ಲಿ ಮೊದಲ ಬಾರಿಗೆ ಮೋರ್ಮುಗಾವೋ ಯುದ್ಧನೌಕೆ ಸೇರ್ಪಡೆಯಾಗಿದೆ.
ಭಾರತೀಯ ನೌಕಾದಳದ ಕ್ಷಿಪಣಿ ನಾಶಕ ಯುದ್ಧ ನೌಕೆ ಐಎನ್ಎಸ್ ಮೋರ್ಮುಗಾವೋಗೆ ಮುಂಬೈನ ಮಝ್ ಗಾಂವ್ ಬಂದರಿನಲ್ಲಿ ಚಾಲನೆ ನೀಡಲಾಗಿದೆ. ಈ ಮೂಲಕ ಭಾರತೀಯ ನೌಕಪಡೆಗೆ ಮತ್ತೊಂದು ಹೊಸ ಯುದ್ಧನೌಕೆ ಸೇರ್ಪಡೆಯಾಗಿದೆ.
ಮಝಗಾಂವ್ ಡಾಕ್ ಲಿಮಿಟೆಡ್ (ಎಂಡಿಎಲ್) ನಿರ್ದೇಶಿತ ಕ್ಷಿಪಣಿ ನಾಶಕ ಈ ಯುದ್ಧ ನೌಕೆ ಐಎನ್ಎಸ್ ಮೋರ್ಮುಗಾವೋ ನ್ನು ತಯಾರಿಸಿದ್ದು, ಶೇ.60 ರಷ್ಟು ಸ್ವದೇಶೀ ನಿರ್ಮಿತವಾಗಿದೆ. ವಿನೂತನವಾದ ತಂತ್ರಜ್ಞಾನವನ್ನು ಹೊಂದಿದೆ. ರಹಸ್ಯವಾಗಿ ಕಾರ್ಯಚರಿಸುವ ವ್ಯವಸ್ಥೆ ಹೊಂದಿರುವ ಮೋರ್ಮುಗಾವೋ ಯುದ್ಧ ನೌಕೆಯನ್ನು 7,000 ಕೋಟಿ ವೆಚ್ಚದಲ್ಲಿ 15ಬಿ ಯೋಜನೆ ಅಡಿ ನಿರ್ಮಿಸಲಾಗಿದ್ದು ನೌಕೆಯು 2020ರ ವೇಳೆಗೆ ಸೇವೆಗೆ ಲಭ್ಯವಾಗಲಿದೆ.
ಮೋರ್ಮುಗಾವೋ ಭಾರತದಲ್ಲಿ ನಿರ್ಮಾಣವಾದ 2ನೇ ಕ್ಷಿಪಣಿ ನಾಶಕ ಯುದ್ಧನೌಕೆಯಾಗಿದೆ. ಒಟ್ಟು 29,700 ಕೋಟಿ ರೂಪಾಯಿ ವೆಚ್ಚದಲ್ಲಿ ನಾಲ್ಕು ನೂತನ ಯುದ್ಧನೌಕೆ ತಯಾರಾಗಲಿದೆ. ಮೋರ್ಮುಗಾವೋ ಯುದ್ಧನೌಕೆಯ ತೂಕ 7, 300 ಟನ್ಸ್ ಇದೆ. ಗಂಟೆಗೆ ಸುಮಾರು 56 ಕಿಲೋ ಮೀಟರ್ ವೇಗದಲ್ಲಿ ಚಲಿಸಲಿದ್ದು, ಕ್ಷಿಪಣಿ ನಾಶಕ ಸಾಮಥ್ರ್ಯ ಹೊಂದಿದೆ.
ಸ್ವಯಂಚಾಲಿತ ಕ್ಷಿಪಣಿ, ಆಕಾಶದಲ್ಲಿನ ಗುರಿಯನ್ನು ಹೊಡೆದುರುಳಿಸುವ ಕ್ಷಿಪಣಿಗಳು ಈ ಯುದ್ಧನೌಕೆಯಲ್ಲಿರಲಿವೆ. ಮೋರ್ಮುಗಾವೋ ಯುದ್ಧನೌಕೆಯಲ್ಲಿ 50ಮಂದಿ ಅಧಿಕಾರಿಗಳು ಹಾಗೂ 250 ಮಂದಿ ನೌಕಾ ಸಿಬ್ಬಂದಿಗಳಿರುತ್ತಾರೆ. ಇದು ಸಮುದ್ರದಲ್ಲಿ ಸುಮಾರು 4 ಸಾವಿರ ನಾಟಿಕಲ್ ಮೈಲ್ ದೂರದಲ್ಲಿ ಕಾರ್ಯಚರಿಸಲಿದೆ.
ಅತ್ಯಾಧುನಿಕ ತಂತ್ರಜ್ಞಾನದ ಮೋರ್ಮುಗಾವೋ ಯುದ್ಧನೌಕೆಯಲ್ಲಿ ಇಸ್ರೇಲ್ ತಂತ್ರಜ್ಞಾನದ ಸೂಕ್ಷ್ಮ ನಿಗಾ ಕಾರ್ಯಾಚರಣೆ ವ್ಯವಸ್ಥೆ ಇದೆ, ಅಪಾಯಕಾರಿ ಮುನ್ಸೂಚನೆ ನೀಡುವ ರಾಡಾರ್(ಎಂಎಫ್ ಸ್ಟಾರ್. ಅಷ್ಟೇ ಅಲ್ಲ ಸುಮಾರು 100 ಕಿಲೋ ಮೀಟರ್ ದೂರದವರೆಗೆ ಗುರಿ ಇಟ್ಟು ನಾಶ ಮಾಡುವ ಸಾಮಥ್ರ್ಯ ಹೊಂದಿದೆ ಎಂದು ನೌಕಾಪಡೆಯ ಮೂಲಗಳು ತಿಳಿಸಿವೆ.
163.2 ಮೀಟರ್ ಉದ್ದ, 7, 300 ಟನ್ ತೂಕವಿರುವ ಐಎನ್ಎಸ್ ಮೋರ್ಮುಗಾವೋ ಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ನೌಕಾ ಪಡೆಯ ಹಲವು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
Discussion about this post